ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಹಿಸಂಗ್ರಹ ಹಾಗೂ ಸಾಹಿತ್ಯ ಮಾರಾಟ, ಸೂಕ್ತಿ ಪ್ರದರ್ಶನ
Signature collection, literature sale, and poetry exhibition as part of International Women's Day
ಲೋಕದರ್ಶನ ವರದಿ
ವಿಜಯಪುರ 08 : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಮಾರ್ಚ್ 8 2026 ರಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವಿಜಯಪುರ ಜಿಲ್ಲಾ ಘಟಕವು ಗಾಂಧಿ ವೃತ್ತದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಆಗ್ರಹಿಸಿ ಸಹಿ ಸಂಗ್ರಹ ಮತ್ತು ಸಾಹಿತ್ಯ ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಮಹಿಳೆಯರು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆಜ್ಞಾನ ಪ್ರಪಂಚಕ್ಕೆತಮ್ಮದೇಆದಕೊಡುಗೆ ನೀಡಿದ್ದಾರೆ, ಅದನ್ನೆಲ್ಲ ಲೆಕ್ಕಿಸದೆ ಬರಿ ಹೆಣ್ಣು ಭೋಗದ ವಸ್ತು ಎಂಬಂತೆ ಬಿತ್ತರಿಸಲಾಗುತ್ತಿದೆ. ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಊಳಿಗಮಾನ್ಯ ಮೌಲ್ಯಗಳು ಅವಳನ್ನು ದಾಸ್ಯದಲ್ಲಿರಿಸಿದರೆ, ಇಂದಿನ ಕೊಳೆತ ಸಾಂಸ್ಕೃತಿಕ ವ್ಯವಸ್ಥೆಯಿಂದಾಗಿ ಅಶ್ಲೀಲ ಸಿನಿಮಾ ಸಾಹಿತ್ಯ, ಜಾಹೀರಾತುಗಳು, ಪೊ ಸೈಟ್ಗಳು , ಮದ್ಯ ಮಾದಕ ವಸ್ತುಗಳ ಹಾವಳಿಯಿಂದಾಗಿ ಸಾಮಾಜಿಕ ವಾತಾವರಣ ಕಲುಷಿತಗೊಂಡು ಅವಳ ಜೀವ -ಜೀವನದ ಮೇಲೆ ನಿರಂತರವಾಗಿ ದಾಳಿಗಳು ಹೆಚ್ಚುತ್ತಿವೆ.
ಮಹಿಳೆಯರ ಜ್ವಲಂತ ಸಮಸ್ಯೆಗಳಾದ ಬಾಲ್ಯ ವಿವಾಹ , ಸ್ತ್ರೀ ಭ್ರೂಣ ಹತ್ಯೆ ,ವರದಕ್ಷಣೆ ಕೊಲೆ,ಲಿಂಗ ತಾರತಮ್ಯ, ಅಪೌಷ್ಟಿಕತೆ, ಅಭದ್ರತೆ ಹಾಗೂ ಕೌಟುಂಬಿಕ ದೌರ್ಜನ್ಯ, ಉದ್ಯೋಗಸ್ಥ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿಎಲ್ಲ ಸ್ಥರದ ಮಹಿಳೆಯರನ್ನು ಸಂಘಟಿಸಲಾಗುತ್ತಿದೆ. ರಾಜ್ಯದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವಅತ್ಯಾಚಾರ ಗುಂಪು ಅತ್ಯಾಚಾರಗಳು ಕ್ರೂರ ದಾಳಿಗಳು ಜನತೆಯನ್ನು ಆಕ್ರೋಶ ಭರಿತರನ್ನಾಗಿಸಿವೆ . ಕರ್ನಾಟಕದಲ್ಲಿ ಅತ್ಯಾಚಾರ- ಗುಂಪು ಅತ್ಯಾಚಾರದ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗುತ್ತಲಿವೆ. 2023ರಲ್ಲಿ 600, 2024ರಲ್ಲಿ 739 ಕೇಸುಗಳು ಹಾಗೂ 2025 ಜುಲೈವರೆಗಿನ ಕೇವಲ ಏಳು ತಿಂಗಳಲ್ಲಿ 547 ಪ್ರಕರಣಗಳು ದಾಖಲಾಗಿವೆ ಅಲ್ಲದೆ ರಾಜ್ಯದಲ್ಲಿ 4 ತಿಂಗಳಲ್ಲಿಯೇ 979 ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಜಧಾನಿಯಾದ ಬೆಂಗಳೂರಲ್ಲಿ ಅತಿ ಹೆಚ್ಚು ಎಂದು ಪೊಲೀಸ್ ಇಲಾಖೆ ಬಹಿರಂಗಪಡಿಸಿದೆ.
