ಅಮೋಘ ಚಲನಚಿತ್ರದ ಹಾಡು ಬಿಡುಗಡೆ
Song from the movie 'Amogha' released.
ಲೋಕದರ್ಶನ ವರದಿ
ಮೈಸೂರ ೨೪ : ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿನ ಆರ್ಟ್ ಇವೆಂಟ್ಸ್ ಮ್ಯಾನೇಜ್‌ಮೆಂಟ್ ಅವರ ಆರ್ಟ್ ಫಿಲಿಂಸ್ ವತಿಯಿಂದ ಗಡಿನಾಡಹುಲಿ ಫಿಲ್ಮ್ ಬ್ಯಾನರಿನಲ್ಲಿ ‘ಅಮೋಘ’ ಹೊಸ ಕನ್ನಡ ಚಲನಚಿತ್ರದ ‘ಹೊತ್ತಳು ನನ್ನ ಭಾರ’ ತಾಯಿ ಕುರಿತಾದ ಹಾಡು ಬಿಡುಗಡೆ ಮಾಡಲಾಯಿತು.
ಮೈಸೂರು, ಬೆಂಗಳೂರು ಮಡಿಕೇರಿ ಮತ್ತು ಮಂಗಳೂರು ಸುತ್ತಮುತ್ತ ಚಲನಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ನಾಲ್ಕು ಹಾಡುಗಳು, ಒಂದು ಸಾಹಸ ದೃಶ್ಯ ಕೂಡ ಚಿತ್ರದಲ್ಲಿದೆ. ಗಡಿನಾಡಹುಲಿ ಪುನೀತ್ ಕುಮಾರ್ ಕೆ.ಎನ್ ನಿರ್ದೇಶಿಸಿ, ನಿರ್ಮಾಣದಲ್ಲಿ ಲಿಖಿತಕುಮಾರ್ ಶ್ರೀಧರ್ ಪ್ರಸ್ತುತಪಡಿಸಿದ ‘ಹೊತ್ತಳು ನನ್ನ ಭಾರ’ ಇದೀಗ ಎಲ್ಲಡೆ ಮೆಚ್ಚುಗೆ ಗಳಿಸಿದೆ. ತಾರಾಗಣದಲ್ಲಿ ಮಿಶೆಲ್ ಸೆಕ್ವೇರಾ, ಗಡಿನಾಡಹುಲಿ ಪುನಿತ ಕುಮಾರ, ಕೆ.ಎನ್.ರೇಷ್ಮಾ, ಪ್ರತಿಭಾ ಶೆಟ್ಟಿ, ಈಶ್ವರ ಶೆಟ್ಟಿ, ಸಂತೋಷ ಗೋಪಾಲ ರೆಡ್ಡಿ, ಧನುಷ್ ಎಸ್.ಕೆ.ಮೈಸೂರ, ಕಲ್ಕಿ, ಮಾಸ್ಟರ್ ಪ್ರೀತಮ್, ಮಾಸ್ಟರ್ ಲಿಶಾಶ್ರೀ, ಶ್ರೀನಿವಾಸ ಮೂರ್ತಿ, ಶ್ವೇತ ಲಿಖಿತ್ ಮೊದಲಾದವರಿದ್ದಾರೆ.
ಹರ್ಷ ಶ್ರೀಧರ್ ಛಾಯಾಗ್ರಹಣದ ಜೊತೆಗೆ ಸಂಕಲನವಿದೆ, ಧನುಷ್ ಡಿ.ಕೆ.ಎಸ್ ಸಂಗೀತ ಸಂಯೋಜನೆ, ಭವತಾರಣಿ ಕೆ.ಎನ್ ಹಿನ್ನೆಲೆಗಾಯಕರಾಗಿದ್ದಾರೆ. ಎಸ್ ಎಫ್ ಎಕ್ಸ್ ಮನುರೈ, ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ಎಂ ರಾವ್ ಸ್ಟುಡಿಯೋ ಮೈಸೂರು, ಕಲಾನಿರ್ದೇಶನ ಚಂದÀನಕುಮಾರ್, ಪಿಆರ್ ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹ ನಿರ್ದೇಶನ ವಸಂತಕುಮಾರ ಎಸ್.ಎನ್ ಅವರದಿದೆ, ಅತ್ಯಂತ ಭಾವಪೂರ್ಣವಾದ ತಾಯಿಯ ಬಲಿದಾನ ಮತ್ತು ತ್ಯಾಗವನ್ನು ಬಿಂಬಿಸುವ ಈ ಹಾಡನ್ನು ಆರ್ಟ್ ಫಿಲಿಂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು ವೀಕ್ಷಕರು ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 