ಮಹಿಳಾ ವಿವಿಯಿಂದ ಶಿವಗಂಗಾ ಸಾಲೋಟಗಿಗೆ ಪಿಎಚ್.ಡಿ ಪ್ರದಾನ
Shivaganga Salotagi awarded PhD by Women's University
ಲೋಕದರ್ಶನ ವರದಿ
ವಿಜಯಪುರ 22: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ಘಟಿಕೋತ್ಸವದಲ್ಲಿ ಶಿವಗಂಗಾ ಸಾಲೋಟಗಿ ಅವರು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರಧಾನ ಮಾಡಲಾಯಿತು.
’ಅಸೆಸ್ಮೆಂಟ್ ಆಫ್ ಲೈಬ್ರರಿ ಆ್ಯಂಕ್ಸೆಟಿ ಅಮಂಗ್ ಡಿಫರಂಟ್ ಕೆಟಗರೀಸ್ ಆಫ್ ಯುಸರ್ಸ: ಎ ಕಂಪ್ಯಾರೇಟಿವ್ ಅನಾಲಿಸಸ್ ಆಫ್ ಸೆಲೆಕ್ಟಡ್ ಯುನಿವರ್ಸಿಟಿ ಇನ್ ಕರ್ನಾಟಕ ಸ್ಟೇಟ್’
(ಟಜಟಿಣ ಠ ಐಛಡಿಚಿಡಿಥಿ ಂಟಿಥಜಣಥಿ ಂಟಠರ ಆಜಿಜಿಜಡಿಜಟಿಣ ಅಚಿಣಜರಠ ಠ ಜಢಿ: ಂ ಅಠಠಿಚಿಡಿಚಿಣತಜ ಂಟಿಚಿಟಥಿ ಠ ಖಜಟಜಛಿಣಜಜ ಗಟಿತಜಢಿಣ ಟಿ ಏಚಿಡಿಟಿಚಿಣಚಿಞಚಿ ಖಣಚಿಣಜ) ಎಂಬ ವಿಷಯದ ಮೇಲೆ ಅವರು ಸಂಶೋಧನೆ ನಡೆಸಿದ್ದರು. ಈ ಸಂಶೋಧನೆಯನ್ನು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರೊ. ಪಿ.ಜಿ. ತಡಸದ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿತ್ತು.
ಡಾಕ್ಟರೇಟ್ ಪದವಿ ಪಡೆದ ಶಿವಗಂಗಾ ಸಾಲೋಟಗಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣನವರ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಿವಗಂಗಾ ಅವರ ಕುಟುಂಬ ಸದಸ್ಯರು, ಗ್ರಾಮಸ್ಥರು ಹಾಗೂ ಸ್ನೇಹಿತರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 