ತಾಲೂಕಿನ ಎಲ್ಲಾ ಕೆರೆ, ಕಾಲುವೆಗಳಿಗೆ ನೀರು ಹರಿಸಿ: ಯಶವಂತರಾಯಗೌಡ ಪಾಟೀಲ

ತಾಲೂಕಿನ ಎಲ್ಲಾ ಕೆರೆ, ಕಾಲುವೆಗಳಿಗೆ ನೀರು ಹರಿಸಿ: ಯಶವಂತರಾಯಗೌಡ ಪಾಟೀಲ Release water into all the tanks and canals in the taluk: Yashvantharayagouda Patil

ಲೋಕದರ್ಶನ ವರದಿ   

ಇಂಡಿ: ಇಂಡಿ ಮತಕ್ಷೇತ್ರದ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ತೊಂದರೆ ಉಂಟಾಗಬಾರದು. ಒಂದು ವೇಳೆ ನೀರಿನ ಸಮಸ್ಯೆ ತಲೆದೋರಿದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಇಂಡಿ ತಾಲೂಕಿನ ಎಲ್ಲಾ ಕೆರೆ, ಹಾಗೂ ಕಾಲುವೆಗಳಿಗೆ ನೀರು ಹರಿಸಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಅವರು ನಗರದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಟಾಸ್ಕಫೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ರಾಜ್ಯದಲ್ಲಿ ಈ ಬಾರಿ ಬರಗಾಲ ಇದೆ ಎಲ್ಲಿ ಕೂಡಾ ನೀರಿನ ಸಮಸ್ಯೆಯೇ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.     

ಸುದೈವದಿಂದ ಈ ಬಾರಿ ಮಾಹಾರಾಷ್ಟದ ಸಹ್ಯಾದ್ರಿಯ ಮಡಿಲಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕೃಷ್ಣಾ ನದಿ ವ್ಯಾಪಕವಾಗಿ ನೀರು ಹರಿದು ಬರುತ್ತಿದೆ.ಆಲಮಟ್ಟಿ ಜಲಾಶಯ ಭರ್ತಿಯಾಗಿದೆ.ಆದ್ದರಿಂದ ಇಂಡಿ ತಾಲ್ಲೂಕಿನ ತಡವಲಗಾ ಹಂಜಗಿ ನಿಂಬಾಳ ಅಥರ್ಗಾ ದೇಗಿನಾಳ ಸೇರಿದಂತೆ ಎಲ್ಲಾ ಕೆರೆಗಳನ್ನು ತುಂಬಿ ಹಾಗೂ ಕಾಲುವೆಗಳ ಮೂಲಕ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಎಸ್‌ಐಆರ್ ಸರ್ವೇ ಕಾರ್ಯ ಉತ್ತಮ ರೀತಿಯಲ್ಲಿ ಮಾಡುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆ ಹೇಳುತ್ತೇನೆ ಖಋ ಸರ್ವೆಯಲ್ಲಿ ಇಂಡಿ ತಾಲೂಕು ವಿಜಯಪೂರ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.ಜಿಲ್ಲೆಗೆ ಅಲ್ಲ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನವಾಗಲಿ ಎಂದು ಹೇಳಿದರು. 

ಇಂಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕೃಷಿ ಸಾಹಯಕ ನಿರ್ದೇಶಕರಾದ ಮಹಾದೇವಪ್ಪ ಏವೂರ ಮಾತನಾಡಿ ಇಂಡಿ ತಾಲ್ಲೂಕಿನಲ್ಲಿ ವಾಡಿಕೆ ಪ್ರಕಾರ ಶೇಕಡಾ 10ಅ ರಷ್ಟು ಮಳೆ ಕೊರತೆ ಆಗಿದೆ.ಹಾಗೂ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಯಾವುದೇ ರೀತಿ ಕೊರತೆ ಇಲ್ಲ, ಈ ಬಾರಿ ರೈತರು ಹೆಚ್ಚು ಹತ್ತಿ ಬಿತ್ತನೆ ಮಾಡಿದ್ದಾರೆ.

ಹಾಗೂ ಕಬ್ಬು ತೊಗರಿ ಮೆಕ್ಕೆಜೋಳ ಸಜ್ಜೆ ಶೇಂಗಾ ಇತರೆ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ  ಹಾಗೂ ತಾಲೂಕಿನ ತಡವಲಗಾ ಗ್ರಾಮದಲ್ಲಿ ನಾಗಪ್ಪ ಬೀಮಣ್ಣ ಹತ್ತರಕಿ ಎಂಬ ರೈತ ಜುಲೈ 17 ರಂದು ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದು ಆ ಕುಟುಂಬಕ್ಕೆ ಭೇಟಿ ನೀಡಿದ್ದೇವೆ ಎಂದು ಮಾಹಿತಿ ನೀಡಿದರು. 

ತಾಲೂಕಿನ ಡಾ ಬಿ ಆರ್ ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿ ನೇಣು ಹಾಕಿಕೊಂಡು ಸಾವು ಪ್ರಕರಣ ಬಗ್ಗೆ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಉಪವಿಭಾಗಾಧಿಕಾರಿಗಳಿಗೆ ಮತ್ತು ತಹಶೀಲದಾರರಿಗೆ ಹಾಗೂ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.  ವಸತಿ ನಿಲಯ ನಿಲಯದಲ್ಲಿ ಇಂಥಾ ಘಟನೆ ಹೇಗೆ ಸಂಭವಿಸಿದೆ ಎಂದು  ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.