ಸಂಘದ ಅಭಿವೃದ್ಧಿಗೆ ಶೇರುದಾರರ ಸಹಕಾರ ಮುಖ್ಯ

ಸಂಘದ ಅಭಿವೃದ್ಧಿಗೆ ಶೇರುದಾರರ ಸಹಕಾರ ಮುಖ್ಯ  Shareholders' cooperation is crucial for the development of the association


ತಾಳಿಕೋಟಿ 16: ಬ.ಸಾಲವಾಡಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದ್ದು, ಶೇರುದಾರರ ಸಹಕಾರ ಮತ್ತು ಪ್ರೇರಣೆಯಿಂದ ಪ್ರಸಕ್ತ ಸಾಲಿನಲ್ಲಿ 5.19 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚನ್ನಪ್ಪಗೌಡ ಬ. ಹೊರಗಿನಮನಿ ಹೇಳಿದರು. ಸೋಮವಾರ ತಾಳಿಕೋಟಿ ತಾಲೂಕಿನ ಬ.ಸಾಲವಾಡಗಿ ಗ್ರಾಮದ ಸಂಘದ ಕಾರ್ಯಾಲಯದ ಆವರಣದಲ್ಲಿ ನಡೆದ 83ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ಪ್ರಸಕ್ತ ಸಾಲಿನಲ್ಲಿ 1,180 ಶೇರುದಾರ ಸದಸ್ಯರನ್ನು ಹೊಂದಿದ್ದು, 35 ಲಕ್ಷ ಠೇವಣಿ ಸಂಗ್ರಹಿಸಿದೆ.

ಶೇರುದಾರರು ತಮ್ಮ ಠೇವಣಿಗಳನ್ನು ಸಂಘದಲ್ಲಿಯೇ ಇರಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಮುಂದಿನಮನಿ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿ, ಶೇರುದಾರರು ಕೇಳಿದ ಪ್ರಶ್ನೆಗಳಿಗೆ ಸಮರ​‍್ಕವಾಗಿ ಉತ್ತರಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚನ್ನಪ್ಪಗೌಡ ಹೊರಗಿನಮನಿ ಅವರನ್ನು ಆಡಳಿತ ಮಂಡಳಿ ಸದಸ್ಯರು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ರಾಜುಗೌಡ ಕೋಳೂರ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಂ. ಪೊಲೀಸ್ ಪಾಟೀಲ, ರಾಜುಗೌಡ ಯಾಳಗಿ, ಗುರ​‍್ಪಗೌಡ ಪಾಟೀಲ, ಮಲ್ಲನಗೌಡ ಬಸರೆಡ್ಡಿ, ಸಂಘದ ಉಪಾಧ್ಯಕ್ಷ ಹೋಬು ರಾಠೋಡ, ನಿರ್ದೇಶಕರಾದ ಬಾಪುಗೌಡ ಪಾಟೀಲ, ಸಾಹೇಬಗೌಡ ಅನಂತರಡ್ಡಿ, ಮಲ್ಲನಗೌಡ ಯಾಳಗಿ, ಸಿದ್ರಾಮಪ್ಪಗೌಡ ಪಾಟೀಲ, ಜಗದೀಶ ದೊಡ್ಡಪೂಜಾರಿ, ಶಬ್ಬೀರ ದರ್ಗಾ, ಬಸಮ್ಮ ಚಂ. ಮೂಲಿಮನಿ, ದೀಪಾ ಹ. ಯಾಳಗಿ, ದೊಡ್ಡಪ್ಪ ದ್ಯಾಮನಾಳ ಸೇರಿದಂತೆ ಸಿಬ್ಬಂದಿ ಹಾಗೂ ಶೇರುದಾರರು ಉಪಸ್ಥಿತರಿದ್ದರು.