ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿಯೇ ನಡೆಸಲು ಎಸ್‌ಎಫ್‌ಐ ಆಗ್ರಹ
SFI demands that Haveri University's first convocation be held on the university campus itself
ಹಾವೇರಿ 26: ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ಖಾಸಗಿ ಕಾಲೇಜ್ ನಲ್ಲಿ ನಡೆಸುತ್ತಿರುವುದನ್ನು ವಿರೋಧಿಸಿ ಹಾಗೂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿಯೇ ನಡೆಸಲು ಆಗ್ರಹಿಸಿ ನಗರದ ಹೊರವಲಯದಲ್ಲಿರುವ ಕೆರಿಮತ್ತಿಹಳ್ಳಿ ಹಾವೇರಿ ವಿಶ್ವವಿದ್ಯಾಲಯದ ಎದುರು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕ್ಯಾಂಪಸ್ ವಿದ್ಯಾರ್ಥಿಗಳು ವಿವಿ ಕುಲಪತಿ ಪ್ರೊ. ಸುರೇಶ್ ಹೆಚ್. ಜಂಗಮಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಹಾವೇರಿ ಜಿಲ್ಲೆಯು ಅಖಂಡ ಧಾರವಾಡ ಜಿಲ್ಲೆಯಿಂದ ಬೇರ್ಪಟಟು ಸ್ವತಂತ್ರ ಜಿಲ್ಲೆಯಾಗಿ 27 ವರ್ಷಗಳು ಪೂರೈಸಿದೆ.
ಶಿಕ್ಷಣದ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತ್ಯೇಕ ಸರ್ಕಾರಿ ವಿಶ್ವವಿದ್ಯಾಲಯ, ಶಾಲಾ-ಕಾಲೇಜ್, ಹಾಸ್ಟೆಲ್ ಸೇರಿದಂತೆ ವಿವಿಧ ರೀತಿಯ ಕೋರ್ಸ್ ಗಳನ್ನು ಮಂಜೂರು ಮಾಡಬೇಕೆಂದು ಎಸ್‌ಎಫ್‌ಐ ಸಂಘಟನೆಯ ನಿರಂತರ ಹೋರಾಟ, ಕಾರ್ಯಕ್ರಮ, ಸಮಾವೇಶಗಳನ್ನು ನಡೆಸುತ್ತಾ ಬಂದಿದೆ ಹೋರಾಟದ ಪ್ರತಿಫಲವಾಗಿ ವಿವಿಧ ಸರ್ಕಾರಿ ಶಾಲಾ-ಕಾಲೇಜ್ ಗಳು, ಹಾಸ್ಟೆಲ್ ಗಳ ಜೊತೆಗೆ ಇಡೀ ರಾಜ್ಯದಲ್ಲಿ 9 ವಿವಿಗಳ ಪೈಕಿ 2023 ರಂದು ಹಾವೇರಿ ಪಟ್ಟಣದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಕೆರಿಮತ್ತಿಹಳ್ಳಿಯಲ್ಲಿ 42 ಎಕರೆಗಳಷ್ಟು ವಿಸ್ತಾರವಾದ ಕ್ಯಾಂಪಸ್‌ನಲ್ಲಿ ಮಂಜೂರಾಗಿದೆ.
ನೂತನ ವಿವಿಯನ್ನು ಪ್ರತ್ಯೇಕಗೊಳಿಸದೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸ್ನಾತಕೋತ್ತರ ಕೇಂದ್ರದ ಕಟ್ಟಡದಲ್ಲಿಯೇ ಸ್ಥಾಪನೆ ಮಾಡಲಾಗಿದೆ.ನಂತರ ರಾಜ್ಯ ಸರ್ಕಾರದ 9 ವಿಶ್ವವಿದ್ಯಾಲಯಗಳಿಗೆ ಅನುದಾನದ ಕೊರತೆಯಿಂದ ಮುಚ್ಚುವ ನಿರ್ದಾರಕ್ಕೆ ಬಂದ ಮೇಲೆ ಎಸ್‌ಎಫ್‌ಐ ಸಂಘಟನೆ ಮೊಟ್ಟಮೊದಲ ಧ್ವನಿ ಎತ್ತಿ ಹಾವೇರಿ ವಿಶ್ವವಿದ್ಯಾಲಯ ಉಳಿವಿಗಾಗಿ ಎಲ್ಲಾ ಶಾಸಕರು, ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಉನ್ನತ ಶಿಕ್ಷಣ ಇಲಾಖೆಗಳಿಗೆ ಮನವಿ ಪತ್ರ ನೀಡಿ ಹೋರಾಟ ಮಾಡಲಾಗಿದೆ. ನಂತರ ವಿವಿಧ ಸಂಘಟನೆಗಳು, ಸಂಘಸಂಸ್ಥೆಗಳ, ಸಾಹಿತಿಗಳು, ಕಲಾವಿದರು, ಪ್ರಗತಿಪರ ಮುಖಂಡರು, ಸಮಾನಮನಸ್ಕರ ವೇದಿಕೆ, ಶಿಕ್ಷಣ ಪ್ರೇಮಿಗಳು, ಉಪನ್ಯಾಸಕರು, ಮಹಿಳೆಯರು, ನಿವೃತ್ತ ಯೋಧರು
ಸೇರಿಸಿಕೊಂಡು "ಹಾವೇರಿ ವಿಶ್ವವಿದ್ಯಾಲಯ ಉಳಿಸಿ" ವೇದಿಕೆ ನೇತೃತ್ವದಲ್ಲಿ ದುಂಡು ಮೇಜಿನ ಸಭೆಗಳು, ಸಮಾವೇಶ, ಹೋರಾಟ ರೂಪಿಸಿ ಹಾವೇರಿ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಜಿಲ್ಲೆಯ ಎಲ್ಲಾ ಪತ್ರಿಕೆ ಹಾಗೂ ಡಿಜಿಟಲ್ ಮಾದ್ಯಮ ಸಂಪಾದಕರು, ಪತ್ರಕರ್ತರು ವಿಶೇಷ ಸರಣಿ ವರದಿಗಳು, ಹೋರಾಟದ ಸುದ್ದಿಗಳನ್ನು ಮಾಡುವ ಮೂಲಕ ಸರ್ಕಾರದ ಗಮನಸೆಳೆಯುವ ಕೆಲಸ ಪ್ರಮುಖವಾಗಿತ್ತು.ಅಷ್ಟೆ ಅಲ್ಲದೆ ಮೊನ್ನೆ ನಡೆದ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಹಾವೇರಿ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಅನುದಾನ ನೀಡಬೇಕೆಂದು ಎಸ್‌ಎಫ್‌ಐ ಮನವಿ ಪತ್ರ ನೀಡಿ ಹೋರಾಟ ಮಾಡಲಾಗಿದೆ.
