ವೇದಾಂತ ಪರಿಷತ್‌ನ 4ನೇ ದಿನದ ಪ್ರವಚನದಲ್ಲಿ ಶಿವರಾಮಾನಂದ ಅಭಿಮತ ಚನ್ನವೃಷಭೇಂದ್ರ ಲೀಲಾಮಠ ರಾಜ್ಯದ ಏಕೈಕ ಆಧ್ಯಾತ್ಮಿಕ ಪುಣ್ಯಕ್ಷೇತ್ರ

 ವೇದಾಂತ ಪರಿಷತ್‌ನ 4ನೇ ದಿನದ ಪ್ರವಚನದಲ್ಲಿ ಶಿವರಾಮಾನಂದ   ಅಭಿಮತ     ಚನ್ನವೃಷಭೇಂದ್ರ ಲೀಲಾಮಠ ರಾಜ್ಯದ ಏಕೈಕ ಆಧ್ಯಾತ್ಮಿಕ ಪುಣ್ಯಕ್ಷೇತ್ರ Shivaramananda's opinion in the discourse on the 4th day of Vedanta Parishad Channavrishabhendra L

ಲೋಕದರ್ಶನ ವರದಿ 

ವೇದಾಂತ ಪರಿಷತ್‌ನ 4ನೇ ದಿನದ ಪ್ರವಚನದಲ್ಲಿ ಶಿವರಾಮಾನಂದ   ಅಭಿಮತ 

  ಚನ್ನವೃಷಭೇಂದ್ರ ಲೀಲಾಮಠ ರಾಜ್ಯದ ಏಕೈಕ ಆಧ್ಯಾತ್ಮಿಕ ಪುಣ್ಯಕ್ಷೇತ್ರ 

ಹಾರೂಗೇರಿ 06: ಮನುಷ್ಯನ ಪರಿಪೂರ್ಣತೆಗೆ ಬೇಕಾದ ವೇದಾಂತ, ಆಧ್ಯಾತ್ಮ, ಶಾಸ್ತ್ರ, ಅರಿವಿನ ಜ್ಞಾನ, ಪ್ರವಚನ ಹೀಗೆ ಎಲ್ಲವೂ ಒಂದೇ ಸ್ಥಳದಲ್ಲಿ ಸಿಗುವ ಹಾರೂಗೇರಿಯ   ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮಠವು ರಾಜ್ಯದ ಏಕೈಕ ಪುಣ್ಯಕ್ಷೇತ್ರವಾಗಿದೆ ಎಂದು ರಾಯಚೂರ   ಶಂಕರಾಚಾರ್ಯ ಮಠದ   ಶಿವರಾಮಾನಂದ ಭಾರತಿ ಸ್ವಾಮೀಜಿ ಹೇಳಿದರು.  

   ಇಲ್ಲಿನ   ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮಠದಲ್ಲಿ ನಡೆಯುತ್ತಿರುವ 42ನೇ ವೇದಾಂತ ಪರಿಷತ್ ಜಾತ್ರಾಮಹೋತ್ಸವದ ಸೋಮವಾರ 4ನೇ ದಿನದ ಮುಂಜಾನೆಯ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು 

  ಚನ್ನವೃಷಭೇಂದ್ರರು ನಡೆದಾಡಿದ ಈ ಪುಣ್ಯ ಕ್ಷೇತ್ರದಲ್ಲಿ ವೇದಾಂತ ವೇದಿಕೆಯ ಮೂಲಕ ಮಲೀನ ಮನಸ್ಸುಗಳನ್ನು ಸ್ವಚ್ಛಮಾಡಿ, ದುಃಖ-ದುರ್ಗುಣಗಳನ್ನು ದೂರಮಾಡಿ, ಸುಖ-ಸಂತೋಷ-ನೆಮ್ಮದಿಯ ಅಮೂಲ್ಯ ಮೌಲ್ಯಗಳ ಸಂಪತ್ತನ್ನು ನೀಡಲಾಗುತ್ತಿದೆ. ಇಲ್ಲಿ ಪಾದಸ್ಪರ್ಶ ಮಾಡಿದ ನೂರಾರು ಮಹಾತ್ಮರ ದಿವ್ಯ ವಾಣಿಗಳ ದರ್ಶನಾಶೀರ್ವಾದವಿದೆ ಎಂದು ಹೇಳಿದರು. 

   ಇಂಚಲ-ಹಾರೂಗೇರಿ ಮಠಗಳ ಪೀಠಾಧಿಪತಿ ಸದ್ಗುರು   ಡಾ.ಶಿವಾನಂದ ಭಾರತಿ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಸದ್ಗುರುವಿನ ಸನ್ನಿಧಾನದಲ್ಲಿ ಪಡೆಯುವ ಆತ್ಮ ಸಾಕ್ಷಾತ್ಕಾರ ಮನುಷ್ಯ ಧರ್ಮದ ಮುಖ್ಯ ಕರ್ತವ್ಯವಾಗಿದೆ. ಗಳಿಸಿದ ಹಣ, ಆಸ್ತಿ ಕ್ಷೀಣಿಸುತ್ತದೆ ಆದರೆ ಮಾಡಿದ ಪುಣ್ಯ, ಪಡೆದ ಜ್ಞಾನ ವೃದ್ಧಿಸುತ್ತದೆ ಎಂದರು.  

