ಸೆ.8ರಂದು ಸುಳ್ಳ ವಿಶೇಷ ಗ್ರಾಮ ಸಭೆ

ಸೆ.8ರಂದು ಸುಳ್ಳ ವಿಶೇಷ ಗ್ರಾಮ ಸಭೆ Special Grama Sabha in Sullia on September 8

ಲೋಕದರ್ಶನ ವರದಿ

ಹುಬ್ಬಳ್ಳಿ 03: ಮಹಾತ್ಮ ಗಾಂಧಿ ಸುಳ್ಳ ಗ್ರಾಮ ಪಂಚಾಯತ ಆಡಳಿತಾಧಿಕಾರಿ ಏಜಾಜ ಅಹ್ಮದ ನಾಯ್ಕರ ಅವರ ಅಧ್ಯಕ್ಷತೆಯಲ್ಲಿ 2026-27 ನೇ ಸಾಲಿನ ಸುಳ್ಳ ಗ್ರಾಮದ ವಿಶೇಷ ಗ್ರಾಮ ಸಭೆಯನ್ನು ಸೆಪ್ಟೆಂಬರ್ 8 ರಂದು ಸುಳ್ಳ ಹಳೆ ಗ್ರಾಮ ಪಂಚಾಯತನಲ್ಲಿ ಆಯೋಜಿಸಲಾಗಿದೆ. ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಇಲಾಖಾವಾರು ಚರ್ಚೆ ಮತ್ತು ಕಾಮಗಾರಿಗಳ ಆಯ್ಕೆ, ಯೋಜನೆಗಳ ಕ್ರಿಯಾ ಯೋಜನೆ ತಯಾರಿಕೆ ಹಾಗೂ ಫಲಾನುಭವಿಗಳ ಆಯ್ಕೆ, ಸಾರ್ವಜನಿಕರ ಕೊಂದುಕೊರತೆಗಳು ಹಾಗೂ ಇತರ ವಿಷಯಗಳನ್ನು ಗ್ರಾಮ ಸಭೆಯಲ್ಲಿ ಚರ್ಚಿಸಲಾಗುವುದು. ಗ್ರಾಮ ಸಭೆಗೆ ಸುಳ್ಳ ಗ್ರಾಮದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸುಳ್ಳ ಗ್ರಾಮ ಪಂಚಾಯತ ಪ್ರಕಟಣೆಯಲ್ಲಿ ತಿಳಿಸಿದೆ.