ಶರೀಫರ ಜಾತ್ಯಾತೀತ ಮೌಲ್ಯ ಪರಂಪರೆ ಬೆಳೆಸೋಣ: ಸಚಿವ ಜಮೀರ
ಹಾವೇರಿ: ಶಿಶುನಾಳ ಶರೀಫರ ಜಾತ್ಯಾತೀತ ಪರಂಪರೆ ಬೆಳೆಸೋಣ. ಸಾಮರಸ್ಯದ ಬದುಕನ್ನು ನಡೆಸೋಣ ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ಹಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್ ಜಮೀರ್ ಅಹ್ಮದಖಾನ್ ಅವರು ಹೇಳಿದರು.
ಶಿಶುನಾಳ ಶರೀಫರ 200ನೇ ಜನ್ಮ ದಿನದ ಅಂಗವಾಗಿ ಶಿಶುವಿನಹಾಳದ ಶರೀಫ ಶಿವಯೋಗೀಶ್ವರ ಪ್ರೌಢಶಾಲಾ ಆವರಣದಲ್ಲಿ ಗುರುಗೋವಿಂದ ಭಟ್ರ ಪ್ರಸಾದ ನಿಲಯದ ಸುವರ್ಣ ಮಹೋತ್ಸವ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಎಲ್ಲ ಜಾತಿ ಹಾಗೂ ಧರ್ಮಗಳ ಮೂಲ ಆಶಯ ಮಾನವ ಧರ್ಮದ ಏಳಿಗೆ ಆಗಿದೆ. ಜಾತಿ-ಧರ್ಮದ ಬೇಧ ತೊರೆದು ಶರೀಫರ ಆಶಯದಂತೆ ಜಾತ್ಯಾತೀತವಾಗಿ ಸಾಮರಸ್ಯದ ಬದುಕು ನಡೆಸೋಣ. ಶರೀಫರು ಈ ನಾಡಿನಲ್ಲಿ ಹುಟ್ಟಿರುವುದು ಹೆಮ್ಮೆಯ ಸಂಗತಿ. ಕನ್ನಡ ನಾಡಿನಲ್ಲಿ ಜನಿಸಿ ಕನ್ನಡವನ್ನು ಕಲಿತು ಕನ್ನಡ ಭಾಷೆಯಲ್ಲೇ ತತ್ವಪದಗಳನ್ನು ರಚಿಸಿ ಸಮಾನ ಸಮಾಜಕ್ಕಾಗಿ ಸಂದೇಶ ಸಾರಿದ ಮಹಾನ್ ವ್ಯಕ್ತಿ ಎಂದು ಹೇಳಿದರು.
ಶಿಶುನಾಳದ ಪ್ರಸಾದ ನಿಲಯದ ಅಭಿವೃದ್ಧಿಗೆ ಸಕರ್ಾರದಿಂದ ಅನುದಾನ ಒದಗಿಸಲಾಗುವುದು ಹಾಗೂ ನನ್ನ ವಯಕ್ತಿಕವಾಗಿ 10 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಗಾಯಕ ಹನುಮಂತಪ್ಪ ಲಮಾಣಿಗೆ ಸಚಿವರು ವಯಕ್ತಿಕವಾಗಿ ಒಂದು ಲಕ್ಷ ರೂ. ನಗದು ಪ್ರೋತ್ಸಾಹಧನ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಇಂದಿನ ಯುವ ಸಮೂಹ ಶಿಶುನಾಳ ಶರೀಫರ ಆದರ್ಶ ಜೀವನವನ್ನು ಮೈಗೂಡಿಸಿಕೊಳ್ಳಬೇಕು. ಅವರ ಕೊಡುಗೆಯನ್ನು ಅರಿಯಬೇಕು, ಅವರ ಸಾಹಿತ್ಯವನ್ನು ಅಧ್ಯಯನಮಾಡಬೇಕು. ತಮ್ಮ ಬದುಕನ್ನು ಸಾಮಾಜಿಕ ಜಾಲತಾಣದಲ್ಲಿ ಕಳೆದುಹೋಗುವ ಬದಲು ಶರೀಫರಂತಹ ಮಹಾತ್ಮರ ಜೀವನ ಸಂದೇಶಗಳನ್ನು ಅರಿಯಲು ತಮ್ಮ ಸಮಯವನ್ನು ವ್ಯಯಮಾಡಬೇಕು. ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಶಿರಹಟ್ಟಿ ಫಕ್ಕೀರ ಸ್ವಾಮಿಗಳು, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಹಾನಗಲ್ ಶಾಸಕ ಸಿ.ಎಂ.ಉದಾಸಿ, ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ತಾ.ಪಂ.ಸದಸ್ಯ ರಂಗನಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 