ಸಲೀಂ ಅಹ್ಮದ್ ಅವರ ಹುಟ್ಟು ಹಬ್ಬವನ್ನು ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಆಚರಣೆ

ಸಲೀಂ ಅಹ್ಮದ್ ಅವರ ಹುಟ್ಟು ಹಬ್ಬವನ್ನು  ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಆಚರಣೆ Salim Ahmed's birthday celebrated at the school for children with special needs

                ಹಾವೇರಿ 02 : ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಬಳಗದವರ ವತಿಯಿಂದ ಅರ್ಥಪೂರ್ಣವಾಗಿ ಇಲ್ಲಿನ ಇಜಾರಿ ಲಕಮಾಪುರದಲ್ಲಿರುವ ಜ್ಯೋತಿ ವಿಶೇಷ ಚೇತನ ಮಕ್ಕಳ ವಸತಿಯುತ ಶಾಲೆಯಲ್ಲಿ ಆಚರಣೆ ಮಾಡಲಾಯಿತು. ವಸತಿಯುತ ಶಾಲೆಯಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಸಲೀಂ ಅಹ್ಮದ್ ಅವರು ತಮ್ಮ ಹುಟ್ಟು ಹಬ್ಬವನ್ನು ಪ್ರತಿ ವರ್ಷವೂ ವಿಶೇಷವಾಗಿ ಆಚರಿಸುತ್ತಾ ಬರುತ್ತಿದ್ದು, ಕೇಕನ್ನು ಮಕ್ಕಳಿಂದ ಕತ್ತರಿಸಿ ವಿಶೇಷ ಚೇತನರ ಮಕ್ಕಳಿಗೆ ತಮ್ಮ ಕೈಯಾರೆ ತಿನ್ನಿಸಿದರು.

                ಅವರ ಅಭಿಮಾನಿಗಳ ಬಳಗದವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಬಟ್ಟೆಯನ್ನು ವಿತರಣೆ ಮಾಡಿದರು. ಈ ಸಂಭ್ರಮದಲ್ಲಿ ಮಾತನಾಡಿದ ಸಲೀಂ ಅಹ್ಮದ್ ಪ್ರತಿ ವರ್ಷವೂ ಹಾವೇರಿ ಜಿಲ್ಲೆಯ ನಮ್ಮ ಅಭಿಮಾನಿಗಳ ಬಳಗದವರು ವಿಶಿಷ್ಟವಾಗಿ ಆಚರಣೆ ಮಾಡುತ್ತಿರುವುದು ಸಂತೋಷವನ್ನು ಉಂಟು ಮಾಡುತ್ತದೆ ಹಾಗಾಗಿ ವಿಶೇಷ ಚೇತನರ ಮಕ್ಕಳೊಂದಿಗೆ ಹುಟ್ಟು ಆಚರಿಸಿಕೊಳ್ಳುವುದು ಹೆಮ್ಮೆ ಅನಿಸುತ್ತದೆ.ಸರಳವಾಗಿ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಣೆ ಮಾಡುವ ಮೂಲಕ ವಿಶೇಷ ಚೇತನರ ಮಕ್ಕಳಿಗೆ ನಮ್ಮೊಂದಿಗೆ ಎಲ್ಲರೂ ಇದ್ದಾರೆ ಎಂಬ ಭಾವನೆ ಮೂಡುತ್ತದೆ.  

               ಹೊಸ ವರ್ಷದ ಈ ದಿನ ಎಲ್ಲರಿಗೂ ಆರೋಗ್ಯ ಆಯುಷ್ಯ ದಯಪಾಲಿಸಲಿ. ನಮ್ಮ ಅಭಿಮಾನಿಗಳು,ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದು,ಎಲ್ಲರಿಗೂ ಸಲೀಂ ಅಹ್ಮದ್ ಅವರು  ಧನ್ಯವಾದಗಳನ್ನು ತಿಳಿಸಿದರು.       ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ ಎಫ್ ಎನ್ ಗಾಜೀಗೌಡ್ರ,ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಕೊಟ್ರೇಶಪ್ಪ ಬಸೇಗಣ್ಣಿ ಮುಖಂಡರಾದ ಡಿ ಬಸವರಾಜ, ಪ್ರಕಾಶಗೌಡ ಪಾಟೀಲ,ಜಮೀರ ಅಹ್ಮದ ಜಿಗಿರಿ,ನೂರ ಅಹ್ಮದ್ ಕರ್ಜಗಿ, ಶಂಕರ ಮೆಹರವಾಡೆ,ಕಾಂಗ್ರೆಸ್ ಪಕ್ಷದ ಮುಖಂಡರು, ಗಣ್ಯರು,ಕಾರ್ಯಕರ್ತರು, ವಸತಿಯುತ ಶಾಲೆಯ ಕಾರ್ಯವೃಂದದವರು,ಸಲೀಂ ಅಹ್ಮದ್ ಅಭಿಮಾನಿಗಳ ಬಳಗದವರು ಮತ್ತು ವಿಶೇಷ ಚೇತನ ಮಕ್ಕಳು ಪಾಲ್ಗೊಂಡಿದ್ದರು.