ಸತ್ತಿಗೇರಿ ರಾಮಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಣೆ
Sattigeri Ramalingeshwara Swamy Jatra Mahotsava celebrated with great grandeur
ಯರಗಟ್ಟಿ, ಸೆ. 8: ತಾಲೂಕಿನ ಸತ್ತಿಗೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮಾವಳಿ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ರಾಮಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಶಾಸಕ ವಿಶ್ವಾಸ ಅವರು ಭಾಗವಹಿಸಿ ಶ್ರೀದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ರಾಮಲಿಂಗೇಶ್ವರನ ಆಶೀರ್ವಾದ ಸದಾ ಸವದತ್ತಿ ಕ್ಷೇತ್ರದ ಸಮಸ್ತ ಜನತೆಯ ಮೇಲಿರಲಿ. ನಾಡಿನಲ್ಲಿ ಸಮೃದ್ಧ ಮಳೆ, ಉತ್ತಮ ಬೆಳೆ ಹಾಗೂ ರೈತರ ಬಾಳಿನಲ್ಲಿ ಚೈತನ್ಯ ನೆಲೆಸಲಿ ಎಂದು ಶಾಸಕ ವಿಶ್ವಾಸ ಪ್ರಾರ್ಥಿಸಿದರು. ಸಂಜೆ ಸಕಲ ವಾದ್ಯಮೇಳಗಳೊಂದಿಗೆ ರಾಮಲಿಂಗೇಶ್ವರ ರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಭಕ್ತರು ಕಾರಿಕ ಬಾಳೆಹಣ್ಣು ಎಸೆದು ಭಕ್ತಿಪರವಶತೆಯಲ್ಲಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಗಾರೆಪ್ಪ ಹರಳಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಸಾಬ್ ಬಾಗವಾನ, ಡಾ. ವಿ. ಎಸ್. ವಾಲಿ, ಉಮೇಶ ಮಾಕುಂಡಣ್ಣವರ, ಶಿವಾನಂದ ಯರಗಣವಿ, ಶಿವಾನಂದ ಬಿಳಿಗಾರ, ಶ್ರೀಶೈಲ ಯರಗಣವಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಬಿ. ಪಾಟೀಲ, ಷಣ್ಮುಖ ಬಿಳಿಗಾರ, ಬಸವರಾಜ ಹೂಗಾರ, ಸುಧೀರ ಗೋಡಿ, ರಾಮಣ್ಣ ಹೂಗಾರ, ಬಸವರಾಜ ರಂಗಣ್ಣವರ, ಪ್ರವೀಣ ರೋಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 