'ಜೈ ಹಿಂದ್ ಭಾರ್ಗವ' ಗೆ ಭರದಿಂದ ಚಿತ್ರೀಕರಣ
ಬೆಂಗಳೂರು 23: ಮಾಯಮ್ಮ ಸಿನಿ ಕ್ರಿಯೇಶನ್ಸ್ ಬೆಂಗಳೂರು ಅರ್ಿಸುವ “ಜೈ ಹಿಂದ್ ಭಾರ್ಗವ” ಕನ್ನಡ ಚಲನಚಿತ್ರ ಕಳೆದೊಂದು ವಾರದಿಂದ ಸದ್ದಿಲ್ಲದೆ ಭರದಿಂದ ಚಿತ್ರೀಕರಣ ನಡೆಸಿದೆ ಚಿತ್ರತಂಡ.
ಭಾರತದ ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿ ಮತ್ತು ಆಪರೇಶನ್ ಸಿಂಧೂರದ ಕಥಾ ವಸ್ತು ಹೊಂದಿದ್ದು, ಸತತ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದಲ್ಲಿ ಹಾಡುಗಳಿಲ್ಲ. ಬೆಂಗಳೂರು,ಚಿಕ್ಕಬಳ್ಳಾಪೂರ, ಮೈಸೂರು, ಡೊಡ್ಡಬಳ್ಳಾಪೂರ,ಘಾಟಿ ಸುಬ್ರಮಣ್ಯ ಮೊದಲಾದ ಕಡೆ ಚಿತ್ರೀಕರಣ ನಡೆಸಲಿದೆ ಎಂದು ನಿರ್ದೇಶಕ ಎನ್.ಟಿ.ಜಯರಾಮ್ ತಿಳಿಸಿದ್ದಾರೆ.
ಈ ಚಿತ್ರದ ತಾರಾಗಣದಲ್ಲಿ ಮಾಸ್ಟರ್ ಚಿನ್ಮಯ್, ಮಾಸ್ಟರ್ ನಿಶ್ಚಲ್, ಕುಮಾರಿ ಪೂರ್ವಿಕ, ಚಲನಚಿತ್ರ ನಿರ್ದೇಶಕರಾದ ವಸಂತ್‌ಕುಮಾರ್, ರೋಹಿಣಿ ಮೈಸೂರ್, ಯಶೋದಮ್ಮ ,ಮನು ,ರವಿ , ಸುಪ್ರೀತ್ , ಮಂಜುರ್, ಗೀತಾನಂದಕುಮಾರ್ ಹಾಗೂ ವಿಶೇಷ ಸೈನ್ಯಾಧಿಕಾರಿ ಪಾತ್ರದಲ್ಲಿ ಚಲನಚಿತ್ರ ನಟ-ನಿರ್ದೇಶಕರಾದ ಹರಿಹರನ್.ಬಿ.ಪಿ ಅವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಭುವನ್ ರೆಡ್ಡಿ ,ವರ್ಣಾಲಂಕಾರ ಕಾಂತರಾಜು, ಸಂಕಲನ ಮುತ್ತುರಾಜ್ ಟಿ , ಸಂಗೀತ ಶಿವಸತ್ಯ , ಪತ್ರಿಕಾ ಸಂಪರ್ಕ ಕಾರ್ತಿಕ್, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ , ನಿರ್ಮಾಣ ನಿರ್ವಹಣೆ ಜವಾಬ್ದಾರಿ ಬೆಳ್ಳೂ ರಾಜು , ಸಹ ನಿರ್ದೇಶನ ಎಸ್ ಶ್ರೀನಿವಾಸ್ ಅವರದಿದೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆಯನ್ನು ಬರೆದು ಎನ್.ಟಿ. ಜಯರಾಮ್ ರೆಡ್ಡಿ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಿರ್ಮಾಪಕರು ಕುಮಾರಿ ತನ್ಮಯ್ ಎನ್ ಆಗಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಿ ನವಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದಾಗಿದೆ.
ಡಾ.ಪ್ರಭು ಗಂಜಿಹಾಳ
ಮೊ:9448775346
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 