'ನಿಂಗವ್ವ...'ನಿಗೆ ಸಾಥ್ ನೀಡಿದ ಸ್ಯಾಂಡಲ್‌ವುಡ್ ಸೆಲೆಬ್ರಿಟಿ ದಂಪತಿಗಳು
Sandalwood celebrity couples who supported 'Ningavva...'
'ಲ್ಯಾಂಡ್ ಲಾರ್ಡ್' ಸುಂದರ ಗೀತೆಗೆ ಪ್ರೇಕ್ಷಕರು ಫಿದಾ!
ದುನಿಯಾ ವಿಜಯ್ ಕುಮಾರ್ ಹಾಗೂ ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿರುವ 'ಲ್ಯಾಂಡ್ ಲಾರ್ಡ್' ಚಿತ್ರದ 'ನಿಂಗವ್ವ ನಿಂಗವ್ವ ...' ಸಾಂಗ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿದೆ. ಆನಂದ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ರೀಲೀಸ್ ಆಗಿರುವ ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದು, ವಿಜಯ ಪ್ರಕಾಶ್ ಹಾಗೂ ಅನನ್ಯ ಭಟ್ ಹಾಡಿದ್ದಾರೆ. ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಇದು ನಿಂಗವ್ವ ಹಾಗೂ ರಾಚಯ್ಯ ಪ್ರೇಮ ಗೀತೆಯಾಗಿದ್ದು, ದಾಂಪತ್ಯದಲ್ಲಿ ಇರುವಂತ ಸ್ವಾರಸ್ಯಕರ ಸಂಗತಿಯನ್ನು ಹಾಡಿನಲ್ಲಿ ತೋರಿಸಲಾಗಿದೆ. ಹಾಡಿನ ಸಾಹಿತ್ಯ, ಸಂಗೀತದಷ್ಟೇ ಪ್ರೇಕ್ಷಕರು ಛಾಯಾಗ್ರಹಣ ಮತ್ತು ನಟರನ್ನು ಇಷ್ಟ ಪಡುತ್ತಿದ್ದಾರೆ. ಜಡೇಶ್ ಕೆ. ಹಂಪಿ ನಿರ್ದೇಶನ ಮಾಡಿರುವ ಈ ಚಿತ್ರವನ್ನು ಸಾರಥಿ ಫಿಲ್ಮಸ್ ಬ್ಯಾನರ್‌ನಲ್ಲಿ ಹೇಮಂತ್ ಗೌಡ ಕೆ.ಎಸ್ ಹಾಗೂ ಕೆ.ವಿ. ಸತ್ಯಪ್ರಕಾಶ್ ನಿರ್ಮಾಣ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಸತ್ಯಪ್ರಕಾಶ್ 'ನಮ್ಮ ಮತ್ತು ಆನಂದ ಆಡಿಯೋ ಭಾಂದವ್ಯ ಚನ್ನಾಗಿದೆ. ಹಾಗಾಗಿ ಸಿನಿಮಾವನ್ನು ಅವರಿಗೆ ಕೊಟ್ಟೆ. ಇನ್ನೂ ಅಜನೀಶ್ ಲೋಕನಾಥ್ ಅದ್ಭುತವಾಗಿ ಕೆಲಸ ಮಾಡಿದ್ದಾರೆ. 