ಮೃತ ಹಮಾಲಿ ಕುಟುಂಬಕ್ಕೆ 25 ಸಾವಿರ ರೂ. ಚೆಕ್ ವಿತರಣೆ
Rs 25,000 cheque distributed to deceased porter's family
ಮೃತ ಹಮಾಲಿ ಕುಟುಂಬಕ್ಕೆ 25 ಸಾವಿರ ರೂ. ಚೆಕ್ ವಿತರಣೆ
ಕಂಪ್ಲಿ 15: ಎಪಿಎಂಸಿಯಲ್ಲಿ ನೋಂದಾಯಿಸಿಕೊಂಡ ಸಣಾಪುರ ಗ್ರಾಮದ ಹಮಾಲಿ ವೃತ್ತಿ ಮಾಡುತ್ತಿದ್ದ ಜಡಿಯಪ್ಪ ಅಕಾಲಿಕವಾಗಿ ಸಾವನ್ನಪ್ಪಿದ್ದು, ಮೃತ ಕುಟುಂಬದ ಸದಸ್ಯರಿಗೆ ಎಪಿಎಂಸಿಯಿಂದ ನೀಡುವ ಅಂತ್ಯಕ್ರಿಯೆ ಖರ್ಚಿಗೆ 25 ಸಾವಿರ ರೂಗಳ ಚೆಕನ್ನು ಎಪಿಎಂಸಿ ಅಧ್ಯಕ್ಷರಾದ ಎನ್.ಹಬೀಬ್ ರೆಹಮಾನ್ ಅವರು ಮಂಗಳವಾರ ಕಂಪ್ಲಿ ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶಾಸಕರಾದ ಜೆ.ಎನ್.ಗಣೇಶ್ ಅವರಿಂದ ವಿತರಿಸಿದರು. ಮೃತ ಕುಟಂಬದ ಸದಸ್ಯರಿಗೆ ಪರಿಹಾರ ಚೆಕ್ ವಿತರಿಸಿದ ನಂತರ ಶಾಸಕ ಜೆ.ಎನ್.ಗಣೇಶ ಮಾತನಾಡಿ, ಮನೆಯ ಹಿರಿಯನನ್ನು ಕಳೆದುಕೊಂಡ ಕುಟುಂಬ ಅನಾಥವಾಗಿದೆ. ಅವರ ಕುಟುಂಬಕ್ಕೆ ಎಪಿಎಂಸಿಯಿಂದ ತಾತ್ಕಾಲಿಕ ಪರಿಹಾರ ಸಿಕ್ಕಿದ್ದು, ವಿಮೆ ಹಣವು ಬರಲಿದೆ. ಅದನ್ನು ವ್ಯರ್ಥವಾಗಿ ಹಾಳು ಮಾಡದೇ ಮನೆಯ ಅಭಿವೃದ್ಧಿಗೆ ಬಳಸುವಂತೆ ಸಲಹೆ ನೀಡಿದರು. ಸಣಾಪುರ ಗ್ರಾಮದ ಹಮಾಲಿ ಕೆಲಸ ಮಾಡುತ್ತಿದ್ದ ಜಡಿಯಪ್ಪ ಅವರು ಎಪಿಎಂಸಿಯಲ್ಲಿ ನೋಂದಾಯಿತ ಹಮಾಲಿ ಕಾರ್ಮಿಕನಾಗಿದ್ದು, ಎಪಿಎಂಸಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಅಂತ್ಯಕ್ರಿಯೆಗೆ ತಾತ್ಮಕಾಲಿಕ ಪರಿಹಾರ 25ಸಾವಿರ ರೂಗಳನ್ನು ನೀಡುತ್ತಿದೆ. ಮತ್ತು ಅವರ ಕುಟುಂಬಕ್ಕೆ 5 ಲಕ್ಷ ರೂಗಳ ವಿಮಾ ಮೊತ್ತವೂ ಬರುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್ ತಿಳಿಸಿದರು. ಈ ಸಂದರ್ಭದಲ್ಲಿ ಅಕ್ಕಿ ವ್ಯಾಪಾರಸ್ತರ ಒಕ್ಕೂಟದ ಉಪಾಧ್ಯಕ್ಷ ಜಿ.ಕುಮಾರಸ್ವಾಮಿ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಕೆ.ದೊಡ್ಡಬಸವರಾಜ, ಪುರಸಭೆ ಸದಸ್ಯರಾದ ಸಿ.ಆರ್.ಹನುಮಂತ, ತಾ.ಪಂ.ಮಾಜಿ ಸದಸ್ಯ ಕೋಟೆ ಷಣ್ಮುಖ ಮುಖಂಡರಾದ ಪಿ.ವೀರೇಶಸ್ವಾಮಿ, ಹನುಮಂತಪ್ಪ ಸೇರಿದಂತೆ ಇತರರು ಇದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 