ಶಿರಗುಪ್ಪಿಯ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಸಹಕಾರಿಗೆ 2.11 ಕೋಟಿ ನಿವ್ಹಳ ಲಾಭ: ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ಮಾಹಿತಿ..!
Shiraguppi's Jinnapanna Chowgule Lal Bahadur Cooperative has a net profit of 2.11 crores: President
ಲೋಕದರ್ಶನ ವರದಿ
ಕಾಗವಾಡ 04: ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದ ಕೊನೆಗೆ ಮಾ. 31 ಕ್ಕೆ ರೂಪಾಯಿ 2.11 ಕೋಟಿ ನಿವ್ಹಳ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ತಿಳಿಸಿದ್ದಾರೆ.
ಅವರು ಶನಿವಾರ ದಿ. 04 ರಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಸಹಕಾರಿಯ ಪ್ರಧಾನ ಕಚೇರಿಯ ಸಭಾಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ದಿ. ಜಿನ್ನಪ್ಪಣ್ಣಾ ಚೌಗುಲೆ ಅವರ ದೂರದಷ್ಟಿಯ ಫಲವಾಗಿ, ಗ್ರಾಮೀಣ ಭಾಗದ ಸಣ್ಣ ಮತ್ತು ಮಧ್ಯಮ ರೈತರ ಮತ್ತು ಉದ್ಯಮಿದಾರಿಗೆ ಆರ್ಥಿಕ ಸಹಕಾರ ನೀಡುತ್ತ ಗ್ರಾಮೀಣ ಭಾಗದ ಆರ್ಥಿಕ ಪ್ರಗತಿಯ ಅವರ ಕನಸು ಇಂದು ಸಾಕಾರಗೊಳ್ಳುತ್ತಿದ್ದು, ಸಹಕಾರಿಯು ಪ್ರಗತಿಯತ್ತ ದಾಪುಗಾಲು ಹಾಕುತ್ತ ಪ್ರಸಕ್ತ ಕಾಗವಾಡ,
ಅಥಣಿ, ಚಿಕ್ಕೋಡಿ, ರಾಯಬಾಗ ಮತ್ತು ಜಮಖಂಡಿ ತಾಲೂಕಿನಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಸಹಕಾರಿಯು ಪ್ರಸಕ್ತ ಶಿರಗುಪ್ಪಿ, ಮೋಳೆ, ಅಥಣಿ, ಇಂಗಳಿ, ಐನಾಪೂರ, ಶೇಡಬಾಳ, ಚಿಂಚಲಿ, ಉಗಾರ ಖುರ್ದ, ಕಾಗವಾಡ, ಕಟಕಭಾವಿ, ತೇರದಾಳ, ಗುಂಡೆವಾಡಿ ಹೀಗೆ ಒಟ್ಟು 12 ಶಾಖೆಗಳನ್ನು ಹೊಂದಿದ್ದು, ಎಲ್ಲ ಶಾಖೆಗಳು ತಮ್ಮ ನಿಗಧಿತ ಗುರಿ ಮುಟ್ಟುವದರೊಂದಿಗೆ ಲಾಭದಲ್ಲಿವೆ ಎಂದರು.
ಸಿಇಓ ವಿದ್ಯಾಧರ ಚೌಗುಲೆ ಮಾತನಾಡಿ, ಸಹಕಾರಿಯು ಒಟ್ಟು ರೂ. 167 ಕೋಟಿ ಠೇವು ಸಂಗ್ರಹಿಸಿ, 93 ಕೋಟಿ ಸಾಲ ವಿಧಿಸಿದೆ. ಅದರಂತೆ ರೂ. 84 ಕೋಟಿ ಗುಂತಾವಣೆಗಳಿದ್ದು, ರೂ. 16.5 ಕೋಟಿ ನಿಧಿಗಳನ್ನು ಹೊಂದಿದೆ ಎಂದು ತಿಳಿಸಿದರು.
ಈ ವೇಳೆ ಸಹಕಾರಿಯ ಉಪಾಧ್ಯಕ್ಷೆ ಸೌ. ಶಾಲನ ಸರ್ಜೆರಾವ ಪಾಟೀಲ, ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆಯ ನಿರ್ದೇಶಕ ಮಹಾವೀರ ಕಾತ್ರಾಳೆ, ನಿರ್ದೇಶಕರಾದ ಭಾವುಸಾಬ ಕುರುಂದವಾಡೆ, ಸುರೇಶ ಚೌಗುಲೆ, ಅಪ್ಪಾಸಾಬ ಶಿರಗುಪ್ಪೆ, ಮಹಾವೀರ ಅಕಿವಾಟೆ ಮತ್ತು ಸಲಹೆಗಾರರಾದ ಅಜೀತ ನಾಂದಣಿ ಸೇರಿದಂತೆ ಎಲ್ಲ ಶಾಖೆಯ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 