14 ವರ್ಷಗಳ ಹಿಂದೆ 'ಸಾರಥಿ' ಮಾಡಿದ್ದೆ. ನಂತರ ಚಿತ್ರ ನಿರ್ಮಾಣಕ್ಕೆ ಧೈರ್ಯ ಮಾಡಲಿಲ್ಲ. ಒಂದು ದಿನ ಜಡೇಶ್ ಬಂದು ಈ ಕಥೆ ಹೇಳಿದಾಗ ತುಂಬಾ ಇಷ್ಟವಾಯ್ತು. ಹಾಗಾಗಿ ಒಂದಿಷ್ಟು ಜನರ ಸಹಕಾರದಿಂದ ಇಂದು ಸಿನಿಮಾ ಮಾಡಿದ್ದೇವೆ. ಈ ಸಿನಿಮಾ ಸೋಲು ಗೆಲುವು ನಾನೆ ತಗೊತಿನಿ ಎಂದು ಜಡೇಶ್ ಹೇಳಿದಾಗ ತುಂಬಾ ಖುಷಿ ಆಯ್ತು. ತಂಡದ ಶ್ರಮ ತುಂಬಾ ಇದೆ. ಒಟ್ಟು 90 ದಿನಗಳ ಶೂಟಿಂಗ್‌ನ ಪೈಕಿ 60 ದಿನ ಹಗಲು ರಾತ್ರಿ ಶೂಟ್ ಮಾಡಲಾಗಿದೆ. ನಾನು ಈ ಚಿತ್ರವನ್ನು ನಿರ್ಮಾಪಕ ಆಗಿ ಮಾಡಿಲ್ಲ ಮ್ಯಾನೇಜರ್ ಆಗಿ ಮಾಡಿದ್ದೇನೆ' ಎಂದರು. ಮತ್ತೋರ್ವ ನಿರ್ಮಾಪಕ ಹೇಮಂತ್ ಗೌಡ, 'ಎಲ್ಲರ ಸಹಕಾರದಿಂದ ಈ ಸಿನಿಮಾ ಆಯ್ತು. ಜಡೇಶ್ ಹಾಗೂ ಅಜನೀಶ್ ಅವರ ಕಾಂಬಿನೆಷನ್ ಅದ್ಭುತವಾಗಿ ವರ್ಕ್ ಆಗಿದೆ. ನಮ್ಮ ಚಿತ್ರದ ಎಲ್ಲಾ ಕಂಟೆಂಟ್‌ಗಳು ಜನರಿಗೆ ತುಂಬಾ ಇಷ್ಟ ಆಗುತ್ತಿವೆ. ಹಾಗೆಯೇ ಸಿನಿಮಾ ಕೂಡು ಗೆಲ್ಲುತ್ತದೆ ಎಂಬ ವಿಶ್ವಾಸವಿದೆ' ಎನ್ನುವರು.
ಹಾಡಿಗೆ ಸಾಹಿತ್ಯ ಬರೆದಿರುವ ಯೋಗರಾಜ್ ಭಟ್, 'ನನ್ನ ಹಾಗೂ ವಿಜಯ್ ಒಡನಾಟದಿಂದ ಈ ಹಾಡು ಹುಟ್ಟಿದೆ. ದಾಂಪತ್ಯದಲ್ಲಿ ಮಕ್ಕಳ ಪಾರ್ಟ್ ಮುಖ್ಯ. ಮಕ್ಕಳಾದ ಮೇಲೆ ಇರುವ ಈ ಪ್ರೀತಿಯೇ ನಮ್ಮ ಸಂಸ್ಕೃತಿ ತೋರಿಸುತ್ತದೆ. ಈ ಹಾಡು ನಿಂತರೆ ಸಿನಿಮಾಗೆ ಬಹಳ ಶಕ್ತಿ ಬರುತ್ತದೆ. ಇದೊಂದು ದೊಡ್ಡ ಸಿನಿಮಾ ಆಗಲಿ' ಎಂದು ಹೇಳಿದರು. ವೇದಿಕೆಯಲ್ಲಿ ನೆನೆಪಿರಲಿ ಪ್ರೇಮ-ಜೋತಿ, ಕೃಷ್ಣ-ಮಿಲನ ಹಾಗೂ ತರುಣ ಸುದೀರ್-ಸೋನಾಲ್ ದಂಪತಿಗಳು ಚಿತ್ರಕ್ಕೆ ಶುಭ ಹಾರೈಸಿದರು. ಈ ಹಾಡಿಗೆ ಭೂಷನ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಮಾಸ್ತಿ ಹಾಗೂ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 