ವಿದ್ಯಾರ್ಥಿಗಳಿಗೆ ವಿಜ್ಞಾನದ ಜ್ಞಾನ ಅವಶ್ಯ: ಕೆ ಸಿ ಸಂಖದ
Scientific knowledge is essential for students: K.C. Sankhada
ಲೋಕದರ್ಶನ ವರದಿ
ಇಂಡಿ 27: ತಾಲ್ಲೂಕಿನ ಹೊರ್ತಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಪ್ರಾತ್ಯಕ್ಷಿಕ ಪ್ರಯೋಗಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಹೋರ್ತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಕೆ ಬಿ ಸಂಖದ ಅವರು ಸಸಿಗೆ ನೀರೂಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ಸರ್ಕಾರಿ ಪ್ರೌಢಶಾಲೆಯಲ್ಲಿ 132 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂದಿನ ಯುಗದಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಜ್ಞಾನ ಅತಿ ಅವಶ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಿದೆ ಎಂದು ಮುಖ್ಯ್ಯೋ ಪಾಧ್ಯಾಯ ಕೆ ಬಿ. ಸಂಖ ಹೇಳಿಕೆ.
ನಂತರ ಮಾತನಾಡಿ ಮಾರ್ಡನ್ ಕೋಚಿಂಗ್ ಕ್ಲಾಸ್ ಸಂಸ್ಥಾಪಕರಾದ ಎಚ್ ಆರ್ ಬೋಸಗಿ ಅವರು ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆಯು ಬೇಗ ಅರಿಕೆಗೆ ತುಂಬಾ ಸಹಕಾರಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಗಳ ಪ್ರಯೋಗಗಳ ಪ್ರಾತ್ಯಕ್ಷಿಕೆಯಿಂದ ಬೇಗ ಅರಿಕೆಗೆ ತುಂಬಾ ಸಹಕಾರಿ ನೀಡಲಿದೆ ಎಂದು ಹೇಳಿದರು. ಹೊರ್ತಿಯ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆಯಲ್ಲಿ ಇತ್ತೀಚಿಗೆ ವಿಜ್ಞಾನ ಪ್ರಾತ್ಯಕ್ಷಿಕ ಪ್ರಯೋಗಗಳ ಪ್ರಾತ್ಯಕ್ಷಿಕೆ ನಡೆಸಿ.ಶಿಕ್ಷಣ ಸಂಯೋಜಕ ಎನ್ ಜಿ. ಸಿನಖೇಡ ಸೇರಿದಂತೆ ಅನೇಕರು ಮಾತನಾಡಿದರು.
ಹೊರ್ತಿ ಕೆಜಿಎಸ್ ಶಾಲೆಯ ಮುಖ್ಯ್ಯೋಪಾಧ್ಯಾಯ ಎಸ್ ಎಸ್. ಮಕಣಾಪುರ ಅಧ್ಯಕ್ಷತೆ ವಹಿಸಿದ್ದರು.ಹೊರ್ತಿ ಗ್ರಾ.ಪಂ ಮಾಜಿ ಸದಸ್ಯ ಮಲ್ಲು ಭೋಸಗಿ, ಎಸ್ ಡಿಎಂಸಿ ಅಧ್ಯಕ್ಷ ಕಾಂತು ದಳವಾಯಿ, ಎಂಪಿಎಸ್ ಶಾಲಾ ಮುಖ್ಯ ಶಿಕ್ಷಕಿ ಎಸ್ ಸಿ.ಬೊಮ್ಮನಹಳ್ಳಿ, ಸೋಜಾ ಮಸಳಿಕೇರಿ ಕಾಂತುಗೌಡ ಪಾಟೀಲ, ಕೆ ಟಿ.ಕಾತ್ರಾಳ, ಪೂಜಾ ಕಟ್ಟಿಮನಿ, ರಕ್ಷಿತ ಹನಗಂಡಿ, ವಿ ಡಿ. ಯಲಗಣ್ಣವರ, ಸುರೇಖಾ ನಾಯಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸೋಜಾ ಮಸಳಿಕೇರಿ ಸ್ವಾಗತಿಸಿದರೆ.ಕೆ ಬಿ.ಸಂಖ ವಂದಿಸಿದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 