ಶಿರಗುಪ್ಪಿಯ ಜೆಸಿಎಲ್ ಸಹಕಾರಿಗೆ ರೂ. 2.19 ಕೋಟಿ ನಿವ್ವಳ ಲಾಭ
Shiraguppi JCL Cooperative posts net profit of Rs 2.19 crore
ಲೋಕದರ್ಶನ ವರದಿ
ಕಾಗವಾಡ: ಠೇವುದಾರರ ಮತ್ತು ಸಾಲಗಾರರ ಸಹಕಾರ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ಪ್ರಾಮಾಣಿಕೆ ಸೇವೆಯಿಂದ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿಯು ಸನ್ 2025-26ನೇ ಆರ್ಥಿಕ ವರ್ಷದಲ್ಲಿ ರೂ. 2.19 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25ಅ ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ತಿಳಿಸಿದ್ದಾರೆ. ಅವರು, ರವಿವಾರ ದಿ. 30 ರಂದು ತಾಲೂಕಿನ ಶಿರಗುಪ್ಪಿಯ ಅರಿಹಂತ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿಯ 37ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಿಇಒ ವಿದ್ಯಾಧರ ಚೌಗುಲೆ ವರದಿ ಓದುತ್ತ, ಸಹಕಾರಿಯು ಶಿರಗುಪ್ಪಿಯ ಮುಖ್ಯ ಶಾಖೆಯೊಂದಿಗೆ ಇತರ 12 ಶಾಖೆಗಳನ್ನು ಹೊಂದಿದ್ದು, ಒಟ್ಟು 4,661 ಸದಸ್ಯರನ್ನು ಹೊಂದಿದೆ. ರೂ. 22.70 ಲಕ್ಷ ಶೇರ್ ಬಂಡವಾಳ, ರೂ. 16.72 ಕೋಟಿ ನಿಧಿಗಳೊಂದಿಗೆ ರೂ. 166.72 ಕೋಟಿ ಠೇವು ಸಂಗ್ರಹಿಸಿ, ರೂ. 93.13 ಕೋಟಿ ಸಾಲ ವಿತರಿಸಲಾಗಿದೆ. ಸದಸ್ಯರಿಗೆ 1 ಲಕ್ಷದ ವರೆಗೆ ಅಪಘಾತ ವಿಮೆ, ನಿಯಮಿತ ಮರುಪಾವತಿ ಮಾಡುವ ಸಾಲಗಾರರಿಗೆ ಬಡ್ಡಿಯಲ್ಲಿ ಶೇ.1-2 ರ ವರೆಗೆ ವಿನಾಯತಿ, ಸದಸ್ಯರ ನಿಧನದ ನಂತರ ಮರಣೋತ್ತರ ನಿಧಿ ರೂ. 2000, ನೇತ್ರ ಚಿಕಿತ್ಸೆಗೆ ರೂ. 3000, ಹೃದಯ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ರೂ. 5000 ನಿಧಿ ನೀಡುವ ವ್ಯವಸ್ಥೆ ಮತ್ತು ಸಹಕಾರಿಯಿಂದ ಉಚಿತ ನೇತ್ರ ತಪಾಸಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಥಣಿ ಶಾಖೆಯ ಅಮರ ದುರ್ಗನ್ನವರ ಮಾತನಾಡಿ, ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ಮುಂದಾಳತ್ವದಲ್ಲಿ ಸಹಕಾರಿಯು ರೈತರಿಗೆ ಮತ್ತು ಉದ್ಯಮದಾರರಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಿ, ಸಾಮಾಜಿಕ ಕಳಕಳಿಯೊಂದಿಗೆ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದರು. ದೀಪ ಬೆಳಗಿಸುವ ಮೂಲಕ ಸಭೆಗೆ ಚಾಲನೆ ನೀಡಿ, ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಉಪಾಧ್ಯಕ್ಷ ಅಪ್ಪಾಸಾಬ ಶಿರಗುಪ್ಪೆ, ಮೋಳೆ ಶಾಖೆಯ ಜಿನ್ನಪ್ಪಾ ಬೋರಗಾಂವೆ, ಅಥಣಿ ಶಾಖೆಯ ಅಪ್ಪಾಸಾಬ ಚೌಗುಲಾ, ಇಂಗಳಿ ಗಾವಠಣ ಶಾಖೆಯ ರಾವಸಾಬ ಬುಗಡೆ, ಐನಾಪೂರ ಶಾಖೆಯ ಯಮನಪ್ಪಾ ಪಾಟೀಲ, ಶೇಡಬಾಳ ಶಾಖೆಯ ಅರುಣ ಯಂದಗೌಡರ, ಉಗಾರ ಖುರ್ದ ಶಾಖೆಯ ಬಾಳಾಸಾಬ ವಿಸಾಪೂರೆ, ಕಾಗವಾಡ ಶಾಖೆಯ ಚೇತನ ಘೋಡಕೆ, ಕಟಕಬಾವಿ ಶಾಖೆಯ ಬಸಗೌಡಾ ಪಾಟೀಲ, ತೇರದಾಳ ಶಾಖೆಯ ಶುಭಂ ತೇಜನ್ನವರ, ಗುಂಡೇವಾಡಿ ಶಾಖೆಯ ಪಾಪಾಚಂದ ಬಣಜವಾಡ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಶಾಖೆಗಳ ಸಲಹಾ ಸಮಿತಿಯ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 