ವಿದ್ಯಾರ್ಥಿಗಳಲ್ಲಿನ ಕಲೆಗಳನ್ನು ಹೊರತರುವ ಶಾಲಾ-ಕಾಲೇಜುಗಳ ಪ್ರಯತ್ನ ಶ್ಲಾಘನೀಯ: ಕಾಂಬಳೆ

ವಿದ್ಯಾರ್ಥಿಗಳಲ್ಲಿನ ಕಲೆಗಳನ್ನು ಹೊರತರುವ ಶಾಲಾ-ಕಾಲೇಜುಗಳ ಪ್ರಯತ್ನ ಶ್ಲಾಘನೀಯ: ಕಾಂಬಳೆ Schools and colleges' efforts to bring out the arts in students are commendable: Kambale

                   ಜಮಖಂಡಿ 20: ಶಿಕ್ಷಣ ಜೊತೆಗೆ ಮಕ್ಕಳು ಆಟ, ಪಠ್ಯೇತರ, ಸಂಸ್ಕೃತಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಚಿತ್ರಕಲೆ, ಹಾಡು, ನೃತ್ಯ, ಸಂಗೀತ, ಈಜು ಹೀಗೆ ಹಲವಾರು ಬಗೆಯ ಕಲೆಗಳು ತಮ್ಮಲ್ಲಿ ಅಡಗಿರುತ್ತದೆ. ಅದು ಹೊರತರುವ ಪ್ರಯತ್ನವನ್ನು ಶಾಲಾ-ಕಾಲೇಜುಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಪನಿರ್ದೇಶಕ ಪುಂಡಲೀಕ ಕಾಂಬಳೆ ಹೇಳಿದರು. ನಗರದ ಬಸವಜೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ಸಭಾ ಭವನದಲ್ಲಿ ನಡೆದ 38 ಕಾಲೇಜಿನ 537 ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳ ಸಮಾರೋಪ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.  

                   ಮಕ್ಕಳಲ್ಲಿ ಪ್ರತಿಯೊಂದು ಕಲೆ ಅಡಗಿರುತ್ತದೆ. ಅತಂಹ ಕಲೆಯನ್ನು ಹೊರ ತರಬೇಕಾದರೆ ಒಳ್ಳೆಯ ವೇದಿಕೆಯಲ್ಲಿ ಭಾಗವಹಿಸಿಬೇಕು. ಕೇವಲ ಬಹುಮಾನಗಳನ್ನು ಪಡೆದುಕೊಳ್ಳುವದು ಮುಖ್ಯವಲ್ಲ. ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವದು ಬಹಳ ಮುಖ್ಯ. ಕೆಲವಂದಿಷ್ಟು ವಿದ್ಯಾರ್ಥಿಗಳಲ್ಲಿ ಕಾಡಿಮಿ ಕಲೆ, ಜಾನಪದ, ಸಾಹಿತ್ಯ, ಶರಣರ ಸಾಹಿತ್ಯ, ಗೀಗಿ ಪದಗಳು, ಚೌಡಕಿ ಪದಗಳನ್ನು ಉಳಿಸಿ ಬೆಳಸಬೇಕಾಗಿದೆ. ಕೇವಲ ಓದುವದರಿಂದ ಜ್ಞಾನ ಪಡೆದುಕೊಳ್ಳಬಹುದು ಆದರೆ ಸಾಹಿತ್ಯದಿಂದ ವಿದ್ಯಾರ್ಥಿಗಳು ಮುಂದೆ ಬರಬೇಕಾಗಿದೆ ಎಂದರು.  

                  ಆಡಳಿತಾಧಿಕಾರಿ ಪ್ರೋ. ಬಸವರಾಜ ಕಡ್ಡಿ ಮಾತನಾಡಿ, ಬೌದ್ಧಿಕವಾಗಿ ಸವಾಂರ್ಗೀಣ ದೇಹ ಸದೃಢವಾಗಬೇಕಾಗಿದೆ. ಮಾನಸಿಕ ಬೆಳವಣಿಗೆ ವಿದ್ಯಾರ್ಥಿಗಳು ಹೊರ ಬರಬೇಕಾದರೆ ಜ್ಞಾನ, ಪ್ರಾಣಾಯಾಮ ಮಾಡುವುದರಿಂದ ದೇಹ ಸದೃಢವಾಗಿರುವ ಕಾರಣ ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಸಂಗೀತ, ನಾಟ್ಯ ಹೀಗೆ ಹಲವಾರು ಕಲೆಯಲ್ಲಿ ಪ್ರತಿಭೆಗಳು ಅಡಗಿರುತ್ತದೆ. ಅದನ್ನು ಹೊರತರಬೇಕಾದರೆ  ಸ್ಪರ್ಧೆಯಲ್ಲಿ ಭಾಗವಹಿಸಿದರೆ ಮಾತ್ರ ತಾವುಗಳು ಮುಂದೆ ಬರಲು ಸಾಧ್ಯವಾಗುತ್ತದೆ. ಉತ್ತಮ ಆಚಾರ, ವಿಚಾರದಲ್ಲಿ ಬೆಳದರೆ ಮಾತ್ರ ಸವಾಂರ್ಗೀಣ ಬೆಳವಣಿಗೆಯಾಗಲು ಸಾಧ್ಯ ಎಂದರು. 

               ನೋಡಲ್ ಕಾಲೇಜ ಪ್ರಾಚಾರ್ಯ ಶ್ರೀಶೈಲ ನಾಯಕೋಡೆ, ಹುನ್ನೂರ ಸರಕಾರಿ ಪ,ಪೂ,ಕಾಲೇಜ ಪ್ರಾಚಾರ್ಯ ಶ್ರೀಶೈಲ ಮುಂಡಗನೂರ, ಮೈಗೂರ ಸರಕಾರಿ ಪ,ಪೂ ಕಾಲೇಜ ಪ್ರಾಚಾರ್ಯ ಎಂ.ಎಲ್‌.ಪಾಟೀಲ, ಬಸವರಾಜ ನಲ್ಲವಡೆ ವೇದಿಕೆಯಲ್ಲಿ ಉಪಸ್ಥಿತರಿದರು. ಬಸವಜೋತಿ ಪ.ಪೂ.ಕಾಲೇಜ ಪ್ರಾಚಾರ್ಯ ಡಾ.ಗಿರಡ್ಡಿ ಸ್ವಾಗತಿಸಿ. ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಮೌನೇಶ ಬಡಿಗೇರ, ಶ್ರೀಕಾಂತ ಬೆಳಿಹಾಳ ನಿರೂಪಿಸಿದರು. ಶಿಕ್ಷಕಿ ಮಾಹಾದೇವಿ ಟಕ್ಕಳಕಿ ವಂದಿಸಿದರು. ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪ್ರಥಮ, ತೃತೀಯ, ದ್ವಿತೀಯ ಸ್ಥಾನ ಪಡೆದುಕೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.