ನಿವೃತ್ತ ಶಿಕ್ಷಕ ಶಂಕರ್ ಪವಾರ್ ಸನ್ಮಾನ; ಸಮಾಜ ಸೇವೆಗೂ ಪವಾರ್ ಮಹತ್ತರ ಕೊಡುಗೆ
Retired Teacher Shankar Pawar Hon. Pawar Mahatma's contribution to social service
ಲೋಕದರ್ಶನ ವರದಿ
ಕಾಗವಾಡ 06: ಮಕ್ಕಳ ಜ್ಞಾನಾರ್ಜನೆಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಡುವ ಗುರುಗಳ ಸೇವೆ ಶ್ಲಾಘನೀಯವಾಗಿದ್ದು, ತಾಯಿ-ತಂದೆಯ ನಂತರ ವ್ಯಕ್ತಿತ್ವವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಗುರುಗಳು ನಿರ್ವಹಿಸುತ್ತಾರೆ. ಶಿಕ್ಷಕ ಶಂಕರ ಪವಾರ್ ಅವರು ಶಿಕ್ಷಣದ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದು, ಆದರ್ಶ ಗುರು ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆಂದು ಹುಕ್ಕೇರಿ, ಘೋಡಕೇರಿ, ಮೊದಗಾ ಇಂಚಗೇರಿ ಮಠದ ಶ್ರೀ ಅಭಿನವ ಮಂಜುನಾಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಅವರು ರವಿವಾರ ದಿ. 05 ರಂದು ಚಿಕ್ಕೋಡಿ ತಾಲೂಕಿನ ಇಂಗಳಿಯಲ್ಲಿ ಶಿಕ್ಷಕ ಶಂಕರ್ ಪವಾರ್ ನಿವೃತ್ತಿ ನಿಮಿತ್ಯವಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಶಂಕರ್ ಪವಾರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ, ನಿವೃತ್ತ ಶಿಕ್ಷಕ ಶಂಕರ್ ಪವಾರ್ ಮಾತನಾಡಿ, ಇಂದು ತಮ್ಮ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸೇವೆ ಮಾಡುತ್ತಿದ್ದಾರೆ. ಶಿಕ್ಷಕನಾಗಿ ನಿವೃತ್ತಿಯಾಗಿದ್ದರೂ ತಮ್ಮ ಸಮಾಜ ಸೇವೆ ಇದೇ ರೀತಿ ಮುಂದುವರೆಯಲಿದೆ ಎಂದರು. ನಿವೃತ್ತ ಮುಖ್ಯೋದ್ಯಾಪಕ ಎಂಬಿ. ಕೊರಬು, ಆರ್.ಡಿ. ಕಾಂಬಳೆ, ಶಿವಾನಂದ್ ಪಾಟೀಲ್, ಅಭಯ ಅಕಿವಾಟೆ, ಡಾ. ಸುಧೀರ್ ಪಾಟೀಲ್, ಸಿಪಿಐ ವಿಶ್ವನಾಥ್ ಚೌಗುಲೆ ಮತ್ತು ಪುತ್ರಿ ಗೌರಿ ಪವಾರ್ ಸೇರಿದಂತೆ ಅನೇಕರು ಮಾತನಾಡಿದರು.
ಈ ವೇಳೇ ನಿವೃತ್ತ ಶಿಕ್ಷಕ ಅಪ್ಪಾಸಾಹೇಬ್ ಸೌಂದಲಗೆ, ಅಶೋಕ್ ತಾರದಾಳೆ, ಅಣ್ಣಾಸಾಹೇಬ್ ಡಿಗ್ರಜೆ, ಸಿದ್ಧೇಶ್ವರ ವಿದ್ಯಾಲಯದ ಅಧ್ಯಕ್ಷ ಸಾತಗೌಡಾ ಪಾಟೀಲ್, ಜೈ ಹನುಮಾನ್ ಸಂಸ್ಥೆಯ ಮಾಜಿ ಅಧ್ಯಕ್ಷ ಶ್ರೀಪತಿ ಜಾಧವ್, ಅಶೋಕ್ ಜೋಶಿ, ಚಿಕ್ಕೋಡಿ ಸಿಬಿಕೆಎಸ್ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಅಣ್ಣಾಸಾಹೇಬ್ ಪಾಟೀಲ, ತಾತ್ಯಾಸಾಹೇಬ ಕಾಟೆ, ಮಹಾವೀರ್ ಕಾತ್ರಾಳೆ, ರಂಜಿತ್ ಶಿರಸೇಟ್ ಮೋಹನ್ ಲೋಕೆರೆ, ರಮಾಕಾಂತ್ ಬಾಡಗೆ, ಮಾಜಿ ಜಿಪಂ ಸದಸ್ಯ ಅಣ್ಣಾಸಾಹೇಬ್ ಪವಾರ್, ರಮೇಶ ಮಾನೆ, ರಾಜಾರಾಮ್ ಮಾನೆ, ಅಶೋಕ್ ಮಿರಜೆ, ಸಂತೋಶ್ ಚಿಂಚಲೆ, ಗಣಪತಿ ಧನವಾಡೆ, ಡಾ. ಅಜಿತ ಚಿಗರೆ, ವಾಲ್ಮೀಕ್ ಮಾನೆ, ಸಂಜಯ್ ಗುರವ್, ರಮೇಶ್ ಪವಾರ್, ಅಪ್ಪಾಸಾಹೇಬ್ ಜತ್ರಾಟೆ, ಸಂಜಯ್ ಜೋಶಿ ಸೇರಿದಂತೆ ಹಲವಾರು ನಿವೃತ್ತ ಶಿಕ್ಷಕರು, ಶಿಕ್ಷಕರು, ಗ್ರಾಮಸ್ಥರು, ಅಭಿಮಾನಿಗಳು ಹಾಲಿ, ಮಾಜಿ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 