ನಿವೃತ್ತ ಸೈನಿಕನಿಗೆ ಮಾಜಿ ಸೈನಿಕರ ಸಂಘದಿಂದ ಸನ್ಮಾನ
Retired soldier honored by Ex-Servicemen's Association
ನೇಸರಗಿ, 04 ; ಇಂದಿನ ಯುವಕರು ಸೈನಿಕ ಸೇವೆ ಸಲ್ಲಿಸಲು ಹಿಂದೇಟು ಹಾಕದೆ ಮನೆಗೊಬ್ಬರು ಸೈನ್ಯಕ್ಕೆ ಸೇರಬೇಕೆಂದು ನಿವೃತ್ತ ಮುಖ್ಯೋಪಾಧ್ಯಾಯ ಎಂ.ಡಿ.ನಂದೆನ್ನವರ ಹೇಳಿದರು.
ಸಮೀಪದ ದೇಶನೂರಿನ ಬಾವಿ ಬಸವೇಶ್ವರ ದೇವಸ್ಥಾನದಲ್ಲಿ ಮೂವತ್ತು ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ರುದ್ರ್ಪ ಬಸಪ್ಪ ಕೊತ್ತಲ ಇವರನ್ನು ದೇಶನೂರಿನ ಮಾಜಿ ಸೈನಿಕರ ಸಂಘ ಸನ್ಮಾನಿಸಿ ಮಾತನಾಡಿ, ಸೈನಿಕ ಸೇವೆ ಸಲ್ಲಿಸುವ ಪ್ರತಿಯೊಬ್ಬರು ದೇಶಕ್ಕಾಗಿ ಉತ್ತಮ ಕೊಡುಗೆ ನೀಡುತ್ತಾರೆ. ಅವರ ಸೇವೆ ಶ್ಲಾಘನೀಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕೇದಾರಿ, ಉಪಾಧ್ಯಕ್ಷ ಬಸವರಾಜ ಕಮತಗಿ, ಕಾರ್ಯದರ್ಶಿ ಸೋಮಲಿಂಗ ಕೋಟಗಿ, ಖಜಾಂಚಿ ಭಾವೆಪ್ಪ ಕೊತ್ತಲ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖಾ ಕೇದಾರಿ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಕೇದಾರಿ, ಗ್ರಾ. ಪಂ. ಮಾಜಿ ಅಧ್ಯಕ್ಷ ದೀಪಕ್‌ಗೌಡ್ರು ಪಾಟೀಲ್, ಡಾ.ಎಂ.ಆರ್.ಮುಲ್ಲಾ, ಮಲ್ಲಿಕಾರ್ಜುನ ಕೊತ್ತಲ್, ನೇಸರಗಿ ಪಿಎಸ್‌ಐ ಈರ್ಪ ರಿತ್ತಿ, ಮಾಜಿ ಸೈನಿಕರ ಸಂಘದ ಕುಟುಂಬದವರು ಉಪಸ್ಥಿತರಿದ್ದರು. ನಾಗರಾಜ್ ಮುಚ್ಚಂಡಿ ಸ್ವಾಗತಿಸಿದರು. ಚಂದ್ರಶೇಖರ ಪೂಜಾರಿ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 