ರಕ್ಷಾಬಂಧನದ ಮೂಲಕ ಸಹೋದರ-ಸಹೋದರಿಯರ ಬಾಂಧವ್ಯಕ್ಕೆ ಮೆರಗು
Raksha Bandhan adds luster to the bond between brothers and sisters
ಲೋಕದರ್ಶನ ವರದಿ
ಆಲಮೇಲ, ಆ. 29: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರದಲಿ ಸಹೋದರ-ಸಹೋದರಿಯರಿಗಾಗಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಿ.ಕೆ. ರೇಣುಕಾ ಅಕ್ಕನ ಸಹೋದರ-ಸಹೋದರಿಯರಿಗೆ ರಕ್ಷೆ ಕಟ್ಟಿ, ಹಣೆಗೆ ತಿಲಕವಿಟ್ಟು ರಕ್ಷಾಬಂಧನ ಆಚರಿಸಿದರು. ಬಳಿಕ ಮಾತನಾಡಿದ ಅವರು, ಬಾಬಾ ಅವರ ಜೀವನ ಚರಿತ್ರೆ ಹಾಗೂ ಮಹಾತ್ಮರ ಸ್ಮರಣೆ ಮೂಲಕ ಮಾನವನಲ್ಲಿ ಪರಮಾತ್ಮನ ಧ್ಯಾನದ ಅರಿವು ಮೂಡಿಸಿ, ಶಾಂತಿಯ ಮಾರ್ಗದರ್ಶನ ನೀಡಬಹುದು. ಸ್ವಯಂ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಸಾಧ್ಯ ಎಂದು ಹೇಳಿದರು. ಡಾ. ಮಂಜುಷಾ ಪಾಟೀಲ, ಅಪ್ಪು ಶೆಟ್ಟಿ ಹಾಗೂ ಭಾಗ್ಯಶ್ರೀ ಅಕ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಂತರ ಸಹೋದರ-ಸಹೋದರಿಯರು ಪ್ರಸಾದ ಸ್ವೀಕರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 