ಅಗ್ನಿಶಾಮಕ ದಳದಿಂದ ಬಾವಿಗೆ ಬಿದ್ದ ಎತ್ತುಗಳ ರಕ್ಷಣೆ

ಅಗ್ನಿಶಾಮಕ ದಳದಿಂದ ಬಾವಿಗೆ ಬಿದ್ದ ಎತ್ತುಗಳ ರಕ್ಷಣೆ

ತಾಳಿಕೋಟಿ 06 : ತಾಲೂಕಿನ ನೀರಲಗಿ ಗ್ರಾಮದ ಶರಣಪ್ಪ ಸಾಬಣ್ಣ ಮಾದರ ಎಂಬ ರೈತರ  ಎರಡು ಎತ್ತುಗಳು ಅದೇ ಗ್ರಾಮದ ರೈತರಾದ ಬಸನಗೌಡ ಯಾಳವಾರ ಜಮೀನಿನಲ್ಲಿರುವ ಭಾವಿಯಲ್ಲಿ ಬಿದ್ದ ಎರೆಡು ಎತ್ತುಗಳ  ಜೀವವನ ಸುರಕ್ಷಿತವಾಗಿ ರಕ್ಷಿಸಿದ್ದಾರೆ.ಮಂಗಳವಾರ ಸಂಜೆ 4:00 ಘಂಟೆಯ ಸಮೀಪದಲ್ಲಿ ರೈತ ಶರಣಪ್ಪ ಮಾದರ 2 ಎತ್ತುಗಳು ಅದೇ ಗ್ರಾಮದ ರೈತರದ ಬಸನಗೌಡ ಯಾಳವಾರ ಸರ್ವೆ ಸಂಖ್ಯೆ 4 ರಲ್ಲಿರುವ 80 ಅಡಿ ಆಳವಾಗಿರುವ ಭಾವಿಯಲ್ಲಿ ಕಾಲು ಜಾರಿ ಬಿದ್ದಿವೆ ಇದನ್ನು ಕಂಡ ಗ್ರಾಮದ ಶಾಂತಗೌಡ ಯಾಳಗಿ ಅವರು ಸಂಜೆ 5-30 ರ ಸಮೀಪ ಅಗ್ನಿಶಾಮಕ ದಳದ ಕಚೇರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ  ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸುಮಾರು ಒಂದೂವರೆ ತಾಸು ಕಾರ್ಯಚರಣೆ ನಡೆಸಿ ಎತ್ತುಗಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.ಅಗ್ನಿಶಾಮಕ ದಳದ ಸಿಬ್ಬಂದಿಗಳ ಈ ಕಾರ್ಯ ಗ್ರಾಮಸ್ಥರ  ಮೆಚ್ಚುಗೆಗೆ ಪಾತ್ರವಾಗಿದೆ. ಕಾರ್ಯಚರಣೆಯಲ್ಲಿ ಸಹಾಯಕ ಅಗ್ನಿ ಶಾಮಕ ಶಾಖಾಧಿಕಾರಿ ಎಚ್‌.ಎಸ್‌.ಬುರಾನಗೋಳ, ಅಗ್ನಿಶಾಮಕ ಪ್ರಮುಖ ಪ್ರಭು ಸಣ್ಣಕ್ಕಿ, ಚಾಲಕರಾದ ಹಣಮಂತ ಮಡಿವಾಳರ,ಜಾಕೀರ ಹುಸೇನ ನಾಲತವಾಡ,ಅಗ್ನಿಶಾಮಕ ಹಣಮಂತ ಕರಕಳ್ಳಿ,ಶಂಕರಗೌಡ ನರಸಲಗಿ ಭಾಗವಹಿಸಿದ್ದರು.