ರೈಲ್ವೆ ಜನಪರ ಹೋರಾಟ ಸಮಿತಿ. ನಗರ ಪೊಲೀಸ್ ಠಾಣೆ ಎದುರಿಗೆ. ಹಸನ್ ರಸ್ತೆಕೊಪ್ಪಳ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಮತ್ತು ವಿವಿಧ ಬೇಡಿಕೆಗಳನ್ನು ಸಚಿವ ವಿ.ಸೋಮಣ್ಣ

ರೈಲ್ವೆ ಜನಪರ ಹೋರಾಟ ಸಮಿತಿ. ನಗರ ಪೊಲೀಸ್ ಠಾಣೆ ಎದುರಿಗೆ. ಹಸನ್ ರಸ್ತೆಕೊಪ್ಪಳ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಮತ್ತು ವಿವಿಧ  ಬೇಡಿಕೆಗಳನ್ನು ಸಚಿವ ವಿ.ಸೋಮಣ್ಣ Railway People's Protest Committee. Opposite City Police Station. Minister V. Somanna demands six tr

                ಕೊಪ್ಪಳ 05 : ರೈಲ್ವೆ ನಿಲ್ದಾಣದ ಮೂಲಕ ಬೆಂಗಳೂರಿಗೆ ಆರು ರೈಲುಗಳನ್ನು ಸೇರಿದಂತೆ ವಿವಿಧ  ಬೇಡಿಕೆಗಳನ್ನು ಸಚಿವ ವಿ. ಸೋಮಣ್ಣ ಅವರಿಗೆ 26 ಜನವರಿ 2026 ರೊಳಗೆ ಈಡೇರಿಸಲು ಸೋಮವಾರ ಗಡುವು ನೀಡಿ.ಮುಂದಿನ ದಿನಗಳಲ್ಲಿ ವಿವಿಧ ರೂಪದ ಹೋರಾಟಗಳನ್ನು ನಡೆಸಲಾಗುತ್ತದೆ ಎಂದು ರೈಲ್ವೆ ಜನಪರ ಹೋರಾಟ ಸಮಿತಿಯಿಂದ ಎಚ್ಚರಿಕೆಯ ಮನವಿ ಪತ್ರ ಸಲ್ಲಿಸಿದರು.   ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ವಕೀಲರ ಸಂಘಕ್ಕೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರೈಲ್ವೆ ಜನಪರ ಹೋರಾಟ ಸಮಿತಿಯಿಂದ ಸಲ್ಲಿಸಿದ ಮನವಿಯಲ್ಲಿ ಹುಬ್ಬಳ್ಳಿ ಬೆಂಗಳೂರು ವಾಯ ಹಾವೇರಿ ಮೂಲಕ ನಿತ್ಯ ಸಂಚರಿಸುವ ಅನೇಕ ರೈಲುಗಳಲ್ಲಿ ಕನಿಷ್ಠ ಆರು ರೈಲುಗಳನ್ನು ಹುಬ್ಬಳ್ಳಿ ವಯಾ ಕೊಪ್ಪಳ - ಹೊಸಪೇಟೆ ಮೂಲಕ ಬೆಂಗಳೂರಿಗೆ ಸಂಚರಿಸಲು ಕ್ರಮ ಕೈಗೊಳ್ಳಬೇಕು,

                  ಸಂಖ್ಯೆ : 56519/56520 ಬೆಂಗಳೂರು ಹೊಸಪೇಟೆ ಬೆಂಗಳೂರು ಈ ರೈಲನ್ನು ಹೊಸಪೇಟೆಯಿಂದ ಮುನಿರಾಬಾದ್ ಗಿಣಿಗೇರಾ ಕೊಪ್ಪಳ ಭಾಣಾಪುರ  ತಳಕಲ್ ಜಂಕ್ಷನ್ ಮೂಲಕ ಕುಕನೂರು ಯಲಬುರ್ಗಾ ಕುಷ್ಟಗಿವರೆಗೆ ವಿಸ್ತರಿಸಬೇಕು. ಹುಬ್ಬಳ್ಳಿಯಿಂದ ಬೀದರಿಗೆ ಇಂಟರ್ ಸಿಟಿ ರೈಲು ದ ವಾಯ :ಗದಗ. ಕೊಪ್ಪಳ. ಹೊಸಪೇಟೆ , ಬಳ್ಳಾರಿ. ಗುಂತಕಲ್‌.ಮಂತ್ರಾಲಯ ರೋಡ್‌. ರಾಯಚೂರು. ಯಾದಗಿರಿ. ಕಲಬುರ್ಗಿನ. ಮಾರ್ಗವಾಗಿ ನಿತ್ಯ ಬೀದರಿಗೆ ಹೊಸ ರೈಲು ಪ್ರಾರಂಭಿಸುವುದರಿಂದ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಸಂಪರ್ಕಕ್ಕೆ ಏಕೈಕ ರೈಲಾಗಿ ಜನರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ.ನಿತ್ಯ ಬೆಳಿಗ್ಗೆ 8.30 ಕ್ಕೆ ಬಳ್ಳಾರಿಯಿಂದ ಹುಬ್ಬಳ್ಳಿಗೆ. ಮಧ್ಯಾಹ್ನ  2:30ಕ್ಕೆ ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊಸದಾಗಿ ಡೆಮೋ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕು.ಸಂಖ್ಯೆಃ 16545/16546 ಯಶವಂತಪುರದಿಂದ ಸಿಂಧನೂರು.

