ಸಂಘದ ಅಭಿವೃದ್ಧಿಗೆ ಶೇರುದಾರರ ಸಹಕಾರ ಅಗತ್ಯ
Shareholders' cooperation is essential for the development of the association
ತಾಳಿಕೋಟಿ 17: ಸಂಘದಿಂದ ಸಾಲ ಪಡೆದ ರೈತರು ಅದರ ಸರಿಯಾದ ಸದುಪಯೋಗವನ್ನು ಮಾಡಿಕೊಂಡು ಸಕಾಲಕ್ಕೆ ಮರುಪಾವತಿಸಲು ಪ್ರಯತ್ನಿಸಬೇಕು ಇದು ಸಂಘದ ಅಭಿವೃದ್ಧಿಗೆ ಅತ್ಯವಶ್ಯಕವಾಗಿದೆ ಎಂದು ಲಿಂಗದಹಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ ಹೇಳಿದರು. ತಾಲೂಕಿನ ಲಿಂಗದಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ 50ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು. ಇವತ್ತು ಈ ಸಂಘವು ಆರಂಭವಾಗಿ 50 ವರ್ಷಗಳು ಗತಿಸುತ್ತಿವೆ, ವರ್ಷದಿಂದ ವರ್ಷಕ್ಕೆ ಸಂಘವು ಪ್ರಗತಿಯನ್ನು ಸಾಧಿಸುತ್ತಿದೆ ಇದಕ್ಕೆ ಎಲ್ಲಾ ಶೇರುದಾರರ ಸಹಕಾರವೇ ಕಾರಣ. ಇಂದಿನ ಸಭೆಯಲ್ಲಿ ತಾವುಗಳು ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದೀರಿ ಇದನ್ನು ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಇಟ್ಟು ಚರ್ಚಿಸಿ ಸಂಘದ ನಿಯಮಾವಳಿಗಳ ಅಡಿಯಲ್ಲಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ ಎಂದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ರ.ತಿಳಗೂಳ ಅವರು ತಮ್ಮ ವಾರ್ಷಿಕ ವರದಿಯಲ್ಲಿ ಸಂಘವು ಪ್ರಸಕ್ತ ವರ್ಷದಲ್ಲಿ 1233 ಶೇರುದಾರರನ್ನು ಹೊಂದಿದ್ದು, 9.25 ಲಕ್ಷ ಠೇವುಗಳು,
9.50 ಲಕ್ಷ ಶೇರು ಬಂಡವಾಳ, 9.70 ಕೋಟಿ ದುಡಿಯುವ ಬಂಡವಾಳ, ರೂ 7. 58 ಕೋಟಿ ಸಾಲಗಳನ್ನು ನೀಡಲಾಗಿದ್ದು 2025-26 ನೇ ವರ್ಷದಲ್ಲಿ 5.12 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ತಿಳಿಸಿ ಸಂಘದಿಂದ ಸಾಲವನ್ನು ಪಡೆದ ರೈತರು ನಿಗಧಿತ ಅವಧಿಯಲ್ಲಿ ತಮ್ಮ ಸಾಲಗಳನ್ನು ತುಂಬಲು ಪ್ರಯತ್ನಿಸಬೇಕು ಎಂದರು. ಶಿಕ್ಷಕ ಅಪ್ಪಾಸಾಹೇಬಗೌಡ ಮೂಲಿಮನಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಸನಗೌಡ ಈ. ಬಸರಕೋಡ ಹಾಗೂ ಉಪಾಧ್ಯಕ್ಷರಾದ ನೀಲಮ್ಮ ಮಾ.ಪೀರಾಪೂರ ಇವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಗುರ್ಪ ಮೇಟಿ, ಬಸನಗೌಡ ಬಿರಾದಾರ, ಹಣಮಗೌಡ ಮುದ್ನೂರ, ಶರಣಪ್ಪ ಪಾಟೀಲ, ಹಣಮಂತರಾಯಾ ಬಿರಾದಾರ, ನಿಂಗಪ್ಪ ಹೊಸಮನಿ, ಗಂಗಮ್ಮ ಶಂ.ನಾಡಗೌಡ, ಗ್ಯಾನಪ್ಪ ವಾಲಿಕಾರ, ರಾಮಚಂದ್ರ ಹೊಸಮನಿ, ನೇತ್ರಾ ಶಿ.ವಾಲಿಕಾರ, ವೃತ್ತಿಪರ ನಿರ್ದೇಶಕ ಶಾಂತಗೌಡ ಬಿರಾದಾರ, ಗ್ರಾಮದ ಗಣ್ಯರಾದ ಅಯ್ಯನಗೌಡ ನಾಡಗೌಡ, ಬಸನಗೌಡ ಮೇಟಿ, ಶೇಖರಯ್ಯ ಹಿರೇಮಠ, ರುದ್ರಗೌಡ ಪಾಟೀಲ, ರಾಮನಗೌಡ ಬಿರಾದಾರ, ಬಸಪ್ಪ ಹುಡೇದಮನಿ, ರಾಜುಗೌಡ ತಿಳಗೂಳ, ಸುರೇಶಗೌಡ ಕುಪ್ಪಿ, ಸುರೇಶ ಕಾಮರೆಡ್ಡಿ, ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 