ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೃಹ ಸಂಪರ್ಕ ಅಭಿಯಾನ
Rashtriya Swayamsevak Sangh's Home Contact Campaign
ಲೋಕದರ್ಶನ ವರದಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೃಹ ಸಂಪರ್ಕ ಅಭಿಯಾನ
ಮಹಾಲಿಂಗಪುರ 11: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷಾಚರಣೆ ಪ್ರಯುಕ್ತ ಕೆಲ ದಿನಗಳ ಹಿಂದೆ ಮಹಾಲಿಂಗಪುರ ನಗರದಲ್ಲಿ ಇಪ್ಪತ್ತು ಗ್ರಾಮ ಸೇರಿದಂತೆ ಹೋಬಳಿ ಪಥಸಂಚಲನ ಅದ್ಧೂರಿಯಾಗಿ ಜರುಗಿತು.
ಅದರ ಮುಂದುವರಿದ ಭಾಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮನೆ ಮನೆಗೆ ತೆರಳಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಾ ಸಂಘಕ್ಕೆ ಜೋಡಿಸುವ ಕೆಲಸ ಭರದಿಂದ ಸಾಗಿದೆ, ಸಮೀಪದ ಗ್ರಾಮಗಳಾದ ಸಮೀರವಾಡಿ, ಸೈದಾಪುರ, ಕೆಸರಗೋಪ್ಪ, ಶಿರೋಳ, ಮುಗಳಖೋಡ,ರನ್ನ ಬೆಳಗಲಿ, ನಾಗರಾಳ, ನಂದಗಾವ, ಢವಳೇಶ್ವರ, ಮದಭಾವಿ, ಮಾರಾಪುರ ಮುಂತಾದ ಗ್ರಾಮಗಳಲ್ಲಿ ಅಭಿಯಾನ ಶುರು ಭರದಿಂದ ಸಾಗಿದೆ.
ಅಭಿಯಾನದಲ್ಲಿ ಸಂಘದ ಸ್ವಯಂಸೇವಕರಾದ ಸಾಗರ ಭೋವಿ, ವಿಶ್ವನಾಥ ಪಿರಶೇಟ್ಟಿ, ಪ್ರವೀಣ ಭಾವಿಕಟ್ಟಿ, ಆನಂದ ಶಿರಗುಪ್ಪಿ, ಸಚಿನ್ ಸಗರಿ, ಕಲ್ಲಪ್ಪ ಪಾಟಿಲ, ವಿಠ್ಠಲ ಹೊಸೂರ, ಪ್ರತೀಕ ವಾಲಿ, ರೋಹೀತ್, ಸಂಪತ್, ವಿನಾಯಕ ಇತರರಿದ್ದು ಅಭಿಯಾನ ಮುಂದುವರಿದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 