                ಸಿಂಧನೂರುದಿಂದ ಯಶವಂತಪುರ ತಲುಪಲು ಹದಿನೈದು ತಾಸು ತೆಗೆದುಕೊಳ್ಳುತ್ತಿದ್ದು ಅದನ್ನು ಹತ್ತು ತಾಸಿಗೆ ಇಳಿಸಬೇಕು.ಈ ರೈಲು ಗಿಣಿಗೇರಾ ರೈಲ್ವೆ ನಿಲ್ದಾಣದಿಂದ 10 ಕಿ.ಮೀ ಅಂತರದಲ್ಲಿರುವ ಜಿಲ್ಲಾ ಕೇಂದ್ರ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗಬೇಕು.2016ರಲ್ಲಿ ದಆಲಮಟ್ಟಿ. ಕೊಪ್ಪಳ. ಚಿತ್ರದುರ್ಗ.ನ ಈ ಹೊಸ ಮಾರ್ಗ ಸರ್ವೇ ಆಗಿದ್ದು, ಈ ವರ್ಷದ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸಿದರೆ. ಬಿಜಾಪುರದಿಂದ ಬೆಂಗಳೂರಿಗೆ ಮಧ್ಯ ಕರ್ನಾಟಕ ನೇರ ಸಂಪರ್ಕ ರೈಲ್ವೆ ಮಾರ್ಗ ವಾಗುತ್ತದೆ. ನೈಋತ್ಯ ವಲಯದ ಗದಗ ವಾಡಿ ರೈಲು ಮಾರ್ಗ ಯೋಜನೆ ಕುಷ್ಟಗಿ ರೈಲ್ವೆ ನಿಲ್ದಾಣದಿಂದ ಜುಮ್ಲಾಪುರ ವರಿಗೆ 30 ಕಿಲೋಮೀಟರ್ ಹೊಸ ಬ್ರಾಡ್ ಗೇಜ್ ಕಾಮಗಾರಿ 2026ರ ಡಿಸೆಂಬರ್ ವೇಳೆಗೆ ಅಂತಿಮ ಗೊಳ್ಳುವ ಸಾಧ್ಯತೆಗಳಿವೆ.

                   ಕುಷ್ಟಗಿ ಜುಮ್ಲಾಪೂರ ರೈಲ್ವೆ ಕಾಮಗಾರಿ ಪ್ರಗತಿಯಲ್ಲಿದ್ದು ಜುಮ್ಲಾಪೂರ ಗುರುಗುಂಟ ರೈಲು ಮಾರ್ಗ ನಿರ್ಮಾಣ ಟೆಂಡರ್ ಒಂದೇ ಪ್ಯಾಕೇಜ್ ಅಡಿಯಲ್ಲಿ ಕರೆಯಲಾಗಿದ್ದು ಕುಷ್ಟಗಿ ಜುಮ್ಲಾಪೂರ ರೈಲ್ವೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು.ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕೆಲಸದ ವೇಗವನ್ನು ಹೆಚ್ಚಿಸಲು ಆದೇಶಿಸಬೇಕು.   ಗಿಣಿಗೇರಾ ್ಷ ರಾಯಚೂರು  ರೈಲ್ವೆ ಕಾಮಗಾರಿಯನ್ನು ಗಿಣಿಗೇರಾ ್ಷ ಸಿಂಧನೂರು ವರೆಗೆ ಪೂರ್ಣಗೊಂಡಿದೆ. ಸಿಂಧನೂರು ನಿಂದ ರಾಯಚೂರು ವರೆಗೆ 81 ಕಿಲೋಮೀಟರ್ ಕಾಮಗಾರಿಯಲ್ಲಿ ಸಿಂಧನೂರು ನಿಂದ 20 ಕಿಲೋಮೀಟರ್  ಹಿರೇಕೊಟ್ನೆಕಲ್ ವರೆಗೆ ಕಾಮಗಾರಿ ಪ್ರಗತಿಯಲ್ಲಿದೆ.ಈ ಮಾರ್ಗ ರಾಯಚೂರು ವರೆಗೆ ಎರಡು ಕಡೆಯಿಂದ ಪೂರ್ಣ ಪ್ರಮಾಣದ ಟೆಂಡರ್ ಮಾಡಿ ಆದಷ್ಟು ಬೇಗನೆ ಕೆಲಸ ಮುಗಿಸಬೇಕು. 

