ತಾಲೂಕಾ ಆಟೋ ಚಾಲಕರ ಒಕ್ಕೂಟಕ್ಕೆ ರವೀಂದ್ರಗೌಡ ಪಾಟೀಲ ಗೌರವಾಧ್ಯಕ್ಷ, ಜಗದೀಶ ಕೆರೂಡಿ ಅಧ್ಯಕ್ಷರಾಗಿ ಆಯ್ಕೆ !!
Ravindra Gowda Patil elected honorary president, Jagadish Kerudi elected president of Taluka Auto Dr
ರಾಣೆಬೆನ್ನೂರ 13 : ತಾಲೂಕಾ ಆಟೋ ಚಾಲಕರ ಒಕ್ಕೂಟದ ಸಭೆ ಇತ್ತೀಚೆಗೆ ಸ್ಥಳೀಯ ಎಪಿಎಂಸಿ ವರ್ತಕರ ಸಮುದಾಯ ಭವನದಲ್ಲಿ ನಡೆದು ಒಕ್ಕೂಟಕ್ಕೆ ನೂತನವಾಗಿ ಅಧ್ಯಕ್ಷರಾಗಿ ಯುವ ಮುಖಂಡ ಜಗದೀಶ ಕೆರೂಡಿ ಹಾಗೂ ಗೌರವಾಧ್ಯಕ್ಷರಾಗಿ ಯುವ ನಾಯಕ ರವೀಂದ್ರಗೌಡ ಪಾಟೀಲ ಆಯ್ಕೆಗೊಂಡರು. ನೂತನ ಅಧ್ಯಕ್ಷ ಜಗದೀಶ್ ಕೆರೂಡಿ ಮಾತನಾಡಿ ಯಾವುದೇ ಸಂಸ್ಥೆಯ ಸ್ಥಾನಮಾನಗಳು ಮುಖ್ಯವಲ್ಲ. ಜನರ ಸೇವೆ ಮುಖ್ಯವಾಗಿದೆ. ರಾಣೆಬೆನ್ನೂರು ನಗರದಲ್ಲಿ ಪ್ರತಿನಿತ್ಯ ಸಾವಿರಾರು ಆಟೋ ಚಾಲಕರು ಆಟೋ ಚಲಾಯಿಸಿಕೊಂಡು ಇಂದು ತಮ್ಮ ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಳ್ಳುವುದು ಕಷ್ಟಕರವಾಗಿದೆ.
ಎಷ್ಟು ಆಟೋ ಚಾಲಕರಿಗೆ ಸ್ವಂತ ಮನೆಗಳಿಲ್ಲ, ಸ್ವಂತ ಗಾಡಿಗಳಿಲ್ಲದೆ ಬಾಡಿಗೆ ರೂಪದ ಆಟೋಗಳನ್ನ ಪಡೆದು ಕನಿಷ್ಠ ಪ್ರಯಾಣದ ಪಡೆದು ಸಾರ್ವಜನಿಕ ಸೇವೆಯ ಜೊತೆಗೆ ಜೀವನ ನಡೆಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಪಿಜಿ ಗ್ಯಾಸ್ ದರ ಹೆಚ್ಚಳದಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ. ಪ್ರಯಾಣ ದರದಲ್ಲಿ ವ್ಯತ್ಯಾಸವಾಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸರ್ಕಾರ ಎಲ್ಪಿಜಿ ಗ್ಯಾಸ್ ದರವನ್ನ ಕಡಿಮೆ ಮಾಡಿ ಆಟೋ ಚಾಲಕರ ಬದುಕಿಗೆ ದಾರೀದೀಪವಾಗಬೇಕು ಎಂದರು.
ಗೌರವಾಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಸೇವೆಯೇ ಜನಾರ್ದನ ಸೇವೆಯಾಗಿದೆ. ಇವತ್ತು ರಾಣೇಬೆನ್ನೂರು ನಗರದ ಎಲ್ಲಾ ಆಟೋ ಚಾಲಕರು ಗೌರವಾಧ್ಯಕ್ಷರನ್ನು ಆಯ್ಕೆ ಮಾಡುವುದರ ಮುಖಾಂತರ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಅವರ ನಂಬಿಕೆ ವಿಶ್ವಾಸಗಳಿಗೆ ಮಾನ್ಯತೆ ನೀಡಿ ಆಟೋ ಚಾಲಕರಿಗೆ ಸರ್ಕಾರದ ಸೌಲಭ್ಯಗಳು ಸೂಕ್ತ ಸಮಯದಲ್ಲಿ ದೊರೆಯುವಂತಾಗಲು ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಸರ್ಕಾರಗಳ ಗಮನ ಸೆಳೆಯಲು ಹಾಗೂ ರಾಣಿಬೆನ್ನೂರು ನಗರ ಆಟೋ ಚಾಲಕರ ಕಲ್ಯಾಣಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಆಟೋ ಚಾಲಕರ ಕಲ್ಯಾಣಕ್ಕಾಗಿ, ಸೌಲಭ್ಯಗಳಿಗಾಗಿ, ಹೋರಾಟ ಮಾಡುವುದರ ಮೂಲಕ ನಮ್ಮ ಹಕ್ಕುಗಳನ್ನು ಪಡೆಯೋಣ.ಇದಕ್ಕೆ ಆಟೊ ಚಾಲಕರು ಸಹಕರಿಸಬೇಕು. ಜೊತೆಗೆ ಶೀಘ್ರವೇ ಉಳಿದ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಕರಿಯಪ್ಪ ಪೂಜಾರ, ವಿರೇಶ ಬಳ್ಳಾರಿ, ಹಾರೋಗಪ್ಪ, ವಿನಯ ಚನ್ನಪ್ಪನವರ, ಪರಶುರಾಮ ಅಯ್ಯಜ್ಜನವರ, ರಮೇಶ್ ಕೆಂಪಣ್ಣನವರ, ಉದಯ ತೆಗ್ಗಿನ, ಮನೋಜ್ ಕುಮಾರ್, ಉಮೇಶ್ ತಿಳುವಳ್ಳಿ, ಭಾಷಾಸಾಬ್ ಹಂಪಾಪಟ್ಟಣ, ರಾಜು ಓಲೇಕಾರ್, ಯಲ್ಲಪ್ಪ ಚಿಕ್ಕಣ್ಣನವರ, ಚಿಕ್ಕಪ್ಪ ಎಡಚಿ, ಅಜ್ಜಪ್ಪ ನಾಯಕ್, ಅಣ್ಣಪ್ಪ ಸೇರಿದಂತೆ 400 ಕ್ಕೂ ಅಧಿಕ ಆಟೋ ಚಾಲಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 