ತಾಳಿಕೋಟೆಯಲ್ಲಿ ಎಸ್‌ಐಆರ್ ವಿಶೇಷ ಪರೀಶೀಲನೆ: ವಿದ್ಯಾರ್ಥಿಗಳಿಂದ ಪ್ರಭಾತಪೇರಿ

ತಾಳಿಕೋಟೆಯಲ್ಲಿ ಎಸ್‌ಐಆರ್ ವಿಶೇಷ ಪರೀಶೀಲನೆ: ವಿದ್ಯಾರ್ಥಿಗಳಿಂದ ಪ್ರಭಾತಪೇರಿ  SIR special inspection in Talikote: Students protest

ತಾಳಿಕೋಟೆ 29: ಎಸ್‌ಐಆರ್ ವಿಶೇಷ ಸಮಗ್ರ 2026್ಘ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ತಾಳಿಕೋಟೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಪ್ರಭಾತಪೇರಿ ಯಶಸ್ವಿಯಾಗಿ ನಡೆಸಲಾಯಿತು.ಜಿಲ್ಲಾ ಪಂಚಾಯತ್ ವಿಜಯಪುರದ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಆದೇಶದ ಮೇರೆಗೆ ಆಯೋಜಿಸಲಾದ ಈ ಪ್ರಭಾತಪೇರಿಯಲ್ಲಿ ವಿದ್ಯಾರ್ಥಿಗಳು ವಿಶೇಷ ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗೃತಿ ಮೂಡಿಸಿದರು.  

ಕಾಲೇಜಿನಿಂದ ಆರಂಭವಾದ ಈ ಪ್ರಭಾತಪೇರಿ ಆಶ್ರಯ ಕಾಲೋನಿಯನ್ನು ಸುತ್ತುವರಿದು ಮತ್ತೆ ಕಾಲೇಜಿಗೆ ಆಗಮಿಸಿತು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಎಸ್‌. ಬಿ. ಸಾವಳಸಂಗ ಅವರ ನೇತೃತ್ವದಲ್ಲಿ ಉಪನ್ಯಾಸಕರಾದ ಶ್ರೀಮತಿ ಎ.ಎಸ್‌. ಬಾರಕೇರ, ಶ್ರೀಮತಿ ಸುಮಂಗಲಾ ಬಿರಾದಾರ, ಶಕುಂತಲಾ ಬಿರಾದಾರ, ಅಶ್ವಿನಿ ಮಾನೆ, ಭಾಗ್ಯಶ್ರೀ ಬಡಿಗೇರ, ಭುವನೇಶ್ವರಿ ಹಿರೇಮಠ, ಅಕ್ಷತಾ ಬಿರಾದಾರ, ನೇತ್ರಾ ಹೆಚ್, ಶ್ರೀ ಜೆ.ಕೆ. ಅಂಬಿಗೇರ, ಶ್ರೀ ನಟರಾಜ ಮಂಕಣಿ ಸೇರಿದಂತೆ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.