ಮಾಜಿ ಸೈನಿಕರ ಮಹಿಳಾ ಘಟಕದಿಂದ ರಕ್ಷಾ ಬಂಧನ
Raksha Bandhan from the women's unit of ex-servicemen
ಮಾಜಿ ಸೈನಿಕರ ಮಹಿಳಾ ಘಟಕದಿಂದ ರಕ್ಷಾ ಬಂಧನ
ಬೆಳಗಾವಿ 11: ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ಮಹಿಳಾ ಘಟಕದ ವತಿಯಿಂದ ನಗರದ 2ನೇ ಕೆ ಎಸ್ ಆರ್ ಪಿ ಬಟಾಲಿಯನ್ ನಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ರಕ್ಷಾ ಬಂಧನ ಕಾರ್ಯ ನೆರವೇರಿತ್ತು.
ದೇಶದ ರಕ್ಷಣೆಗಾಗಿ ಗಡಿಯಲ್ಲಿ ಸೈನಿಕರು ಹಗಲಿರುಳು ಶ್ರಮಿಸುತ್ತಾರೆ. ಜೊತೆಯಲ್ಲಿ ಆರಕ್ಷಕರು ಕಾನೂನು ಹಾಗೂ ಜನ ಸಾಮಾನ್ಯರ ಸೇವೆಯಲ್ಲಿ ನಿರತರಾಗಿದ್ದು, ಅವರ ಸೇವೆಯು ಅತ್ಯಮೂಲ್ಯವಾದೆ. ನಮ್ಮ ಸಹೋದರಾದ ಸೈನಿಕರು , ಪೊಲೀಸ್ ರ ಜೊತೆಯಲ್ಲಿ ಮಹಾಒಕ್ಕೂಟದ ವತಿಯಿಂದ ಆರಕ್ಷಕರಿಗೆ ರಕ್ಷಾಬಂಧನ ಆಚರಿಸುತ್ತಿರುವುದು ಅತೀವ ಸಂತೋಷವಾಗಿದೆ ಎಂದು ಮಹಾಒಕ್ಕೂಟದ ಜಿಲ್ಲಾದ್ಯಕ್ಷ ಜಗದೀಶ ಪೂಜೇರಿ ತಿಳಿಸಿದರು.
2ನೇ ಕೆ ಎಸ್ ಆರ್ ಪಿ ಬಟಾಲಿಯನ್ ನ ಸುರೇಶ ಲಕ್ಕನ್ನವರ ಮಾತನಾಡಿ, ಮಹಿಳಾ ಘಟಕದಿಂದ ಪೊಲೀಸ್ ರೊಂದಿಗೆ ರಕ್ಷಾಬಂಧನ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಅದರ ಜೊತೆಗೆ ಮಹಾಒಕ್ಕೂಟದಿಂದ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿ ನಿಮಗೆ ನಮ್ಮ ಸಹಾಯ- ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾದ ಪ್ರಿಯಾ ಪುರಾಣಿಕ, ಮಹಿಳಾ ಘಟಕದ ಅಧ್ಯಕ್ಷ ಸುನಿತಾ ಪಟ್ಟಣಶೆಟ್ಟಿ ಉಪಾಧ್ಯಕ್ಷ ವೈಶಾಲಿ ಸುಧಾಗಡೆ ಕಾರ್ಯದರ್ಶಿಗಳಾದ ಪ್ರತಿಭಾ ಬಂಡಿ, ಸಹ ಕಾರ್ಯದರ್ಶಿಗಳಾದ ದೀಪಾ ಜಾಮಗೌಡ, ಸಹ ಖಜಾಂಚಿ ಉಷಾ ದೇಸಾಯಿ, ರೇಷ್ಮಾ ಹುಂದ್ರೆ ಹಾಜರಿದ್ದರು.
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 