ಕ್ರೀಡೆ ಜವಾಬ್ದಾರಿ ಮನೋಭಾವವನ್ನು ಬೆಳೆಸುತ್ತದೆ : ಶ್ರೀಕಾಂತ ದುಂಡಿಗೌಡ್ರ

ಕ್ರೀಡೆ ಜವಾಬ್ದಾರಿ ಮನೋಭಾವವನ್ನು ಬೆಳೆಸುತ್ತದೆ : ಶ್ರೀಕಾಂತ ದುಂಡಿಗೌಡ್ರ Sports foster a sense of responsibility: Srikanth Dundigaoudra

ಶಿಗ್ಗಾವಿ  02: ಸ್ನೇಹ, ಪರಸ್ಪರ ಗೌರವ,ನಾಯಕತ್ವದ ಗುಣದ ಜೊತೆಗೆ ಸಾಮಾಜಿಕ ಸಂಪರ್ಕ ಸಮಯಪಾಲನೆ, ನಿಯಮ ಪಾಲನೆ ಹಾಗೂ ಜವಾಬ್ದಾರಿಯ ಮನೋಭಾವವನ್ನು ಕ್ರೀಡೆ ಬೆಳೆಸುತ್ತದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.   ತಾಲೂಕಿನ ಕಬನೂರ ಗ್ರಾಮದಲ್ಲಿ ನಡೆದ 26-27 ನೇ ಸಾಲಿನ ಬನ್ನೂರ ಸಮೂಹ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರುಕ್ರೀಡೆ ಮನುಷ್ಯನ ದೇಹವನ್ನು ಸದೃಢವಾಗಿರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಒತ್ತಡ, ಆತಂಕ ಮತ್ತು ಮಾನಸಿಕ ದಣಿವನ್ನು ಕಡಿಮೆ ಮಾಡುತ್ತದೆ.

ಮತ್ತು ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಗೆಲುವು-ಸೋಲನ್ನು ಸಮನಾಗಿ ಸ್ವೀಕರಿಸಬೇಕು ಎಂದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಹಿರಿಯ ಕನ್ನಡ ಶಾಲೆಯ ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ಈರಣ್ಣ ಚಿಂಚಲಿ ವಹಿಸಿಕೊಂಡಿದ್ದರು.ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಿ.ಟಿ.ಇನಾಮತಿ ಕ್ರೀಡಾ ಜ್ಯೋತಿ ಬೆಳಗಿಸಿದರು.ಮುಖ್ಯೋಪಾಧ್ಯಾಯ ಎಸ್‌.ಎಫ್‌. ತಳವಾರ, ಗಂಗಾಧರ ಗೊರವರ, ಧರ್ಮರಾಜ ಬಿಂದಲಗಿ,ಡಾ.ಬಸವರಾಜ ದೊಡ್ಡಮನಿ, ಚನ್ನಪ್ಪ ಗುಂಜಳ, ವಿರೂಪಾಕ್ಷಪ್ಪ ಗುಂಡಣ್ಣವರ, ಗದಿಗೆಪ್ಪ ಗುಂಡಣ್ಣವರ,ಬಸವರಾಜ ಜಕ್ಕಣ್ಣವರ, ನಾಗಪ್ಪ ಚಿಂಚಲಿ,ಕರಬಸಪ್ಪ ಈಟಿ, ರಮೇಶ ಗೊರವರ, ಗಂಗಾಧರ ಗುಂಡಣ್ಣವರ, ಶಿವಾನಂದ ಓಲೇಕಾರ, ಅಶೋಕ ಚಿಗಳ್ಳಿ ಸೇರಿದಂತೆ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.ಸಹ ಶಿಕ್ಷಕ ಬಸವರಾಜ ಗದ್ದಿಕಾರ್ಯಕ್ರಮ ನಿರೂಪಿಸಿದರು.