ಮಕ್ಕಳ ವಿದ್ಯಾರ್ಜನೆಗೆ ಸಮೀರಬಾಯಿ ಸೋಮಯ್ಯಾ ಅವರ ಕೊಡುಗೆ ಅಪಾರ : ದಿನೇಶ ಶರ್ಮಾ

Sameerbai Somaiya's contribution to children's education is immense: Dinesh Sharma

ಸೋಮಯ್ಯಾ ಗ್ರಾಮೀಣ ವಿಕಾಸ ಕೇಂದ್ರದಿಂದ  ಈ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ  

ಮಹಾಲಿಂಗಪುರ 28: ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಅನ್ನುವುದು ವ್ಯಾಪಾರದ ವಸ್ತು ಆಗಿದೆ. ಮಕ್ಕಳಿಗೆ ವಿದ್ಯೆ ಕಲಿಸುವುದೇ ಕಷ್ಟವಾಗುತ್ತಿದೆ, ನರ್ಸರಿ, ಎಲ್ ಕೆ ಜಿ ಯಿಂದ ಆರಂಭವಾಗಿ ಒಬ್ಬ ವಿದ್ಯಾರ್ಥಿ ಪದವಿ ಮುಗಿಸಿ ಹೊರಬರಕೆಂದರೆ ಪಾಲಕರು ತಮ್ಮ ಇದ್ದ ಬಿದ್ದ ಆಸ್ತಿ ಮಾರಿ ಕಲಿಸುತ್ತಿರುವುದು, ದುರಂತ ಆದರೂ ಇಂತಹ ದಿನಮಾನಗಳಲ್ಲೂ ಖಾಸಗಿ ಸಂಸ್ಥೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರಶೀಪ ಕೊಡುತ್ತಿರುವುದು ಗೋದಾವರಿ ಬಯೋ ರಿಪೇನರಿಜ್ ನಮ್ಮ ಹೆಮ್ಮೆ. ಇದು ರಾಜ್ಯದಲ್ಲೇ ಮೊದಲು ಖಾಸಗಿ ಸಂಸ್ಥೆಯಾಗಿದೆ. ಎಂದು ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿಗಳಾದ ದಿನೇಶ ಶರ್ಮಾ ಹೇಳಿದರು. 

 ಸಮೀರವಾಡಿಯ ಶಿವಲಿಂಗೇಶ್ವರ್ ದೇವಸ್ಥಾನದ ಸಭಾ ಭವನದಲ್ಲಿ ಸೋಮಯ್ಯಾ ಗ್ರಾಮೀಣ ವಿಕಾಸ ಕೇಂದ್ರ ಮತ್ತು ಸೋಮಯ್ಯಾ ವಿದ್ಯಾವಿಹಾರ ಮುಂಬೈ ಇವರ ಆಶ್ರಯದಲ್ಲಿ ನಡೆದ ಈ ವರ್ಷದ ಪ್ರತಿಭಾ ಪುರಸ್ಕಾರ "ಹೆಲ್ಪ ಎ ಚೈಲ್ಡ್‌ ಶಿಷ್ಯ ವೇತನ ವಿತರಣಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ಎಲ್ಲರ ಸಹಕಾರದಿಂದ ಯಶಸ್ಸು ಸಾಧ್ಯ, ಇಂದಿನ ಮಕ್ಕಳಿಗೆ ವಿಧ್ಯೆ ಜೊತೆಗೆ ವಿನಯ್ ಮತ್ತು ಸಂಸ್ಕಾರ ಕೊಡುವುದು ಬಹಳ ಮುಖ್ಯವಾಗಿದೆ, ಸಹ ಕುಟುಂಬ ಪಾರಿವಾರದೊಂದಿಗೆ ಬೆರೆತು ಎಲ್ಲರನ್ನೂ ಗೌರವಿಸುವುದನ್ನು ಕಲಿಸಬೇಕು ಎಂದರು. 

