ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತ ಪ್ರವಾಸಿ ಮಂದಿರದ ದುರಸ್ತಿ ಕಾಮಗಾರಿ
Repair work at the tourist temple stalled due to lack of funding
ಲೋಕದರ್ಶನ ವರದಿ
ಹುನಗುಂದ 11 : ಪಟ್ಟಣದ ಪ್ರವಾಸಿ ಮಂದಿರ ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿ ಆರಂಭವಾಗಿ ಒಂದು ವರ್ಷ ಕಳೆದರೂ ಪೂರ್ಣಗೊಳ್ಳದೇ ಅರ್ಧದಲ್ಲಿಯೇ ನಿಂತು ಹೋಗಿದ್ದು.ಕಾಮಗಾರಿ ನಿಂತರುವುದ್ದಕ್ಕೆ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆನೋ? ಇಲ್ಲ ಅನುದಾನದ ಕೊರತೆನೋ? ಎನ್ನುವ ಯಕ್ಷ ಪ್ರಶ್ನೆಯಲ್ಲಿದ್ದ ಸಾರ್ವಜನಿಕರಿಗೆ ಅನುದಾನದ ಕೊರತೆಯಿಂದಲೇ ಕಾಮಗಾರಿ ನಿಂತಿದೆ ಎನ್ನುವ ಸತ್ಯವನ್ನು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಸಧ್ಯ ಸ್ಪಷ್ಟಪಡಿಸಿದ್ದಾರೆ.
ಹೌದು ಪ್ರವಾಸಿ ಮಂದಿರದ ಸುತ್ತಲು ಸಿಸಿ ರಸ್ತೆ ಮತ್ತು ಮೀಟಿಂಗ್ ಹಾಲ್ ಸೇರಿದಂತೆ ಸಂಪೂರ್ಣ ದುರಸ್ಥಿ ಮತ್ತು ನಿರ್ವಹಣೆ ಕಾಮಗಾರಿಗೆ ಶಾಸಕ ವಿಜಯಾನಂದ ಕಾಶಪ್ಪನವರ 1 ಕೋಟಿ ಅನುದಾನವನ್ನು ನೀಡಿ ಕಳೆದ ವರ್ಷ ಮಾರ್ಚ 9 ರಂದು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಭೂಮಿ ಪೂಜೆ ಮಾಡಿ ಒಂದು ವರ್ಷ ಕಳೆದರೂ ಕೂಡಾ ಕಾಮಗಾರಿಯ ಗುತ್ತಿಗೆ ಪಡೆದ ಗುತ್ತಿಗೆದಾರ ಮಾತ್ರ ಪ್ರವಾಸಿ ಮಂದಿರದ ಸುತ್ತ ಸಿಸಿ ರಸ್ತೆ ನಿರ್ಮಿಸಿ,ಅನುದಾನದ ಕೊರತೆಯಿಂದ ಐಬಿ ಒಳಗಿನ ದುರಸ್ತಿ ಕಾರ್ಯಗಳನ್ನು ಕೈಗೊಳ್ಳದೇ ಕೈ ತೊಳೆದುಕೊಂಡಂತೆ ಕಾಣುತ್ತಿದೆ.
ಒಂದು ವರ್ಷದ ಹಿಂದೆ ದುರಸ್ಥಿಗಾಗಿ ಪ್ರವಾಸ ಮಂದಿರದ ಮೀಟಿಂಗ್ ಹಾಲಿನ್ ಕಿಟಕಿ, ಬಾಗಿಲು ಸೇರಿದಂತೆ ಗೋಡೆಯ ಪ್ಲಾವುಡ್ ಬಿಚ್ಚಿ ಅಲ್ಲಿದ್ದ ಹಳೆಯ ಸೋಪಾ, ಕುರ್ಚಿಗಳೆಲ್ಲವನ್ನು ತೆರವುಗೊಳ್ಳಿಸಿದ್ದರು. ಇನ್ನೇನು 1 ಕೋಟಿ ಅನುದಾನದಲ್ಲಿ ಸುಂದರ ಐಬಿ ಸಿದ್ದವಾಗುತ್ತೇ ಅಂತ ಕನಸ್ಸು ಕಂಡಿದ್ದ ಪಟ್ಟಣ ಜನತೆಗೆ ಮತ್ತು ಇಲ್ಲಿಗೆ ಬರುವ ಪ್ರವಾಸಿಗರಿಗೆ ಕಾಮಗಾರಿ ಅರ್ಧದಲ್ಲಿ ನಿಂತಿರುವುದ್ದಕ್ಕೆ ಮತ್ತೇ ನಿರಾಶೆ ಮೂಡಿದೆ.ಮಾಡಿದ ಕೆಲಸಕ್ಕೆ ಪೇಮೆಂಟ್ ಆಗದೇ ಇರೋದರಿಂದ ಕಾಂಟ್ರಾಕ್ಟರ್ ಮಾತ್ರ ಪ್ರವಾಸಿ ಮಂದಿರದತ್ತ ಸುಳಿಯುತ್ತಿಲ್ಲ. ಒಂದು ವರ್ಷದಿಂದ ಗೊಂಬೆಗೆ ಬಣ್ಣ ಬಣ್ಣ ಬಟ್ಟೆ ತೊಡಿಸಿ ಪ್ರದರ್ಶನಕ್ಕೀಟ್ಪಂತೆ ಸಧ್ಯ ಪ್ರವಾಸಿ ಮಂದಿರದ ಕಿಟಕಿ, ಬಾಗಿಲುಗಳಿಗೆ ಬಟ್ಟೆ ಕಟ್ಟಿ ಬಿಟ್ಟಂತಾಗಿದೆ.
ಪ್ರವಾಸಿ ಮಂದಿರದ ಒಳಗೀನ ಮುಕ್ಕಾಲು ಭಾಗ ಕಾಮಗಾರಿ ಮಾಡಬೇಕಿದ್ದರೂ ಅದಕ್ಕೆ ಕೈ ಹಾಕದೇ ಗುತ್ತಿಗೆದಾರ ಮತ್ತು ಪಿಡಬ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಸೇರಿಕೊಂಡು ಸಿಸಿ ರಸ್ತೆಯಲ್ಲಿಯೇ 1 ಕೋಟಿ ಕಾಮಗಾರಿ ಮುಗಿಸಿ ಬಿಟ್ಟಿರೇನೋ ಎನ್ನುವ ಅನುಮಾನ ಶುರುವಾಗುವ ಮುಂಚನೇ ಕಾಮಗಾರಿ ನಿಲ್ಲೋದಕ್ಕೆ ಅನುದಾನ ಕೊರತೆನೇ ಕಾರಣ ಎನ್ನುವ ಸತ್ಯ ಹೊರ ಬಂದಿದೆ.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 