ರಿಕ್ಷಾ ಚಾಲಕರು ಪಟ್ಟಣದ ಕನ್ನಡಿ ಇದ್ದಂತೆ: ಡಾ. ಚಂದ್ರಶೇಖರ್ ಹಳಿಂಗಳೆ ಅಭಿಮತ
Rickshaw drivers are like a mirror of the town: Dr. Chandrashekhar Halingale's opinion
ಕಾಗವಾಡ 01 : ಒಂದು ಪಟ್ಟಣ, ನಗರದ ಸಂಸ್ಕಾರವನ್ನು ತಿಳಿದುಕೊಳ್ಳಬೇಕೆಂದರೇ ಅಲ್ಲಿಯ ರೀಕ್ಷಾ ಚಾಲಕರಿಂದ ಕಂಡುಕೊಳ್ಳಬಹುದು. ಹೊರಗಿನಿಂದ ಬರುವ ಪ್ರಯಾಣಿಕರೊಂದಿಗೆ ರಿಕ್ಷಾ ಚಾಲಕರು ಸ್ನೇಹಪರವಾಗಿ ವರ್ತಿಸುವುದು ಮುಖ್ಯ. ಏಕೆಂದರೆ ರಿಕ್ಷಾ ಚಾಲಕರು ನಗರದ ಕನ್ನಡಿಯಾಗಿರುತ್ತಾರೆ. ಜನರು ರಿಕ್ಷಾ ಚಾಲಕರ ನಡವಳಿಕೆಯ ಆಧಾರದ ಮೇಲೆ ಒಂದು ಪಟ್ಟಣ ಅಥವಾ ನಗರವನ್ನು ಅಳೆಯುತ್ತಾರೆಂದು ನಿರ್ಮಲ ಆಸ್ಪತ್ರೆ ಮತ್ತು ನಿರ್ಮಲ ಫೌಂಡೇಶನ್‌ನ ಅಧ್ಯಕ್ಷ ಮನೋವೈದ್ಯಶಾಸ್ತ್ರ ತಜ್ಞ ಡಾ. ಚಂದ್ರಶೇಖರ ಹಲಿಂಗೆಳೆ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಇತ್ತಿಚಿಗೆ ಮಿರಜ ಪಟ್ಟಣದಲ್ಲಿ ಸಾಂಗಲಿ ಜಿಲ್ಲಾ ಪ್ರಯಾಣಿಕ ಎಪೆ ರಿಕ್ಷಾ ಸಂಘದ 11 ನೇ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಿದ್ದರು. ಇಲ್ಲಿಯ ವರೆಗೆ ಸಾಂಗಲಿ ಜಿಲ್ಲಾ ಪ್ರಯಾಣಿಕ ಎಪೆ ರಿಕ್ಷಾ ಸಂಘ ಸಾಂಗಲಿ ಜಿಲ್ಲೆ ಮತ್ತು ಮಿರಜ ಪಟ್ಟಣದ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡಿದ್ದು, ಅದಕ್ಕಾಗಿಯೇ ಇಂದು 11ನೇ ವಾರ್ಷಿಕೋತ್ಸವವನ್ನು ಅತ್ಯಂತ ಸಂತೋಷದಿಂದ ಆಚರಿಸಿಕೊಳ್ಳುತ್ತಿದೆ ಎಂದರು. ಜೊತೆಗೆ ವ್ಯಸನ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುತ್ತ, ಮನಸ್ಸನ್ನು ಶಾಂತಗೊಳಿಸಲು, ವ್ಯಕ್ತಿಯು ವ್ಯಸನಿಯಾಗುತ್ತಾನೆ. ಇದರಿಂದ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳನ್ನು ಹದಗೆಡಿಸುತ್ತದೆ. ಆಲೋಚನೆಗಳು, ಭಾವನೆಗಳು ಮತ್ತು ಕಾರ್ಯಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ನೀವು ಆರೋಗ್ಯ ಮತ್ತು ಮಾನಸಿಕ ಶಾಂತಿಯನ್ನು ಬಯಸಿದರೆ, ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸಿ ಮತ್ತು ಸಂತೋಷದ ಜೀವನವನ್ನು ನಡೆಸಿ ಎಂದು ಸಲಹೆ ನೀಡಿದರು.
ಸಾಂಗಲಿ ನಗರದ ಸಾರಿಗೆ ಉಪ ನೀರೀಕ್ಷಕಿ ಕೀರ್ತಿ ಕೇಟ, ಸಾರಿಗೆ ಉಪ ನೀರೀಕ್ಷಕ ಶೇಖರ ನಿಕ್ಕಮ ರಿಕ್ಷಾ ಚಾಲಕರ ಸಮಸ್ಯೆಗಳು ಮತ್ತು ಪ್ರಯಾಣಿಕರ ಸೌಲಭ್ಯಗಳ ಬಗ್ಗೆ ಚರ್ಚಿಸಿದರು. ಮತ್ತು ಸಂಘದ ಕಾರ್ಯವನ್ನು ಶ್ಲಾಘಿಸಿದರು. ಸಂಘದ ವಾರ್ಷಿಕೋತ್ಸವದ ನಿಮಿತ್ಯ ನಿರ್ಮಲ್ ಫೌಂಡೇಶನ್ ವತಿಯಿಂದ ಮಿರಜನ ತಾಸಗಾಂವ ರಸ್ತೆಯ ದಿಲಾಸ ಭವನದಲ್ಲಿ ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರ ಅಧ್ಯಕ್ಷ ಮಹೇಶ್ ಚೌಗುಲೆ, ನಿರ್ಮಲ ಆಸ್ಪತ್ರೆಯ ಮನೋಶ್ಶಾಸ್ತ್ರಜ್ಞ ಸಚೀನ ಪಾಟೀಲ, ಫಾದರ್ ಜೋಸೆಫ್ ಸೇರಿದಂತೆ ರಿಕ್ಷಾ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 