ಶಿವಾಜಿ ಮಹಾರಾಜರ ಜಯಂತಿ ಆಚರಣೆ

 ಶಿವಾಜಿ ಮಹಾರಾಜರ ಜಯಂತಿ ಆಚರಣೆ Shivaji Maharaj's birth anniversary celebration

ಲೋಕದರ್ಶನ ವರದಿ 

ವಿಜಯಪುರ 20: ದಿ.19ರಂದು ಜಿಲ್ಲೆಯ ಪ್ರತಿಷ್ಠಿತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವಾಜಿ ಮಹಾರಾಜ ಕೋ-ಆಪ್‌. ಕ್ರೆಡಿಟ್ ಸೊಸಾಯಿಟಿ ವತಿಯಿಂದ ಮುಂಜಾನೆ 7ಗಂಟೆಗೆ ಸಂಘದ ಕಟ್ಟಡದ ಮೇಲೆ ಅಧ್ಯಕ್ಷ ಶಂಕರ ಕನಸೆ ಭಗವಾ ಧ್ವಜಾರೋಹಣ ನೆರವೇರಿಸುವ ಮುಖಾಂತರ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. 


ಸಂಘದ ಕಚೇರಿಯಲ್ಲಿ ಹಾಗೂ ಆವರಣದ ಮುಂದೆ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ಹಾಗೂ ಭಾವಚಿತ್ರಕ್ಕೆ ಆಡಳಿತ ಮಂಡಳಿ ಸದಸ್ಯರು ಮಾಲಾರೆ​‍್ಣ ಮಾಡಿ ಪೂಜೆ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಉಪಾಧ್ಯಕ್ಷರಾದ ಸಂಜಯ ಜಂಬೂರೆ ಭಾರತದ ಇತಿಹಾಸದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ವಿಚಾರಗಳ ಜೊತೆಗೆ ಇತ್ಯಾದಿ ವಿಚಾರಗಳಿಗಿಂತಲೂ ಮಿಗಿಲಾಗಿ ಮಾನವೀಯತೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಮಹಾನ, ದೀಮಂತ ನಾಯಕರೇ ಛತ್ರಪತಿ ಶಿವಾಜಿ ಮಹಾರಾಜರಾಗಿದ್ದರು. ಹಿಂದವೀ ಸ್ವರಾಜ್ಯ ಸ್ಥಾಪಕರಾದ ಶಿವಾಜಿ ಮಹಾರಾಜರ ಜಯಂತಿಯ ಆಚರಣೆಯು ಅಖಂಡ ಭಾರತ ದೇಶದಲ್ಲಿ ಆಚರಿಸಲಾಗುತ್ತಿದೆ. ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರವು 2012ನೇ ಇಸ್ವಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಆಚರಿಸುವಂತೆ ಅಂದಿನ ಮುಖ್ಯಮಂತ್ರಿ ಸದಾನಂದ ಗೌಡರು ಈ ಆದೇಶವನ್ನು ಜಾರಿಮಾಡಿಸಿದರು ಎಂದು ಹೇಳಿದರು.ವಿಜಯಪುರ ಮಹಾನಗರ ಪಾಲಿಕೆಯ ವಲಯ ಆಯುಕ್ತ ಮೋಹನ ವಿಠ್ಠಲ ಜಾಧವ ಇವರನ್ನು ಸಂಘದ ವತಿಯಿಂದ ಅಧ್ಯಕ್ಷ ಶಂಕರ ಕನಸೆ ಹಾಗೂ ಆಡಳಿತ ಮಂಡಳಿ ಸದಸ್ಯರು ಗೌರವಪೂರ್ವಕವಾಗಿ ಸನ್ಮಾನಿಸಿದರು. 

ತದನಂತರ ನಗರದ ಶಿವಾಜಿ ವೃತ್ತದಲ್ಲಿರುವ ಮಹಾರಾಜರ ಅಶ್ವರೂಢ ಕಂಚಿನ ಪುತ್ಥಳಿಗೆ ಹಾಗೂ ಸರ್ಕಾರಿ ಮರಾಠಿ ಶಿವಾಜಿ ಶಾಲಯಲ್ಲಿರುವ ಕಂಚಿನ ಪುತ್ಥಳಿಗೆ ಗೌರವಪೂರ್ವಕವಾಗಿ ಮಾಲಾರೆ​‍್ಣ ಮಾಡಿ ಪೂಜೆ ನೆರವೇರಿಸಲಾಯಿತು. ಸಂಘದ ಆಡಳಿತ ಮಂಡಳಿ ಸದಸ್ಯರಾದ ಮಹಾದೇವ ಪವಾರ, ಪ್ರವೀಣ ಬೋಡಕೆ, ರಾಮಚಂದ್ರ ಚವ್ಹಾಣ, ಭರತ ದೇವಕುಳೆ, ರವಿ ಮದಭಾವಿ, ಅಂಬುತಾಯಿ ಜಾಧವ, ಸುರೇಖಾ ಕದಂ, ವ್ಯವಸ್ಥಾಪಕ ಸಂಜಯ ಜಾಧವ, ಚಂದ್ರಕಾಂತ ಜಾಧವ, ಅಂಬಾದಾಸ ಚವ್ಹಾಣ ಹಾಗೂ ಸಿಬ್ಬಂದಿ ಸದಸ್ಯರು, ಪಿಗ್ಮಿ ಏಜೆಂಟರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.