ಹೀಗಿರುವಾಗ ಹಾವೇರಿ ಜಿಲ್ಲೆಯ ಹೆಮ್ಮೆಯ ಕ್ಷಣವಾದ ಮೊದಲ ಘಟಿಕೋತ್ಸವವು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನಡೆಸಬೇಕೆಂದು ವಿದ್ಯಾರ್ಥಿ ಸಮುದಾಯದ ಪರವಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ, ಶಿಕ್ಷಣ ಪ್ರೇಮಿಗಳು, ಉಪನ್ಯಾಸಕರು ಹಾವೇರಿ ಜಿಲ್ಲೆಯ ಜನತೆಯ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದರು. ವಿವಿ ಕ್ಯಾಂಪಸ್ ನಲ್ಲಿ ಘಟಿಕೋತ್ಸವವನ್ನು ನಡೆಸಿದರೆ ರಾಜ್ಯಪಾಲರಿಗೆ ಜನಪ್ರತಿನಿಧಿಗಳಿಗೆ ಗೊತ್ತಾಗುತ್ತದೆ ವಿವಿ ಅನುದಾನ ಒದಗಿಸಿ ಅಭಿವೃದ್ಧಿ ಮಾಡಬೇಕೆಂದು ಎಚ್ಚರಿಕೆ ಪಾಠವಾಗುತ್ತದೆ. ರಸ್ತೆ, ಬಸ್ ನಿಲ್ದಾಣ, ಬಸ್ಸಿನ ಸಮಸ್ಯೆಗಳಿಗೆ ಪರಿಹಾರ, ಕುಡಿಯುವ ನೀರು, ಹಾಸ್ಟೆಲ್ ಸೌಲಭ್ಯ, ಆಟದ ಮೈದಾನ, ಖಾಯಂ ಉಪನ್ಯಾಸಕರು ಸಿಬ್ಬಂದಿ ಕೊರತೆ ಎಲ್ಲಾ ಸರ್ಕಾರದ ಗಮನಾರ್ಹ ವಾಗುತ್ತದೆ ಆದರಿಂದ ವಿವಿ ಆವರಣದಲ್ಲಿಯೇ ಘಟಿಕೋತ್ಸವವನ್ನು ನಡೆಸಿ ಎಂದು ವಿದ್ಯಾರ್ಥಿಗಳ ಆಗ್ರಹಿಸಿದರು.
ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ಕುಮಾರ್ ನಾಗವತ್ ಮಾತನಾಡಿ, ಯಾವುದೇ ಕಾರಣಕ್ಕೂ ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು" ಕ್ಯಾಂಪಸ್ ನಲ್ಲಿ ಬಿಟ್ಟು ಬೇರೆಡೆಗೆ ನಡೆಸಲು ಆಲೋಚನೆ, ಯೋಜನೆ, ತೀರ್ಮಾನವನ್ನು ಕೈಗೊಳ್ಳಬಾರದು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಕಾಲೇಜ್ ಘಟಕದ ಅಧ್ಯಕ್ಷೆ ಚೈತ್ರ ಕೊರವಾರ, ಮುಖಂಡರಾದ ಪ್ರಿಯಾ ದೇವಗಿರಿ, ಸಿಂದು ಸಿ, ಈಶ್ವರಿ ಓಲೇಕಾರ್, ನಿವೇದಿತಾ ಜಿ, ಸಿಮನಾನ್ ಐ. ಜಿ, ಯಶೋದಾ ಎಲ್, ಚನಮ್ಮ ಸಿ ಎಂ, ಗಿರಿಜಾ ಡಿ, ದ್ಯಾಮವ್ವ ಜಿ ಎಸ್, ಪವಿತ್ರಾ ಕೆ, ಶಿವರಾಜ ಲಮಾಣಿ, ಶುಂಭು, ನಾಗರಾಜ ಕೆ ಆರ್, ನವೀನ ಡಿ ಆರ್, ಕಿರಣ, ಪ್ರವೀಣ್ ಎಮ್, ಶರಣು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 