ಬಾಲಮಂದಿರ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
Sri Krishna Janmashtami Celebration at Balamandira School
ಲೋಕದರ್ಶನ ವರದಿ
ಕಾರವಾರ 05 : ಬಾಲಮಂದಿರ ಪ್ರೌಢಶಾಲೆಯಲ್ಲಿ ಬಹುರೂಪಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಶೃದ್ಧಾ-ಭಕ್ತಯಿಂದ ಆಚರಿಸಲಾಯಿತು. ಬಾಲಮಂದಿರ ಬಾಲವಾಡಿ, ಎಲ್.ಕೆ.ಜಿ. ಎಚ್.ಕೆ.ಜಿ. ಮತ್ತು ತರಗತಿ-1 ರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಏರಿ್ಡಸಿದ ಬಹುರೂಪಿ ಶ್ರೀಕೃಷ್ಣ ಛದ್ಮವೇಶ ಸ್ಪರ್ಧೆ ಯಲ್ಲಿ ಸುಮಾರು 150 ಪುಟಾಣಿ ಮಕ್ಕಳು ವಿವಿಧ ಕೃಷ್ಣವೇಷ ಧರಿಸಿ ಎಲ್ಲರನ್ನೂ ಆಧ್ಯಾತ್ಮ ಲೋಕಕ್ಕೆ ಕೊಂಡೊಯ್ದರು. ಅತ್ಯುತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಿ ಪುರಸ್ಕರಿಸಲಾಯಿತು, ಕಾರ್ಯಕ್ರಮದಲ್ಲಿ ನಾಗವೇಣಿ ಹೆಗಡೆ ಮತ್ತು ವಿಜಯೇಂದ್ರ - ಪೂನಂ ರವರು ನಡೆಸಿಕೊಟ್ಟ ಶ್ರೀಕೃಷ್ಣನ ಲೀಲೆಗೆ ಸಂಬಂಧಿಸಿದ ಮಕ್ಕಳ ನೃತ್ಯರೂಪಕಗಳು ಮತ್ತು ಗಣಪತಿ ಹೆಗಡೆ ರವರು ನಡೆಸಿಕೊಟ್ಟ ಮಕ್ಕಳ ಭಜನಾ ಕಾರ್ಯಕ್ರಮ ನೆರವೇರಿದವು.
ಕಾರವಾರ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಅನಿರುದ್ಧ ಹಳದಿಪುರಕರ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಾಲಮಂದಿರ ಪ್ರೌಢಶಾಲೆಯ ಪ್ರಾಂಶುಪಾಲರಾದ ಅಂಜಲಿ ಮಾನೆ ಸ್ವಾಗತಿಸಿದರು. ಭಾಗ್ಯವತಿ ಭಟ್‌ಕುರ್ಸೆ ಅತಿಥಿ ಪರಿಚಯ ಮಾಡಿದರು, ಸವಿತಾ ಗುನಗಿ ಕೃಷ್ಣಾಷ್ಠಮಿ ಆಚರಣೆ ಕುರಿತು ಮಾತನಾಡಿದರು. ನಜೀರುದ್ಧೀನ ಸೈಯದ್ ಬಹುಮಾನ ವಿಜೇತರ ಹೆಸರು ಓದಿದರು. ಸೋನಿಯಾ ತೆಂಡೂಲ್ಕರ ವಂದನಾರೆ್ಣ ಸಲ್ಲಿಸಿದರು. ಮೇಧಾ ಪೆಡ್ನೇಕರ ಹಾಗೂ ನೀಫಾ ಡಿ’ಕೊಸ್ಟಾ ಕಾರ್ಯಕ್ರಮ ನಿರೂಪಣೆ ಮಾಡಿದರು. ನಿರ್ಣಾಯಕರಾಗಿ ಹಿಂದೂ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕರಾದ ಅರುಣ ಪಿ. ರಾಣೆ ಹಾಗೂ ಸಂಗೀತ ಶಿಕ್ಷಕಿ ಸುಜಾತಾ ವಿ. ಪಾತರ್‌ಫೇಕರ್ ನಿರ್ಣಾಯಕರಾಗಿ ಆಗಮಿಸಿದ್ದರು. ಸುಮತಿದಾಮ್ಲೆ ಪ್ರೌಢಶಾಲೆಯ ಶಿಕ್ಷಕ ಸಂತೋಷ್ ಶೇಟ್ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 