ಧಾರ್ಮಿಕ ಹಬ್ಬಗಳು ನಾಡಿನ ಸಾಂಸ್ಕೃತಿಕ ಪ್ರತಿಬಿಂಬ: ಸಬರದ
Religious festivals are a reflection of the country's culture: Sabarada
ಲೋಕದರ್ಶನ ವರದಿ
ವಿಜಯಪುರ 16: ನಮ್ಮ ಜಾನಪದ ಸೊಗಡು, ಹಳ್ಳಿ ಪರಿಸರ ನಿರ್ಮಿಸುತ್ತಾ, ದೇವಸ್ಥಾನಗಳ ಜಾತ್ರೋತ್ಸವ, ಧಾರ್ಮಿಕ ಆಚರಣೆ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಜನರೊಂದಿಗೆ ಬೆರೆತು ಸಹಕಾರ, ಸಹಬಾಳ್ವೆ, ಸೌಹಾರ್ದತೆ, ಸಾಮರಸ್ಯತೆ, ಐಕ್ಯತೆ ಮತ್ತು ಭಾವೈಕ್ಯತೆಯ ಗುಣಗಳನ್ನು ಬೆಳೆಸಿಕೊಂಡು ನಾವೆಲ್ಲರೂ ಒಂದು ಎಂಬ ಸಮಷ್ಠಿ ಭಾವದಿಂದ ಬದುಕಬೇಕು ಇಂದಿನ ಒತ್ತಡಮಯ ಮತ್ತು ಬದುಕಿನ ಜಂಜಾಟದಲ್ಲಿ ದೇವರು, ದೇವಸ್ಥಾನ, ದೈವತ್ವ, ಭಕ್ತಿ-ಭಾವದ ಪೂಜೆ ಮತ್ತು ದೈವಶಕ್ತಿಯ ಆರಾಧನೆ ಮಾಡುವದರ ಮೂಲಕ ಸುಖ-ಶಾಂತಿ ಮತ್ತು ನೆಮ್ಮದಿ ಪಡೆಯಬೇಕು. ದೇವಸ್ಥಾನಗಳು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ತಾಣಗಳು. ಹಣ ಗಳಿಕೆಯತ್ತ ಮುಖ ಮಾಡಿದ ಮಾನವ ಇಂದು ದುಡ್ಡು ಗಳಿಸಿದರೂ ಬದುಕಿನಲ್ಲಿ ನಿರಾಶೆ, ಹತಾಶೆ, ಸುಖ-ಶಾಂತಿ, ನೆಮ್ಮದಿ ಇಲ್ಲದೇ ಬದುಕುತ್ತಿದ್ದಾನೆ. ಕೋವಿಡ್ ಕಾಲಘಟ್ಟದಲ್ಲಿ ಜೀವನವೆಂದರೆ ಕೇವಲ ಆಸ್ತಿ ಸಂಪಾದನೆಯಲ್ಲ. ಹೊರತಾಗಿ ದೇಣಿಗೆ, ಕೊಡುಗೆ ಮತ್ತು ಕಾಣಿಕೆ ನೀಡುತ್ತಾ ನಮ್ಮ ಧರ್ಮ, ದೇವಸ್ಥಾನ ಮತ್ತು ಮಂದಿರಗಳ ಅಭಿವೃದ್ಧಿ ಕೈಗೊಂಡು ತನು-ಮನ-ಧನದ ಮೂಲಕ ಸಹಾಯ-ಸಹಕಾರ ಮಾಡಬೇಕೆಂದು ಶರಣು ಸಬರದ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಸಿದ್ಧಾರ್ಥ ನಗರದ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಗಣೇಶ ಮತ್ತು ಆಂಜನೇಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಕುಂಭಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭವ್ಯವಾದ ನಮ್ಮ ಸಂಸ್ಕೃತಿ-ಸಂಪ್ರದಾಯ ಮತ್ತು ಪರಂಪರೆಯನ್ನು ನಾವೆಲ್ಲರೂ ದೈನಂದಿನವಾಗಿ ಜೀವನದಲ್ಲಿ ಅಳವಡಿಸಿಕೊಂಡು ಯುವ ಜನಾಂಗಕ್ಕೆ ಮಾದರಿಯಾಗಬೇಕು. ಈ ಲಕ್ಷ್ಮೀ ದೇವಸ್ಥಾನವು ಮಹಿಳೆಯರಿಂದಲೇ ಅಭಿವೃದ್ಧಿ ಹೊಂದಿದ್ದು, ಪ್ರತಿನಿತ್ಯ ಲಲಿತ ಸಹಸ್ರ ನಾಮಾವಳಿ ಪಠಣ, ಬೆಳದಿಂಗಳ ಬೆಳಕಿನೆಡೆಗೆ ಕಾರ್ಯಕ್ರಮದಡಿಯಲ್ಲಿ ವಿಶೇಷ ಉಪನ್ಯಾಸ ಮತ್ತು ಜಾತ್ರಾ ಮಹೋತ್ಸವದಲ್ಲಿ ಐದು ದಿನಗಳವರೆಗೆ ವಚನ ಸಾಹಿತ್ಯ, ಜನಪದ ಸಾಹಿತ್ಯ, ಮಹಿಳಾ ಸಬಲೀಕರಣ ವಿಷಯಗಳ ಉಪನ್ಯಾಸ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಉತ್ತಮ ಬೆಳವಣಿಗೆ ಎಂದರು.
ಕುಂಭಮೇಳದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಅನೀಲಕುಮಾರ ಪತ್ತೇಪುರಮಠ, ಭೀಮನಗೌಡ ಸಿದರೆಡ್ಡಿ, ಪವಿತ್ರಾ ಭೋಸಲೆ, ಶಿವಕುಮಾರ ಏಗಶೆಟ್ಟಿ, ಡಾ. ರಾಹುಲ ಕೆಂಭಾವಿ, ಗುರುಬಸಯ್ಯ ಹಿರೇಮಠ, ಶೋಭಾ ಚವ್ಹಾಣ, ಭರಮಣ್ಣ ಕಡಕೋಳ, ಎಸ್.ಎಲ್.ಇಂಗಳೇಶ್ವರ, ಎಸ್.ಎಸ್.ಓತಿಹಾಳ, ಅರವಿಂದ ಹಂಗರಗಿ, ನಾಗೇಂದ್ರ ಯಾದವ, ವಿಠ್ಠಲ ಜಗತಾಪ, ಹಿರಿಯರಾದ ಅನೀಲ ಪತ್ತೇಪೂರ ದೇವಸ್ಥಾನದ ಇನ್ನಿತರರು ಸಹ ಉಪಸ್ಥಿತರಿದ್ದರು.
ಜಿ.ಕೆ.ಪಾಟೀಲ ಮಂಗಲ ಕಾರ್ಯಾಲಯದಿಂದ ಹೊರಟ ಕುಂಭ ಮೇಳ ಡೊಳ್ಳಿನ ಕಲಾ ತಂಡಗಳು, ಬಾಜಾ ಬಜಂತ್ರಿ ಮತ್ತು ಕರಡಿ ಮಜಲುಗಳ ಸಹಿತವಾಗಿ ಎಲ್ಲ ಬಡಾವಣೆಗಳ ಸದ್ಭಕ್ತರು ತಮ್ಮ ಮನೆಯ ಮುಂದೆ ರಂಗೋಲಿ ಚಿತ್ತಾರ ಬಿಡಿಸಿ, ಸುಮಂಗಲೆಯರು ಗಣೇಶ ನಾಮಸ್ತೋತ್ರ ಪಠಿಸುತ್ತಾ ಸಿದ್ಧಿ ವಿನಾಯಕನನ್ನು ಭಕ್ತಿ-ಭಾವದಿಂದ ಸ್ವಾಗತಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 