ಇನ್ನು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮಿತಿಮೀರುತ್ತಿವೆ, 2025 ರ ವರದಿಯ ಪ್ರಕಾರ ಕಳೆದ ಎರಡು ವರ್ಷದಲ್ಲಿ 43000 ಕ್ಕೂ ಅಧಿಕದೌರ್ಜನ್ಯ ಪ್ರಕರಣಗಳು ದಾಖಲಾಗಿವೆ, ಹಾಗೂ ಆಡಿ ನಲಿಯಬೇಕಿದ್ದ ಎಳೆಯ ವಯಸ್ಸಿನ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುವ ಸಂಖ್ಯೆ ಬಾರಿ ಹೆಚ್ಚಳವಾಗಿದೆ. ಎರಡು ವರ್ಷದಲ್ಲಿ ಶೇಕಡಾ 26 ರಷ್ಟು ಪೊಕ್ಸೊ ಕೇಸುಗಳು ಹೆಚ್ಚಾಗಿದೆಎಂದು ವರದಿಯಾಗಿದೆ ಅದರಂತೆ ದಾಖಲಾಗದ ಅರ್ಧದಷ್ಟು ಪ್ರಕರಣಗಳು ಖುಲಾಸೆಯಾಗುತ್ತಿವೆ, 2022 ರಲ್ಲಿದಾಖಲಾದ 3209 ಪ್ರಕರಣದಲ್ಲಿ 1562 ಪ್ರಕರಣ ಖುಲಾಸೆಯಾಗಿದೆ, 1224 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದರೆ ಕೇವಲ 186 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ.ಇಂತಹ ಪ್ರಕರಣಗಳಲ್ಲಿ ಶಿಕ್ಷಕರು, ಪ್ರಭಾವಿ ರಾಜಕೀಯ ನಾಯಕರು, ಮಠಾಧೀಶರಂಥವರು ಭಾಗಿಯಾಗಿರುವುದು ನಾಡಿನ ದುರಂತವೇ ಸರಿ.
ಅದೇರೀತಿಕರ್ನಾಟಕದಲ್ಲಿಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆಆತಂಕಕಾರಿಯಾಗಿ ಬೆಳವಣಿಗೆ ಕಂಡಿದೆ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಆರ್ ಸಿಎಚ್ ಕೋಶದ ಅಂಕಿ ಅಂಶಗಳ ಪ್ರಕಾರಕರ್ನಾಟಕಏಪ್ರಿಲ್ 2024 ಮತ್ತು ಫೆಬ್ರುವರಿ 2025ರ ನಡುವೆಅಂದರೆ 10 ತಿಂಗಳಲ್ಲಿ 25,436 ಹದಿಹರೆಯದವರಗರ್ಭಧಾರಣೆಯನ್ನು ವರದಿ ಮಾಡಿದೆ. ಹದಿಹರೆಯದ ವರಗರ್ಭಧಾರಣೆ ಹೆಚ್ಚು ವರದಿಯಾದ ಜಿಲ್ಲೆಗಳಲ್ಲಿ ವಿಜಯಪುರ 3 ನೇ ಸ್ಥಾನ ದಲ್ಲಿ, ಇದುದಾಖಲಾದ ಅಂಕಿ ಅಂಶಗಳಾದರೆ ಕೌಟುಂಬಿಕ ಗೌರವಕ್ಕೆ ಧಕ್ಕೆ ಉಂಟಾಗಬಹುದು ಎಂಬ ಕಾರಣಗಳಿಗಾಗಿ ಹಲವಾರು ದೂರುಗಳು ದಾಖಲಾಗದೆ ಉಳಿದಿರುವ ಎಷ್ಟೋ ಪ್ರಕರಣಗಳು ಇನ್ನೂಇವೆ.
