ರಾಣೆಬೆನ್ನೂರಲ್ಲಿ ವಿಶ್ವಪರಿವರ್ತನೆಗೆ ಆಧ್ಯಾತ್ಮಿಕ ಜಾಗೃತಿ : ಸಂತ ಸಮ್ಮೇಳನ

ರಾಣೆಬೆನ್ನೂರಲ್ಲಿ ವಿಶ್ವಪರಿವರ್ತನೆಗೆ ಆಧ್ಯಾತ್ಮಿಕ ಜಾಗೃತಿ : ಸಂತ ಸಮ್ಮೇಳನ   Spiritual awakening for world transformation in Ranebennur: Saints' Conference

ರಾಣೆಬೆನ್ನೂರು : ನವ ದಶಕೋತ್ಸವದ ಸಂಭ್ರಮದಲ್ಲಿ ಸಾಗುತ್ತಿರುವ  ಬ್ರಹ್ಮ ಕುಮಾರೀಸ್ ವತಿಯಿಂದ, ವಾಣಿಜ್ಯ  ನಗರ ರಾಣೆಬೆನ್ನೂರಲ್ಲಿ ಏಪ್ರಿಲ್ 17, 2026 ರಂದು ಶುಕ್ರವಾರ ಮುಂಜಾನೆ 9:30 ಗಂಟೆಗೆ, ಪಿಬಿ ರಸ್ತೆಯ ದೈವಜ್ಞ ಸಮುದಾಯ ಭವನದಲ್ಲಿ ವಿಶ್ವ ಪರಿವರ್ತನೆಗೆ ವಿಶ್ವ ಆಧ್ಯಾತ್ಮಿಕ ಜಾಗೃತಿ - ಮಹಾಸಂತ ಸಮ್ಮೇಳನ ಆಧ್ಯಾತ್ಮಿಕ ಕಾರ್ಯಕ್ರಮವು ಆಯೋಜಿಸಲಾಗಿದೆ ಎಂದು ಸ್ಥಳೀಯ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ. ಕೆ. ಮಾಲತಿ ಅಕ್ಕನವರು ಹೇಳಿದರು. ಅವರು ಮಂಗಳವಾರ ವ್ಹಿ. ವ್ಹಿ ಕೇಂದ್ರದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ಸಂತ ಸಮಾವೇಶ ಪ್ರಥಮ ಬಾರಿಗೆ ಆಯೋಜನೆಗೊಂಡಿದ್ದು, ಎಲ್ಲವೂ  ಸಂಕಲ್ಪ ಭಾಗವಾಗಿದೆ ಅಲ್ಲದೆ ನಗರ ಮತ್ತು ತಾಲೂಕಿನ ಸಾಧಕ ಮತ್ತು ಸಾಧಕಿಯರ ಸೌಭಾಗ್ಯದ ಜೊತೆಗೆ ಸಾರ್ವಜನಿಕರಿಗೆ ಮಾನಸಿಕ ಶಾಂತಿಗಾಗಿ ಆಧ್ಯಾತ್ಮಿಕ ಜಾಗೃತಿ ಕಾರ್ಯಕ್ರಮ ಇದಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.

ಸಂತ ಸಮಾರಾಧನೆಯಲ್ಲಿ ಹುಬ್ಬಳ್ಳಿಯ ಡಾ. ಬಸವರಾಜ ರಾಜಋಷಿ, ರಾಜಸ್ಥಾನದ ಬ್ರಹ್ಮ ಕುಮಾರ ರಾಜನಾಥಜಿ, ಅಬುರಾಜ್ ಹಿರಿಯ ಶಿಕ್ಷಕ ಸುರೇಶ್ ಜಿ, ಮತ್ತು ನಗರ ತಾಲೂಕಿನ ವಿವಿಧ ಮಠ ಪೀಠಗಳ ಶ್ರೀಗಳವರು ತಮ್ಮ ದಿವ್ಯ ದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಶಾಸಕ ಪ್ರಕಾಶ್ ಕೋಳಿವಾಡ ಸಂತ ಸಮಾವೇಶ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ, ಆರ್‌.ಎಚ್‌. ಭಗವಾನ್, ಪೌರಾಯುಕ್ತ ಎಫ್‌. ಐ. ಇಂಗಳಗಿ, ದಾವಣಗೆರೆ ಕೇಂದ್ರದ ಬಿ.ಕೆ. ಲೀಲಾಜಿ, ಕೂಡ್ಲಿಗಿಯ ಬಿ.ಕೆ.ಚಂದ್ರಕಲಾ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು ಮಾಧ್ಯಮಗೋಷ್ಠಿಯಲ್ಲಿ, ಬಿ.ಕೆ ಕಸ್ತೂರಿ ಅಕ್ಕ, ದಾಂಡೇಲಿ ಬಿ.ಕೆ. ಗೀತಾ ಅಕ್ಕ, ಬಿ.ಕೆ.ವರ್ಷ, ಕೆ. ಸಿ. ಕೋಮಲಾಚಾರ್, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಸಂತೋಷ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.