ಸಕ್ಕರೆ ಬೆಲೆ ಹೆಚ್ಚಾದರೆ ಕಬ್ಬು ಬೆಳೆಗಾರರಿಗೆ ಲಾಭ: ಸಚಿವ ಸವದಿ

ಸಕ್ಕರೆ ಬೆಲೆ ಹೆಚ್ಚಾದರೆ ಕಬ್ಬು ಬೆಳೆಗಾರರಿಗೆ ಲಾಭ: ಸಚಿವ ಸವದಿ Rise in sugar prices benefits sugarcane growers: Minister Savadi

ಲೋಕದರ್ಶನ ವರದಿ,

ಜಮಖಂಡಿ ೨೪: ಸಕ್ಕರೆ ಬೆಲೆ ಸ್ವಲ್ಪ ಹೆಚ್ಚಾದರೆ ಅದರ ಲಾಭ ಕಬ್ಬು ಬೆಳೆಗಾರರಿಗೆ ದೊರೆಯಲಿದೆ. ಜನರು ನೀರಿನ ಬಾಟಲಿಗೆ ರೂ, ೧೨೦ ನೀಡಿ ಖರೀದಿಸುತ್ತಾರೆ. ಅದೇ ರೀತಿ ಒಂದು ಕೆಜಿ ಸಕ್ಕರೆಗೆ ರೂ,೫೦ ನೀಡಿದರೆ ದೊಡ್ಡ ಹೊರೆಯಾಗುವುದಿಲ್ಲ. ಸಕ್ಕರೆ ಬೆಲೆ ಏರಿಕೆಯಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದ ಖಾಸಗಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಅವರು, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಸಕ್ಕರೆ ದಾಸ್ತಾನು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಿ, ಸಕ್ಕರೆ ಉತ್ಪಾದನೆ ಹೆಚ್ಚಿಸುವ ಮೂಲಕ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. 

ತಾಲೂಕಿನ ಕಂಕಣವಾಡಿ ಗ್ರಾಮದ ನಡುಗಡ್ಡೆ ಸೇತುವೆ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕಳೆದ ಅಧಿವೇಶನದಲ್ಲಿ ಕಂಕಣವಾಡಿ ನಡುಗಡ್ಡೆ ಸೇತುವೆ ಹಾಗೂ ಅಥಣಿ ಪಟ್ಟಣದ ಗೋಶಿರಪ್ಪನ ಗಡ್ಡೆ ಪ್ರದೇಶದ ಸೇತುವೆ ಕಾಮಗಾರಿಗಳ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಿರುವುದಾಗಿ ತಿಳಿಸಿದರು. ಎರಡೂ ಕಾಮಗಾರಿಗಳಿಗೆ ಹಣಕಾಸು ಇಲಾಖೆಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿಗಳಿಗೆ ಸಂಬAಧಿಸಿದAತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ್ ಕಲೂತಿ, ದರೆಪ್ಪ ತೇಲಿ ಸೇರಿದಂತೆ ಅನೇಕರು ಇದ್ದರು.