ಇತ್ತಿಚೆಗೆ 340 ವರದಕ್ಷಣೆ ಸಾವುಗಳು ವರದಿಯಾಗಿವೆ. ಹಳೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸ್ತ್ರೀ ಬ್ರೂಣ ಹತ್ಯೆ, ಮರ್ಯಾದೆ ಹತ್ಯೆ ಅಂತಹ ಪ್ರಕರಣಗಳಿಗೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಎಲ್ಲ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಿ ಜೊತೆಗೆ ಶಿಕ್ಷಣ ಉದ್ಯೋಗಆರೋಗ್ಯದಂತ ಮೂಲ ಸೌಲಭ್ಯಗಳು ದೊರಕಬೇಕಾಗಿದೆ. ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವುದರೊಂದಿಗೆ ಹೆಣ್ಣು ಮಕ್ಕಳ ಆತ್ಮರಕ್ಷಣಾಕೌಶಲ್ಯತರಬೇತಿ (ಜೂಡೊ-ಕರಾಟೆ) ಶಾಲಾ ಕಾಲೇಜುಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು ಮತ್ತು ಮಹಿಳೆಯರ ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿಆಂತರಿಕದೂರು ಸಮಿತಿಗಳನ್ನು ರಚಿಸಬೇಕು.
ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿಕೊಠಡಿ , ಮಾಧ್ಯಮದಲ್ಲಿ ಬರುವಂತಹ ಅಶ್ಲೀಲತೆಯನ್ನು ಸಂಪೂರ್ಣವಾಗಿತಡೆಗಟ್ಟಬೇಕುಎಂದು ನಡೆಯುತ್ತಿರು ಸಹಿಸಂಗ್ರಹಣೆಗೆ ವಿಜಯಪುರಜನತೆ ಸಂಪೂರ್ಣವಾಗಿ ಬೆಂಬಲಿಸಿ ತಮ್ಮ ಸಹಿ ನೀಡುವ ಮೂಲಕ ಹಾಗೂ ಉತ್ತಮ ಸಾಹಿತ್ಯವನ್ನು ತೆಗೆದುಕೊಳ್ಳುವ ಮೂಲಕ ಬೆಂಬಲ ನೀಡಿದರು. ಈ ಅಭಿಯಾನದಲ್ಲಿ ಎಐಎಂ ಎಸ್‌ಎಸ್ ಜಿಲ್ಲಾಅಧ್ಯಕ್ಷರಾದ ಗೀತಾ ಎಚ್‌ರವರು ಜಿಲ್ಲಾ ಕಾರ್ಯದರ್ಶಿಗಳಾದ ಶಿವಬಾಳಮ್ಮ ಕೊಂಡಗೂಳಿ ಅವರುಜಂಟಿ ಕಾರ್ಯದರ್ಶಿಗಳಾದ ಶಿವರಂಜಿನಿ ರವರು ಸದಸ್ಯರಾದ ಜಬಿನಾ ಅಥಣಿ ಅವರು ಲಕ್ಷ್ಮಿ ಅವರು ಮುಂತಾದ ನೂರಾರುಜನ ಸಾರ್ವಜನಿಕರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 