ಸತತ ಸುರಿಯುತ್ತಿರುವ ಮಳೆಯಿಂದ ರಸ್ತೆ ಸಂಪೂರ್ಣ ಹಾಳು: ಜನರ ಆಕ್ರೋಶ
Road completely destroyed due to continuous rain: People's outrage
ಶಿರಹಟ್ಟಿ 23 : ಪಟ್ಟಣದ ಬೆಳ್ಳಟ್ಟಿ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡ ಬೇಂದ್ರೆ ಪ್ಲಾಟ್ ಹಾಗೂ ಶಿವಲಿಂಗಪ್ಪ ನಗರದ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸಲು ಆಗದ ದುಸ್ಥಿತಿ ತಲುಪಿದ್ದರೂ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಕನಿಷ್ಟ ಪಕ್ಷ ದುರಸ್ಥಿ ಸಹ ಮಾಡದೇ ನಮಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿರುವ ಪಟ್ಟಣ ಪಂಚಾಯ್ತಿ ಕಾರ್ಯವೈಖರಿ ಖಂಡನೀಯ. ಈಗಾಗಲೇ ಹಲವಾರು ಜನ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ. ಸಾವನ್ನು ಅಂಗೈಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಇದೆ ಎಂದು ಸ್ಥಳಿಯ ನಿವಾಸಿ ಅಕ್ಬರ ಯಾದಗಿರಿ ಹಾಗೂ ಶ್ರೀನಿವಾಸ ಬಾರ್ಬರ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ವಿಜಯ ನಗರ ಕಾಲನಿಯಲ್ಲಿರುವ ಶಿವಲಿಂಗಪ್ಪ ಹಾಗೂ ಬೇಂದ್ರೆ ಪ್ಲಾಟ್‌ಗಳ ನಿವಾಸಿಗಳು ಕಳೆದ ಹತ್ತು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಹಾಗೂ ಪಟ್ಟಣ ಪಂಚಾಯ್ತಿಗೆ ಸಾಕಷ್ಟು ಬಾರಿ ಲಿಖಿತವಾಗಿ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರೈತರು, ಕೂಲಿಕಾರರು ಹಾಗೂ ಬಡ ವರ್ಗ ಜನರು ಬಹುತೇಕ ಇಲ್ಲಿ ವಾಸವಾಗಿದ್ದು, ಸಮರ್ಕ ರಸ್ತೆ ಇಲ್ಲದ ಪರಿಣಾಮ ದಿನ ಬೆಳಗಾಯಿತೆಂದರೆ ಅಧಿಕಾರಿಗಳನ್ನು ಶಪಿಸುತ್ತ ಸಂಚರಿಸುವಂತಾಗಿದೆ.
ವಿಜಯನಗರದಲ್ಲಿ ಬಡಜನರೇ ಬಹುಸಂಖ್ಯಾತರಾಗಿದ್ದು, ಸರ್ಕಾರ ಪ್ರಾಥಮಿಕ ಶಾಲೆ ಸಹ ಪಕ್ಕದಲ್ಲಿದೆ. ಮಳೆಗಾಲದಲ್ಲಿ ಶಾಲೆಗೆ ಹೋಗಲು ಮಕ್ಕಳು ಹರಸಾಹದ ಮಾಡುತ್ತ ಶಾಲೆಹೋಗಬೇಕಾದ ಅನಿವಾರ್ಯತೆ ಬಂದೊದಗಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಕನಿಷ್ಟ ಪಕ್ಷ ನಿವಾಸಿಗಳ ಬಡಾವಣೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುವ ಗೊಜಿಗೂ ಹೋಗುತ್ತಿಲ್ಲ,
ತಕ್ಷಣ ನಿಗಧಿತ ಸಮಯದಲ್ಲಿ ರಸ್ತೆ ಡಾಂಬರೀಕರಣ ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಜನಪ್ರತಿನಿಧಿಗಳು ಹಾಗೂ ಪಟ್ಟಣ ಪಂಚಾಯ್ತಿ ಕಾರ್ಯಾಲಯ ಶಾಶ್ವತ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತಹಶೀಲದಾರ್ ಕಾರ್ಯಾಲಯದ ಮುಂದೆ ಉಗ್ರ ಹೋರಾಟ ಮಾಡುವದಾಗಿ ಕುಂದುಕೊರತೆ ಹೋರಾಟ ಸಮಿತಿ ಅಧ್ಯಕ್ಷ ಅಕ್ಬರ ಯಾದಗಿರಿ, ಬಿಜೆಪಿ ಯುವ ಮುಖಂಡ ಶ್ರೀನಿವಾಸ ಬಾರ್ಬರ, ಮುನ್ನಾ ಡಾಲಾಯತ, ಲಕ್ಷ್ಮಣ ಬಾರ್ಬರ ಮಲ್ಲಪ್ಪ ಒಗ್ಗರ, ಹನುಮಂತಗೌಡ ಪಾಟೀಲ, ಬಸಪ್ಪ ಪೂಜಾರ, ಪರಶುರಾಮ ಹುಲಕಡ್ಡಿ, ಗೌಸುಸಾಬ ಡಾಲಾಯತ, ವೀರಣ್ಣ ಬಾಗೇವಾಡಿ, ಶೌಕತಲಿ ಕಾಗದಗಾರ, ಶರಣಪ್ಪ ಹರ್ತಿ, ಮುತ್ತಣ್ಣ ಬಕ್ಕಸದ, ರವಿ ಗಂಟಿ ಮತ್ತಿತರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 