ನಗರದ ಬಸವ ಭವನದಲ್ಲಿ ದಿ,ಸಿದ್ದು ಮೀಶಿ ಅವರ ನುಡಿ ನಮನ ಕಾರ್ಯಕ್ರಮ

ನಗರದ ಬಸವ ಭವನದಲ್ಲಿ ದಿ,ಸಿದ್ದು ಮೀಶಿ ಅವರ ನುಡಿ ನಮನ ಕಾರ್ಯಕ್ರಮ Siddu Mishi's speech program was held at Basava Bhavan in the city

ಜಮಖಂಡಿ  28 :ದಲಿತ ಸಮಾಜದ ನಾಯಕ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ದಿ,ಸಿದ್ದು ಮೀಶಿ ಅವರ ಹೃದಯಘಾತದಿಂದ ನಿಧನ ಹೊಂದಿದು ಕಾಂಗ್ರೇಸ್ ಪಕ್ಷಕ್ಕೆ ತುಂಬಲಾದಷ್ಟು ನಷ್ಟವಾಗಿದೆ. ಅವರ ನೆನಪಿಗಾಗಿ ನಗರದ ಅಂಬೇಡ್ಕರ್ ಸರ್ಕಲ್‌ದಿಂದ ಬಸವೇಶ್ವರ ಸರ್ಕಲ್‌ವರಗೆ ಸಿದ್ದು ಮೀಶಿ ರಸ್ತೆಯ ಮಾರ್ಗವೆಂದು ನಾಮಕರಣ ಮಾಡಲಾಗುತ್ತದೆಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. 

ನಗರದ ಬಸವ ಭವನದಲ್ಲಿ ದಿ,ಸಿದ್ದು ಮೀಶಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿ.ಸಿದ್ದು ಮೀಶಿ ಅವರು ಒಬ್ಬ ನೇರ, ನುಡಿಯ ಸ್ವಾಭಾವದ ವ್ಯಕ್ತಿ ಆಗಿದರು. ಸತತವಾಗಿ ನಗರಸಭೆಗೆ ಐದುಬಾರಿ ಆಯ್ಕೆಯಾಗಿದವರು. ಎಲ್ಲ ಸಮಾಜದ ಭಾಂದವರ ಜೊತೆ ಒಳ್ಳಯ ಒಡನಾಟವನ್ನು ಬೆಳೆಸಿಕೊಂಡಿದರು. ಕಳಡದ ವಾರದ ಹಿಂದೆಯಷ್ಟೇ ಅವರನ್ನು ಕಾಂಗ್ರೇಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರೆಂದು ಆಯ್ಕೆಯಾಗಿದರು. ಅವರ ನಿಧನದ ಹಿನ್ನಲೆಯಲ್ಲಿ ಅವರ ಕುಟುಂಬ ವರ್ಗದ ವ್ಯಕ್ತಿಯಾದ ಅಂಜು ಮೀಶಿ ಅವರನ್ನು ನೇಮಕ ಮಾಡಲಾಗುತ್ತದೆಂದು ವೇದಿಕೆಯಲ್ಲಿ ಘೋಷಣೆಯನ್ನು ಮಾಡಿದರು.  

ದಿ,ಸಿದ್ದು ಮೀಶಿ ಅವರು ತಮ್ಮ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಿಕೊಳ್ಳುತ್ತಿದರು. ಆದರೆ ಜೀವನ ಎಂಬುವದು ನೀರಿನ ಮೇಲೆ ಗುಳೆ ಎಂಬಂತೆ.ನಿಜವಾಗಿಯಿತು.  ನೇರ ನುಡಿಯ ವ್ಯಕ್ತಿಯಾಗಿದರು. ಸಮಾಜಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದರು. ಅವರ ಸಾಧನೆಯು ಇಂದಿನ ದಿನಮಾನದಲ್ಲಿ ಬಹಳ ಮುಖ್ಯವಾಗಿತ್ತು. ಇಂತಹ ನೇರ ನುಡಿಯ ವ್ಯಕ್ತಿಯನ್ನು ಕಳೆದುಕೊಂಡಿದು ತಾಲೂಕಿಗೆ ತುಂಬಾಲಾದರದಷ್ಟು ನಷ್ಟವಾಗಿದೆ ಎಂದರು. 

ರುದ್ರಾವಧೂತ ಮಠದ ಸಹಜಾನಂದ ಅವಧೂತರು, ಮುತ್ತಿನಕಂತಿಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು, ಓಲೇಮಠದ ಆನಂದ ದೇವರು, ಜಕನೂರಮಠದ ಮಾಧುಲಿಂಗ ಶ್ರೀಗಳು, ಕೃಷ್ಣಾನಂದ ಅವಧೂತರು ಆಶೀರ್ವಚನ ನೀಡಿದರು, 

ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್,ಜಿ,ನಂಜಯ್ಯನಮಠ, ಡಿಎಸ್‌ಎಸ್ ಮುಖಂಡ ಶ್ಯಾಮರಾವ ಘಾಟಗೆ, ಮಾಜಿ ಜವಳಿ ನಿಗಮ ಅಧ್ಯಕ್ಷ ನಜೀರ ಕಂಗನೊಳ್ಳಿ ಮಾನಾಡಿದರು. 

ವೇದಿಕೆಯಲ್ಲಿ ಶ್ರೀಶೈಲ ದಳವಾಯಿ, ಎನ್,ಎಸ್,ದೇವರವರ, ಸಿದ್ದು ಕೊಣ್ಣೂರ, ಮಾದೇವಗೌಡ ಪಾಟೀಲ, ಅರ್ಜುನ ದಳವಾಯಿ, ವರ್ಧಮಾನ ನ್ಯಾಮಗೌಡ, ಮಹೇಶ ಕೋಳಿ, ಈಶ್ವರ ವಾಳೇನ್ನವರ, ಕಲ್ಲಪ್ಪ ಗಿರಡಿ, ಕಾಡು ಮಾಳಿ, ರಾಜು ಮೇಲಿನಕೇರಿ, ಮಾಮೂನ ರಶೀಧ ಪಾರಥನಳ್ಳಿ, ಶಂಕರ ಕಾಂಬಳೆ ಸೇರಿದಂತೆ ಅನೇಕರು ಇದ್ದರು, ಯಮನಪ್ಪ ಗುಣದಾಳ ನಿರೂಪಿಸಿದರು. ಮುತ್ತಣ್ಣ ಮೇತ್ರಿ ವಂದಿಸಿದರು.