ವಚನ ಸಾಹಿತ್ಯಕ್ಕೆ ಶಿವಶರಣೆಯರ ಕೊಡುಗೆ ಅನನ್ಯವಾದುದು
Shivasaran's contribution to Vachana literature is unique
ವಿಜಯಪುರ 17: 12 ನೇಯ ಶತಮಾನದ ಶಿವಶರಣೆಯರು ತಮ್ಮ ವಚನಗಳ ಮೂಲಕ ಸಾಮಾಜಿಕ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಅವರು ಲಿಂಗ ತಾರತಮ್ಯ, ಜಾತಿ ಬೇಧ, ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ದಾಸೋಹ ತತ್ವ ಮತ್ತು ಸಮ ಸಮಾಜಕ್ಕಾಗಿ ಹೋರಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಅಕ್ಕ ಮಹಾದೇವಿ, ಅಕ್ಕಮ್ಮ, ನೀಲಾಂಬಿಕೆ, ಮುಕ್ಕಾಯಕ್ಕ ಮತ್ತು ಕಾಳವ್ವೆಯಂತಹ ಶಿವಶರಣೆಯರು ನೇರ, ಸರಳ ಮತ್ತು ಭಾವಪೂರ್ಣ ಭಾಷೆಯಲ್ಲಿ ವಚನಗಳನ್ನು ರಚಿಸಿ, ಆ ಕಾಲದ ಸಮಾಜದಲ್ಲಿದ್ದ ಸಂಕೋಲೆಗಳನ್ನು ಮುರಿದು ಮಹಿಳೆಯರೂ ಪುರುಷನಷ್ಟೇ ಸಮರ್ಥರಾಗಿ ಅಧ್ಯಾತ್ಮಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು ಎಂದು ಅಧ್ಯಾತ್ಮಿಕ ಚಿಂತಕ ಪ್ರೊ. ಎಂ.ಎನ್.ಉಕುಮನಾಳಮಠ ಅವರು ಅಭಿಪ್ರಾಯಪಟ್ಟರು. ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಹವಾಲ್ದಾರ ಕಾಲನಿಯ ಲಕ್ಷ್ಮೀ ದೇವಸ್ಥಾನದ 3 ನೇಯ ವರ್ಷದ ಜಾತ್ರಾ ಮಹೋತ್ಸವದ ಮೂರನೇಯ ದಿನದ ಉಪನ್ಯಾಸ “ವಚನ ಸಾಹಿತ್ಯಕ್ಕೆ ಶಿವಶರಣೆಯರ ಕೊಡುಗೆಗಳು” ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಗುರುಭಕ್ತಿ, ದೈವಶಕ್ತಿ, ಭಕ್ತಿ-ಭಾವ, ಪ್ರಾರ್ಥನೆ, ದೇವನನ್ನು ಒಲಿಸಿಕೊಳ್ಳುವ ಪರಿ, ಗುರು-ಲಿಂಗ-ಜಂಗಮ ಮತ್ತು ಇಷ್ಟಲಿಂಗ ಪೂಜೆಯ ಮೂಲಕ ಪರಮಶಿವನನ್ನು ಆರಾಧಿಸುವ ‘ಲಿಂಗಾಯತ’ ಧರ್ಮದ ತತ್ವಗಳನ್ನು ಅವರು ವಚನಗಳಲ್ಲಿ ಪ್ರತಿಪಾದಿಸಿದ್ದಾರೆ. ಕನ್ನಡ ವಚನ ಸಾಹಿತ್ಯಕ್ಕೆ 12 ನೇಯ ಶತಮಾನದ ಶಿವಶರಣೆಯರು ಕೊಡುಗೆ ಅನನ್ಯವಾದುದು. ಪ್ರತಿಯೊಬ್ಬರೂ ಕಾಯಕ ಮಾಡುತ್ತಾ, ಸಂಪಾದಿಸಿದ ಆದಾಯದಲ್ಲಿ ಸಮಪಾಲು ದಾಸೋಹಕ್ಕಾಗಿ ನೀಡಬೇಕೆನ್ನುವ ದಾಸೋಹ ತತ್ವವನ್ನು ಬೋಧಿಸಿದ್ದಾರೆ. ಆಯ್ದಕ್ಕಿ ಲಕ್ಕಮ್ಮ ಅವರ ‘ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ರರಿಗುಂಟೆ, ರೋಷವೆಂಬುದು ಯಮದೂತಿಗಲ್ಲದೆ ಅಜಾತರಿಗುಂಟೆ, ಈಸಕ್ಕಿಯಾದೆ ನಿಮಗೇಕೆ ಈಶ್ವರನೊಪ್ಪ’ ಎಂಬ ವಚನದಲ್ಲಿ ಮನುಷ್ಯನಿಗೆ ಅತಿಯಾಸೆ ಇರಬಾರದು. ನಮ್ಮ ಬದುಕು ಕೇವಲ ಹಪಹಪಿಯಾಗದೇ ಇದ್ದುದರಲ್ಲಿಯೇ ಸದಾ ಸುಖ-ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕೆಂಬ ಮೌಲ್ವಿಕ ಸಂದೇಶವಿದೆ. ಎಲ್ಲ ಶಿವಶರಣೆಯರ ವಚನಗಳು ನಮಗೆಲ್ಲ ಇಂದಿಗೂ ದಾರೀದೀಪವಾಗಿದ್ದು, ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಬದುಕಿನಲ್ಲಿ ಸಾರ್ಥಕತೆ ಪಡೆಯಬೇಕೆಂದರು.
ಇದೇ ಸಂದರ್ಭದಲ್ಲಿ ಪ್ರಸಾದ ಸೇವೆಗೈದ ಶಂಕರ ಹಾರಿವಾಳ, ಕಾಶಿನಾಥ ಶೇಗಾವಿ ಹಾಗೂ ಕಸ್ತೂರಿ ಭೂಯಿನ್ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ನಿವೃತ್ತ ಪೋಲಿಸ ಅಧಿಕಾರಿ ಶ್ರೀ ಶಿವರಾಜ ಓತಿಹಾಳ, ನಿವೃತ್ತ ಪ್ರಾಂಶುಪಾಲ ಶ್ರೀ ಕೆ.ಜೆ.ಕೋಟ್ಯಾಳ, ಎಸ್.ಎಸ್.ಕಬಾಡೆ ಮತ್ತು ಬಾಬು ಮುಳವಾಡ ಇದ್ದರು. ಈ ಕಾರ್ಯಕ್ರಮದಲ್ಲಿ ಹಿರಿಯರಾದ ಸಾಬು ಅಗ್ರಾಣಿ, ಅರವಿಂದ ಹಂಗರಗಿ, ಶ್ರೀಶೈಲ ಅವಜಿ, ಉಮಾ ತೊಡಕೆ, ಶಾಂತಾ ಕಪಾಳಿ, ಮಂಜುಳಾ ನಿಂಬಾಳಕರ, ಕಸ್ತೂರಿ ಸಾವಳಗಿ, ಸಂಗೀತಾ ಕಟ್ಟಿಮನಿ, ಆಶಾ ಬಾಸೂತಕರ, ಶಾಂತಾ ಹೆರಕಲ್, ಸುರೇಖಾ ನಿಂಬಾಳಕರ, ಭಾರತಿ ಕಿಚಡಿ, ರೇಣುಕಾ ಹಡಪದ, ಭಾರತಿ ಪಾಟೀಲ, ಸಿದ್ದಲಿಂಗಮ್ಮ ಓತಿಹಾಳ, ಹೇಮಾ ಅಂಗಡಿ ಇನ್ನಿತರರು ಸಹ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನವರಸಪುರದ ವಿವಿಧ ಬಡಾವಣೆಗಳ ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 