ಸೇವಾ ಅಂದರ ಸಂಸ್ಥೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಸೇವಾ ಅಂದರ ಸಂಸ್ಥೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ Seva Andara Sanstha: International Women's Day Celebration

ಲೋಕದರ್ಶನ ವರದಿ 

ರಾಣೆಬೆನ್ನೂರು : 26 ಇಲ್ಲಿನ ಮಾರುತಿ ನಗರದ ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ಶಾಲೆಯಲ್ಲಿ, ನಗರದ " ಸುರಭಿ" ಸೇವಾ ಚಾರಿಟೇಬಲ್ ಟ್ರಸ್ಟ್‌, ತನ್ನ ದ್ವಿತೀಯ ವಾರ್ಷಿಕೋತ್ಸವ ನಿಮಿತ್ತ ವಾಗಿ, ಅಂತರಾಷ್ಟ್ರೀಯ  ಮಹಿಳಾ ದಿನಾಚರಣೆ ಕಾರ್ಯಕ್ರಮವು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ"" ಸುರಭಿ"" ಟ್ರಸ್ಟ್‌ ಅಧ್ಯಕ್ಷ ಶ್ರೀಮತಿ  ವಿನೂತಾ.ರಾಜು ರೇವಣಕರ ಅವರು ಸಮಾಜದಲ್ಲಿ ಸಮಾನತೆ ಕಾಣುವುದು ಪ್ರತಿಯೊಬ್ಬರ ಹಕ್ಕಾಗಬೇಕು.

ಮಹಿಳೆ ತನ್ನ ಕುಟುಂಬದ ನಿರ್ವಹಣೆ ಜೊತೆಗೆ ಸಮಾಜದಲ್ಲಿ ಸಮಾನತೆಗಾಗಿ ನಿತ್ಯವೂ ಶ್ರಮಿಸುತ್ತಿದ್ದಾಳೆ. ಸೇವಾ ಅಂದರ ಸಂಸ್ಥೆಯ ಶಿಕ್ಷಕಿಯರ ಈ ಪವಿತ್ರವಾದ ಕಾರ್ಯವು ಅತ್ಯಂತ ಶ್ಲಾಘ  ನೀಯವಾಗಿದೆ. ಅಂದ, ವಿಕಲಚೇತನ, ಕಿವುಡ, ಮತ್ತು ಮೂಕ ಮಕ್ಕಳ ಸೇವೆ ದೇವರ ಸೇವೆ ಮಾಡಿದಷ್ಟೇ ಪವಿತ್ರವಾಗಿದೆ.      ಸಂಸ್ಥೆಯ ಶಿಕ್ಷಕಿಯರ ಸೇವಾ ಕಾರ್ಯಕ್ಕಾಗಿ  ತಮ್ಮ ಸಂಸ್ಥೆ ಗುರುತಿಸಿ, ನೀರ್ದರಿಸಿದಂತೆ ಸೇವಾ ಸಂಸ್ಥೆಯ  ಶಿಕ್ಷಕಿಯರನ್ನು  ಗುರುತಿಸಿ ಮಹಿಳಾ ದಿನಾಚರಣೆಯ ನಿಮಿತ್ತ ಹೃದಯಸ್ಪರ್ಶಿ  ಸನ್ಮಾನಿಸುವುದರ ಮೂಲಕ ಅಭಿನಂದಿಸಲಾಗುತ್ತಿದೆ ಎಂದರು. ಸೇವಾ ಅಂದರ ಶಾಲೆಯ ಶಿಕ್ಷಕಿಯರಾದ,

ನೇತ್ರಾವತಿ ಮಗ್ಗದ, ಲಕ್ಷ್ಮಿ ಎಸ್, ದುರ್ಗಾಂಬಿಕ,ಎ. ವೈ, ಸೌಮ್ಯ ಎಸ್‌.ಆರ್, ನಾಗರತ್ನ ಎಸ್ ಎಸ್‌. ಸೇರಿದಂತೆ ಮತ್ತಿತರರನ್ನು ಅಭಿನಂದಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಎನ್‌. ಕೆ. ಗಂಗಣ್ಣನವರ, ಅಧ್ಯಕ್ಷ ಎಚ್‌. ಆರ್‌. ಶಿವಕುಮಾರ, ಕಾರ್ಯದರ್ಶಿ ರೇಣುಕಾ ಶಿವಕುಮಾರ, ಟ್ರಸ್ಟಿನ ಉಪಾಧ್ಯಕ್ಷ ಅನಿತಾ ರಾಯ್ಕರ್, ಕಾರ್ಯದರ್ಶಿ ಅನಿತಾ ವಿಠಲಕರ್, ಕೋಶಾಧ್ಯಕ್ಷ ವೀಣಾ ರೇವಣಕಾರ, ಸದಸ್ಯರಾದ ಚಂದ್ರಕಲಾ ರೇವಣೇಕರ್, ಭಾರತಿ ವರ್ಣೇಕರ್, ನಿರ್ಮಲಾ ರೇವಣೇಕರ್, ಪ್ರೀತಿ ಕುರುಡೇಕರ್, ಗಾಂಧಾರಿ ರೇವಣಕರ, ಶೋಭಾ ಕುರಡೇಕರ, ಸಂಗೀತಾ ವರ್ಣೇಕರ, ಕಮಲ ಪಾಲಂಕರ, ಸೇರಿದಂತೆ ಮತ್ತಿತರ ಗಣ್ಯರು ಮಹಿಳೆಯರು ಉಪಸ್ಥಿತರಿದ್ದರು.