                   ಈ ಮೊದಲಿದ್ದ ಸಂಖ್ಯೆ 0 7 3 3 5 / 0 7 3 3 6 ಬೆಳಗಾವಿಯಿಂದ ವಾಯ ಹುಬ್ಬಳ್ಳಿ. ಕೊಪ್ಪಳ. ಹೊಸಪೇಟೆ ಮೂಲಕ ಹೈದರಾಬಾದ (ಮಣಗೂರು) ರೈಲನ್ನು ತಕ್ಷಣ ಪುನರಾರಂಭಿಸಬೇಕು ಮತ್ತು ಬಿಜಾಪುರ ದಿಂದ ತಿರುಪತಿಗೆ ಹೊಸ ರೈಲನ್ನು ಪ್ರಾರಂಭಿಸಬೇಕು.ಸಂಖ್ಯೆ 11415/ 11416 ದಸೋಲ್ಲಾಪುರ ಹೊಸಪೇಟೆ. ಸೋಲ್ಲಾಪುರ. ನಡೆಮೋ ಎಕ್ಸ್‌ ಪ್ರೆಸ್ ರೈಲು ಮತ್ತು ಸಂಖ್ಯೆ 17329 / 17330ದಹುಬ್ಬಳ್ಳಿ. ವಿಜಯವಾಡ.ಹುಬ್ಬಳ್ಳಿನ ಎಕ್ಸ್‌ ಪ್ರೆಸ್ ರೈಲು ಈ ಎರಡು  ರೈಲುಗಳು ಕೋವಿಡ್ ಕಿಂತ ಮುಂಚೆ ಪ್ಯಾಸೆಂಜರ್ ರೈಲು ಆಗಿತ್ತು. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿತ್ತು. ಬಳಿಕ ಎಕ್ಸ್‌ ಪ್ರೆಸ್ ಆಗಿದ್ದರಿಂದ ಜನರಿಗೆ ಮೂರು ಪಟ್ಟುಗಿಂತಲೂ ಹೆಚ್ಚು ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಾಗಿದೆ,

                    ಇವುಗಳನ್ನು ತಕ್ಷಣ ಪ್ಯಾಸೆಂಜರ್ ರೈಲುಗಳಾಗಿ ಮೊದಲಿನ ದರದಲ್ಲಿ ಟಿಕೆಟ್ ಗಳನ್ನು ನಿಗದಿಪಡಿಸಬೇಕು. ಕೊಪ್ಪಳ ನಗರದ ಸ್ವಾಮಿ ವಿವೇಕಾನಂದ ಶಾಲೆ ಬಳಿಯ ಗೇಟ್ ಸಂಖ್ಯೆ 63 ರ ಕೆಳ ಕಿರು ಸೇತುವೆ ಅರೆಬರೆ ಕಾಮಗಾರಿಯಾಗಿದ್ದು.ಪೂರ್ಣಪ್ರಮಾಣದ ಶಾಶ್ವತ ರಸ್ತೆ ನಿರ್ಮಿಸಿ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.ಕೊಪ್ಪಳ ಹತ್ತಿರ ಗೇಟ್ ಸಂಖ್ಯೆ 66 ಮತ್ತು ಗೇಟ್ ಸಂಖ್ಯೆ 68ರ ನಡುವೆ ಸಿದ್ದೇಶ್ವರ ನಗರ, ಬೇಲ್ದಾರ್ ಕಾಲೋನಿ ಮತ್ತು ಹೊಸ ಲೇಓಟ್ ಗಳು ನಿರ್ಮಾಣಗೊಳ್ಳುತ್ತಿವೆ ಮುಖ್ಯ ರಸ್ತೆಯ ಎಂ.ಆರ್‌.ಎಫ್‌. ಟೈಯರ್ ಶೋರೂಮನ ಪಕ್ಕದ ರಸ್ತೆ ಮುಖಾಂತರ ಹೊಸ ಕೆಳ ಕಿರು ಸೇತುವೆ ನಿರ್ಮಿಸಬೇಕು. ಅಮೃತ್ ಭಾರತ ಯೋಜನೆ ಅಡಿ ಕೊಪ್ಪಳ ಜಿಲ್ಲಾ ಕೇಂದ್ರದ ರೈಲ್ವೆ ನಿಲ್ದಾಣ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಅಲ್ಲಲ್ಲಿ ಕಳಪೆಯಾಗಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಮೊದಲಿದ್ದಂತೆ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಗಳನ್ನು ಪುನಃ ವಿತರಣೆ ಪ್ರಾರಂಭಿಸಬೇಕು.

