ಸೇವಾ ಭದ್ರತೆಗೆ ಒಪ್ಪಿಗೆ: ಪೌರ ನೌಕರರ ಮುಷ್ಕರ ಹಿಂದಕ್ಕೆ
Service security agreed: Civic employees' strike called off
ಸೇವಾ ಭದ್ರತೆಗೆ ಒಪ್ಪಿಗೆ: ಪೌರ ನೌಕರರ ಮುಷ್ಕರ ಹಿಂದಕ್ಕೆ
ಶಿಗ್ಗಾವಿ 31: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಇಟ್ಟಿರುವ 19 ಬೇಡಿಕೆಗಳಾದಂತಹ ಕೆಜಿಐಡಿ ಮತ್ತು ಮುನ್ಸಿಪಲ್ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿ ಸೇವಾ ಭದ್ರತೆನೀಡಲಾಗುವುದು ಎಂದು ಪೌರಾಡಳಿತ ಸಚಿವರ ಆಪ್ತ ಕಾರ್ಯದರ್ಶಿ ಲಿಖಿತವಾಗಿ ನೀಡಿದ ಮೇಲೆ ಮುಷ್ಕರವನ್ನು ಹಿಂಪಡೆಯಲಾಯಿತು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಸಂಕೀರ್ಣದಲ್ಲಿರುವ ಅಂಬೇಡ್ಕರ ಪುತ್ತಳಿಗೆ ಹಾಗೂ ಕಿತ್ತೂರಾಣಿ ಚೆನ್ನಮ್ಮ ಪುತ್ತಳಿಗೆ ಮಾಲಾರೆ್ಣ ಮಾಡಿ ವಿಜಯೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ನಮ್ಮ ಧರಣಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಕ.ರಾ.ಪೌ.ನೌ.ಸಂಘದ ಅಧ್ಯಕ್ಷೆ ಶೈಲಜಾ ಹೆಚ್ ಪಾಟೀಲ ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ, ಕಂದಾಯ ಅಧಿಕಾರಿ ಅಮೀತ, ವ್ಯವಸ್ಥಾಪಕಿ ಮಂಗಳಗೌರ ಪಾಟೀಲ, ರಾಜೇಶ ಕಹಾರ, ಗಿರಿಜಮ್ಮ ಕಮಡೊಳ್ಳಿ, ಯಲ್ಲಪ್ಪ ಹಾದಿಮನಿ, ಮಂಜುನಾಥ ಕಟ್ಟಿಮನಿ, ಪ್ರಶಾಂತ ರಾಠೋಡ, ಎ.ಎ.ಸೌಧಾಗರ, ಲಕ್ಷ್ಮವ್ವ ಬಳ್ಳಾರಿ, ವಿಜಯಲಕ್ಷ್ಮಿ ಬಳ್ಳಾರಿ ಸೇರಿದಂತೆ ಪೌರಕಾರ್ಮಿಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 