ಬಸವ ಪರಿಸರ ಸಂರಕ್ಷಣಾ ಸಮಿತಿ ಪದಾಧಿಕಾರಿಗಳ ಸೇವೆ

 ಬಸವ ಪರಿಸರ ಸಂರಕ್ಷಣಾ ಸಮಿತಿ ಪದಾಧಿಕಾರಿಗಳ ಸೇವೆ Service of Basava Environmental Protection Committee office bearers

ಲೋಕದರ್ಶನ ವರದಿ 

ಹುಬ್ಬಳ್ಳಿ   30:   ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ನಿಗಮದಲ್ಲಿ 38 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿದ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಕನ್ನಡ ಸಾಹಿತ್ಯ ಪರಿಷತ್ತು, ಕೆಎಸ್‌ಆರ್ಟಿಸಿ ಕ್ರೀಯಾ ಸಮಿತಿ, ಚುಟುಕು ಸಾಹಿತ್ಯ ಪರಿಷತ್ತು, ಬಸವ ಪರಿಸರ ಸಂರಕ್ಷಣಾ ಸಮಿತಿ ಸೇರಿದಂತೆ ಇನ್ನೂ ಹಲವು ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಮೃತ್ಯುಂಜಯ ಮಟ್ಟಿ ಅವರ 60ನೆಯ ಹುಟ್ಟುಹಬ್ಬದ ಸಂಭ್ರಮದ ಶುಭ ಸಂದರ್ಭದಲ್ಲಿ   ಹಾಗೂ ಸೇವಾ ನಿವೃತ್ತರಾದ ಪ್ರಯುಕ್ತ   ಸಾಹಿತ್ಯಿಕ , ದಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಬಸವಾಭಿಮಾನಿಗಳು, ಸಮಾಜದ ಮುಖಂಡರು, ಬಂಧುಗಳು,  ಆತ್ಮೀಯರಾದ  ಮೃತ್ಯುಂಜಯ ಮಟ್ಟಿ   ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ   ಮಾಲಾರೆ​‍್ಣ   ಮಾಡಿ ಗೌರವ ಪೂರ್ವಕವಾಗಿ ಆತ್ಮೀಯತೆಯಿಂದ   ಪ್ರೀತಿ, ಹೃದಯ ಸ್ಪರ್ಶಿಯಾಗಿ. ಸನ್ಮಾನಿಸಲಾಯಿತು.        ಪ್ರೀತಿಯಿಂದ  ಜನ್ಮದಿನದ ಶುಭಾಶಯಗಳನ್ನು ಕೋರಿದರು.  

ನಿವೃತ್ತಿ ಜೀವನವು ಪ್ರೀತಿಯ ಮೃತ್ಯುಂಜಯ ಅವರಿಗೆ ದೇವರು ಉತ್ತಮ ಆರೋಗ್ಯ ನೀಡಿ, ಧಾರ್ಮಿಕ , ಸಾಮಾಜಿಕ ಹಾಗೂ ಸಾಹಿತ್ಯ ವಲಯದಲ್ಲಿ ಸೇವೆ ಸಲ್ಲಿಸಲು ಆಶೀರ್ವಾದ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.  ಸುಜಯ್ ಸುರೇಶ್ ಹೊರಕೇರಿ, ಸೋಹನ್ ಸುರೇಶ್ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ , ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,   ಗಾಯತ್ರಿ ಮಟ್ಟಿ, ಕಿರಣ ಮಟ್ಟಿ, ಗೆಳೆಯರು, ಬಂಧುಗಳು, ಹಿರಿಯರು, ಮುಂತಾದವರು ಇದ್ದರು. ಮೃತ್ಯುಂಜಯ ಮಟ್ಟಿ ಅವರು 1966 ರ ಮಾರ್ಚ್‌ 26ರಂದು ಜನನವಾಗಿದ್ದು. ಅಕ್ಕಿಹೊಂಡ ಕನ್ನಡ ಪ್ರಾಥಮಿಕ ಶಾಲೆ 3 ರಲ್ಲಿ ಪ್ರಾಥಮಿಕ, ಶ್ರೀ ದುರ್ಗಾದೇವಿ ಮಾದ್ಯಮಿಕ ಮಾದ್ಯಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣ ಮುಗಿಸಿದರು. ಎಸ್ ಎಸ್ ಕೆ ಜೂನಿಯರ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ನೆಹರು ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದಾರೆ.  

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 1987ರಲ್ಲಿ ಕಿರಿಯ ಸಹಾಯಕರಾಗಿ ವೃತ್ತಿ ಆರಂಭ. 2004ರಲ್ಲಿ ಸಹಾಯಕ ಉಗ್ರಾಣ ರಕ್ಷಕ ಹುದ್ದೆಗೆ ಬಡ್ತಿ . 2009 ರಿಂದ 2013ರವರೆಗೆ ವಾಯುವ್ಯ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಗಿದ್ದ  ಮಲ್ಲಿಕಾರ್ಜುನ  ಸಾವಕಾರ ಹಾಗೂ ಎಂ ಎಸ್ ಕರಿಗೌಡ್ರ ಅವರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.       2011 ರಿಂದ 2022ರವರೆಗೆ ಕೇಂದ್ರ  ಕಛೇರಿ ಉಗ್ರಾಣ ಶಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2021ರಲ್ಲಿ ಉಗ್ರಾಣ ರಕ್ಷಕ ಹುದ್ದೆಗೆ ಬಡ್ತಿ.    2022 ರಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗಕ್ಕೆ ವರ್ಗಾವಣೆ, ಉಗ್ರಾಣ ಅಧೀಕ್ಷಕ ರಾಗಿ ಬಡ್ತಿ.      2019 ರಿಂದ 2022ರವರೆಗೆ ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷರಾಗಿದ್ದ , ಮಾಜಿ ಶಾಸಕ ವಿ ಎಸ್ ಪಾಟೀಲ ಅವರ ಆಪ್ತ ಸಹಾಯಕರಾಗಿ ಸೇವೆ ಮಾಡಿದ್ದಾರೆ.