ಭಾರತೀಯ ಸಂಸ್ಕೃತಿ, ಧರ್ಮ ಹಿರಿದಾಗಿದೆ ರಂಭಾಪುರಿ ಶ್ರೀಗಳ ಅಭಿಪ್ರಾಯ
Rambhapuri Sri's opinion is that Indian culture and religion are great
ಬ್ಯಾಡಗಿ 21 : ಭಾರತೀಯ ಸಂಸ್ಕೃತಿ, ಧರ್ಮ ಹಿರಿದಾದುದು, ಧರ್ಮ ಪರಿಪಾಲನೆ ಮಾಡಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಮನುಷ್ಯ ಧರ್ಮವಂತ, ನೀತಿವಂತ, ಸುಸಂಸ್ಕೃತ ವ್ಯಕ್ತಿಯಾಗಿ ಬಾಳಬೇಕು ಎಂದು ರಂಭಾಪುರಿ ವೀರ ಸಿಂಹಾಸನಾದೀಶ್ವರ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ ವೀರ ಸೋಮೇಶ್ವರ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವದ್ಪಾದಕರು ಹೇಳಿದರು.ಪಟ್ಟಣದ ಆಂಜನೇಯ ಲೇಓಟ್ ಶಿರಡಿ ಸಾಯಿಬಾಬಾ ಮಂದಿರದಲ್ಲಿ 9 ನೇ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಾವಿಂದು ಧರ್ಮ ಮಾರ್ಗದಲ್ಲಿ ಮುನ್ನಡೆಯಬೇಕಿದೆ.
ಧರ್ಮ ಪಥ ಬದುಕಿನ ಹಾದಿಯನ್ನು ಸುಗಮಗೊಳಿಸುವದು ಎಂದರು.ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿ ವರ್ಷ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ವೆ?ವಿಧ್ಯಮವಾಗಿ ಆಚರಿಸುವರ ಮೂಲಕ ಪಟ್ಟಣದ ಭಕ್ತ ಸಮೂಹದಲ್ಲಿ ಧರ್ಮ ಜಾಗೃತಿ ಮಾಡುವ ಕಾರ್ಯ ಯಥೇಚ್ಛವಾಗಿ ನಡೆದುಕೊಂಡು ಬಂದಿರುವದು ಸ್ವಾಗತಾರ್ಹವಾಗಿದೆ.ಜೀವನದಲ್ಲಿ ಧಾರ್ಮಿಕತೆ ರೂಡಿಸಿಕೊಂಡರೆ ಆಚಾರ ವಿಚಾರ ನಡೆ-ನುಡಿಗಳು ಉತ್ತಮವಾಗಿರುತ್ತದೆ ಸಂಸ್ಕೃತಿ ಸಂಸ್ಕಾರ ಬೆಳೆಸುತ್ತವೆ ಶಾಂತಿ ನೆಮ್ಮದಿಯ ಜೀವನ ನಮ್ಮದಾಗುತ್ತದೆ ಪ್ರತಿಯೊಬ್ಬರು ಸಮಾನತೆಯಿಂದ ಇದ್ದಲ್ಲಿ ಎಲ್ಲಾ ಕುಟುಂಬಗಳು ಉತ್ತಮ ರೀತಿಯಲ್ಲಿ ಇರುತ್ತದೆ ಸದಾ ಉತ್ತಮ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು ಧಾರ್ಮಿಕ ಆಚರಣೆಗಳು ಉತ್ತಮ ಸಂಸ್ಕಾರ ಕಲಿಸುತ್ತವೆ ಎಂದರು.ಮುಪ್ಪಿನೇಶ್ವರ ಮಠದ ಮಲ್ಲಿಕಾರ್ಜುನ ಗಳು ಮಾತನಾಡಿ ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಂಡಂತ ನಡೆ-ನುಡಿಗಳು ಧರ್ಮದ ಸಂಕೇತವಾಗಿದೆ ಅದನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ನಡೆ ಮತ್ತು ನುಡಿಯನ್ನು ಶುದ್ಧವಾಗಿಟ್ಟುಕೊಳ್ಳಬೇಕು ಧರ್ಮಚರಣೆಯಿಂದ ಸುಖ ಸಂಪತ್ತು ಲಭಿಸುತ್ತಿದೆ ಎಂದರು.
ಶಿರಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ಮಂಜಯ್ಯ ಹಿರೇಮಠ ಶಾಸ್ತ್ರಿಗಳು ಮಾತನಾಡಿ ಕಳೆದ ಒಂಬತ್ತು ವರ್ಷಗಳಿಂದ ಕಾರ್ತಿಕ ಮಾಸದಲ್ಲಿ ಬಾಬಾರವರ ಕಾರ್ತಿಕೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದ್ದು ಪಟ್ಟಣದ ಮತ್ತು ಹೊರಗಿನವರು ಸದಾ ದೇವಸ್ಥಾನಕ್ಕೆ ತನು ಮನದಿಂದ ಸೇವೆಯನ್ನು ಸಲ್ಲಿಸಿದ್ದಾರೆ ಈಗಾಗಲೇ ದಾಸೋಹ ಕೊಠಡಿಗೆ ಇಂದು ರಂಭಾಪುರಿ ಶ್ರೀಗಳು ಭೂಮಿ ಪೂಜೆಯನ್ನು ಮಾಡಿದ್ದು ಮಾನ್ಯ ಶಾಸಕರಾದ ಬಸವರಾಜ್ ಶಿವಣ್ಣನವರು 25 ಲಕ್ಷ ಮತದಾನವನ್ನು ಸಹ ದೇವಸ್ಥಾನದ ಜಿರ್ಣೋದ್ದಾರಕ್ಕೆ. ಕಟ್ಟಡಕ್ಕೆ ಬಿಡುಗಡೆ ಮಾಡಿದ್ದಾರೆ ಹಾಗಾಗಿ ಸಕಲ ಸದ್ಭಕ್ತರಿದ್ದ ದೇವಸ್ಥಾನವು ನಡೆಯುತ್ತಿದೆ ಮತ್ತು ಗುರುಕುಲವು ಸಹ ತೆರೆಯಲಾಗಿದೆ ಎಂದರು.
ಧರ್ಮಸಭೆಯಲ್ಲಿ ಗುಡ್ಡದ ಮಲ್ಲಾಪುರದ ಮೂಕಪ್ಪ ಶಿವಾಚಾರ್ಯರು, ಮಳಲಿ ಮಠದ ನಾಗಭೂಷಣ ಶಿವಾಚಾರ್ಯರು, ಬ್ಯಾಡಗಿ ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು, ಕೂಡಲದ ಮಹೇಶ್ವರ ದೇವರು, ಕಡೆ ನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯರು, ಗುಬ್ಬಿ ನಂಜುಂಡ ಪಂಡಿತರಾಧ್ಯ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಆಡೂರು ಅಭಿನವ ಪಂಚಾಕ್ಷರ ಶಿವಾಚಾರ್ಯರು,ಅಕ್ಕಿಆಲೂರು ಚಂದ್ರಶೇಖರ್ ಶಿವಾಚಾರ್ಯರು, ಕುಮಾರಪಟ್ಟಣದ ಜಗದೀಶ್ವರ ಶ್ರೀ ಗಳು ಸಾನಿದ್ಯೆವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್ ಆರ್ ಪಾಟೀಲ, ಮುರಗೆಪ್ಪ ಶೆಟ್ಟರ್, ಗೀರೀಶ್ ಇಂಡಿಮಠ, ಸಾಯಿ ಮಂದಿರದ ಧರ್ಮದರ್ಶಿ ಮಂಜಯ್ಯ ಶಾಸ್ತ್ರಿ ಹಿರೇಮಠ, ಗುತ್ತಿಗೆದಾರರ ಕೆ ರವೀಂದ್ರ. ಇನ್ನಿತರರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 