ಈ ಯೋಜನೆ 2001 ರಲ್ಲಿ ಒಬ್ಬ ವಿದ್ಯಾರ್ಥಿಯಿಂದ ಆರಂಭವಾಗಿ ಈ ವರ್ಷದ 662 ಫಲಾನುಭವಿಗಳು ಸೇರಿ ಇಲ್ಲಿಯವರೆಗೆ 11554 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವೈದ್ಯಕೀಯ, ಇಂಜಿನಿಯರಿಂಗ್, ಬಿ ಎಡ್, ಬಿ ಎಸಿ, ನಸಿಂರ್ಗ್, ಪ್ಯಾರಾ ಮೆಡಿಕಲ್, ಬಿ ಸಿ ಎ, ಬಿ ಬಿ ಎ, ಬಿಕಾಂ, ಬಿಎ, ಡಿಪ್ಲೋಮಾ, ಪಿ ಯು ಸಿ ಕಲೆ,ವಿಜ್ಞಾನ, ಕಾಮರ್ಸ್‌, ಸೇರಿ ವಿವಿಧ ಕೊರ್ಸಗಳ ವಿದ್ಯಾಭ್ಯಾಸಕ್ಕೆ ,ಸುಮಾರು ಇಲ್ಲಿಯವರೆಗೆ ಒಟ್ಟು 7,98,96,658 ರೂಪಾಯಿಗೂ ಹೆಚ್ಚು ಸಹಾಯ ಮಾಡಲಾಗಿದೆ,ಈ ಯೋಜನೆ ರೂವಾರಿಗಳಾದ ಸಮೀರಭಾಯಿ ಮತ್ತು ಅಮೃತಾಬೆನ ಬಡಮಕ್ಕಳ ವಿದ್ಯಾಸಕ್ಕೆ ಅನುಕೂಲವಾಗಲೆಂದು ರೂಪಿಸಿರುವ ಯೋಜನೆ ಇದು 

ಈ ಯೋಜನೆಯ ಸಹಾಯ ಪಡೆದು ಹಲವಾರು ವಿದ್ಯಾರ್ಥಿಗಳು ಇಂದು ಹಲವಾರು ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆ ಸಹಾಯ ಪಡೆದು ಉನ್ನತ ಸ್ಥಾನದಲ್ಲಿರುವವರು ಇತರರಿಗೆ ಸಹಾಯ ಮಾಡುವ ಪ್ರವೃತಿ ಬೆಳೆಸಿಕೊಳ್ಳಬೇಕು, ನಮ್ಮ ಸಂಸ್ಥೆಯ ಮೇಲೆ ನಿಮ್ಮೆಲ್ಲರ ಪ್ರತಿ ವಿಶ್ವಾಸ ಹೀಗೆ ಇರಲಿ ಎಂದು ಹೇಳಿದರು. 

ಈ ವರ್ಷದ ನಾಲ್ಕು ಫಲನುಭವಿಗಳಿಗೆ ಲ್ಯಾಪ ಟ್ಯಾಪ ಸೇರಿ ಉಳಿದ ಫಲಾನುಭವಿಗಳಿಗೆ ಚೆಕ್ಕ ವಿತರಿಸಲಾಯಿತು,ಉಳಿದ ಎಲ್ಲ ಫಲಾನುಭವಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. 

ಈ ಸಂದರ್ಭದಲ್ಲಿ , ವಿ ಖಿಲಾರೆ, ಎಂ ಚೌಸ,ವಿಜಯಕುಮಾರ ಕಣವಿ, ಆರ್ ಶೆಟ್ಟರ, ಸೋಮಶೇಖರ್ ಪೇಟಿಮನಿ, ಕೃಷ್ಣ ಗೌಡರ, ಶ್ವೇತಾ ಜಾಧವ, ಆರ್ ಸೋನವಾಲ್ಕರ, ಆನಂದ ಕೆತಬಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು, ಅಕ್ಷತಾ ಪಾರ್ಥನೆ ಸಲ್ಲಿಸಿದರು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪಾಲಕರು ಸಿಬ್ಬಂದಿ ವರ್ಗದವರು ರೈತರು ಸೇರಿ ಹಲವರು ಭಾಗವಹಿಸಿದರು ಕಾರ್ಯಕ್ರಮವನ್ನು ಕಣವಿಯವರು ನಿರೂಪಿಸಿ ವಂದಿಸಿದರು.