  ಡಾ.ವಿದ್ಯಾನಂದ ಭಾರತಿ ಸ್ವಾಮೀಜಿ,   ಪೂರ್ಣಾನಂದ ಭಾರತಿ ಸ್ವಾಮೀಜಿ,   ಸಿದ್ಧಲಿಂಗ ಸ್ವಾಮೀಜಿ,   ಸಚ್ಚಿದಾನಂದ ಸ್ವಾಮೀಜಿ,   ಲಕ್ಷ್ಮೀ ತಾಯಿಯವರು,   ಶಿವಾನಂದ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ,   ಅನುಸೂಯಾ ತಾಯಿಯವರು,   ಮಲ್ಲೇಶ್ವರ ಶರಣರು,   ಬಿ.ಎಂ.ಮುಜಾವರ ಸಾಹೇಬರು,   ನಿಂಗಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. 

   ಶ್ರೀಮಠದ ಸದ್ಭಕ್ತರು ಡಾ.ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ನೇರವೇರಿಸಿದರು. ನಂತರ ಶ್ರೀಗಳಿಗೆ ಸುವರ್ಣ ಕೀರೀಟ ಧಾರಣೆ, ಮಹಾಪೂಜೆಗಳು ನಡೆದವು. ಮಹಾದ್ವಾರ ನಿರ್ಮಾಣಕ್ಕೆ 2ಲಕ್ಷರೂ. ಭಕ್ತಿ ಕಾಣಿಕೆ ನೀಡಿದ ಡಾ.ರವಿ ಇಂಚಲಕರಂಜಿ ಅವರನ್ನು ಶ್ರೀಗಳು ಸತ್ಕರಿಸಿದರು. ಮಧ್ಯಾಹ್ನ ಚನ್ನಬಸು ಸದಲಗಿ-ಗಾಳಿ ಬಂಧುಗಳಿಂದ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಯಿತು. ಸಂಜೆ ಭಕ್ತಿಗೀತೆಗಳ ಮನರಂಜನಾ ಕಾರ್ಯಕ್ರಮ ಏರಿ​‍್ಡಸಲಾಯಿತು. 

   ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಅಥಣಿ ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ, ತಾಲೂಕು ವೈದ್ಯಾಧಿಕಾರಿ ಡಾ.ಸೋಮನಗೌಡ ಪಾಟೀಲ, ಮುಖ್ಯಾಧಿಕಾರಿ ಬಸವರಾಜ ಮನಗೂಳಿ, ಶ್ರೀಮಠದ ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ವಿಠ್ಠಲರಾವ ಬಂತಿ, ಬಾಬು ಪರಮಗೌಡರ, ನೇಮಿನಾಥ ಕೊತ್ತಲಗಿ, ರಾಜು ಕರ್ಣವಾಡಿ, ತಮ್ಮಣ್ಣಿ ಕುರಿ, ವಿಜಯ ಬಂತಿ, ಗೋಪಾಲ ಧರ್ಮಟ್ಟಿ, ಶ್ರೀಶೈಲಗೌಡ ಉಮರಾಣಿ, ಲಾಲಸಾಬ ಜಮಾದಾರ, ಭಗವಂತ ಸೂರಣ್ಣವರ, ಸುರೇಶ ಧರ್ಮಟ್ಟಿ, ರಾಘವೇಂದ್ರ ದೇಶಪಾಂಡೆ, ಸಾಬು ಸನದಿ, ಮಹಾದೇವ ಲುಡುಬುಡೆ, ಶಶಿಧರ ಶಿಂಗೆ ಮೊದಲಾದವರು ಉಪಸ್ಥಿತರಿದ್ದರು. 

     ಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಮಂಗಲ ಗೀತೆ ಹಾಡಿದರು. 

ಫೋಟೋ ಶಿರ್ಷಿಕೆ : 6ಹಾರೂಗೇರಿ ಸುದ್ದಿ-1 - ಹಾರೂಗೇರಿ ಶ್ರೀ ಚನ್ನವೃಷಭೇಂದ್ರ ಲೀಲಾಮಠದಲ್ಲಿ ನಡೆಯುತ್ತಿರುವ 42ನೇ ವೇದಾಂತ ಪರಿಷತ್ ಜಾತ್ರಾಮಹೋತ್ಸವದಲ್ಲಿ ಡಾ.ಶಿವಾನಂದ ಭಾರತಿ ಶ್ರೀಗಳಿಗೆ ಸದ್ಭಕ್ತರಿಂದ ಭಕ್ತಿಯ ತುಲಾಭಾರ ನೇರವೇರಿಸಲಾಯಿತು.