                   ಮೂಲ ಸೌಕರ್ಯಗಳಾದ ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಸಮಯ ಹೆಚ್ಚಿಸಿ ಅಂದರೆ ಮೊದಲಿನಂತೆ ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಸಮಯ ವಿಸ್ತರಿಸಬೇಕು.ರಾತ್ರಿ 9 ಗಂಟೆಯಿಂದ ವಿಜಯವಾಡ ತಿರುಪತಿ. ನಿಜಾಮುದ್ದೀನ ಸಂಪರ್ಕ ಕ್ರಾಂತಿ.ಹೊಸಪೇಟೆ ಸೋಲಾಪುರ.ಅಜ್ಮೀರ್ ಜೋಧಪುರ. ಕೋಲಾಪುರ ತಿರುಪತಿ ಕೋಲಾಪುರ ಟಿಕೆಟ್ ಪರೀಕ್ಷಕರು ಇರುತ್ತಿಲ್ಲ ನೇಮಕ ಮಾಡಬೇಕು. ಸಿಂಧನೂರು ದಿಂದ ಹುಬ್ಬಳ್ಳಿಗೆ ಎರಡು ನೂರು ಕಿಲೋಮೀಟರ್ ಇರುವುದರಿಂದ ಇಲ್ಲಿ ಕೇವಲ ಬೋಗಿಗಳಲ್ಲಿ ಕುರ್ಚಿಗಳು ಅಷ್ಟೇ ಇದ್ದು. ಪ್ರಯಾಣಿಕರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದ ಡೆಮೋ ರೈಲು ಮತ್ತು ಮೆಮೊ ರೈಲು ಬದಲಿಗೆ ಮೊದಲಿದ್ದ ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಅಗತ್ಯ ಇರುವ ಎರಡು ಶಿಫ್ಟ್‌ ಸಿಬ್ಬಂದಿಯನ್ನು ನೇಮಿಸಬೇಕು. ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರು ಯೋಗ್ಯ ಇಲ್ಲ, ಆದ್ದರಿಂದ ರೈಲ್ವೆ ನಿಲ್ದಾಣದ ವಸತಿ ಗೃಹಗಳಿಗೆ ಮತ್ತು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೊಪ್ಪಳ ನಗರಸಭೆಯಿಂದ ತುಂಗಭದ್ರಾ ನದಿಯ ಸಿಹಿ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ವಿವಿಧ ವಾಹನಗಳ ಸುರಕ್ಷಿತ ಪಾರ್ಕಿಂಗ್ ವ್ಯವಸ್ಥೆ ಮತ್ತು ಮಾದರಿ ಶಾಶ್ವತ ಆಟೋ ನಿಲ್ದಾಣ ನಿರ್ಮಿಸಿ ಕೊಡಬೇಕು.

                  ದುಡಿಯುವ ಜನರ ಅನುಕೂಲಕ್ಕಾಗಿ ಎಲ್ಲಾ   ರೈಲುಗಳಲ್ಲೂ ಮುಂಭಾಗದಲ್ಲಿ ನಾಲ್ಕು ಸಾಮಾನ್ಯ ಬೋಗಿಗಳನ್ನು ಮತ್ತು ಹಿಂಭಾಗದಲ್ಲಿ ನಾಲ್ಕು ಸಾಮಾನ್ಯ ಬೋಗಿಗಳನ್ನು ಅಳವಡಿಸುವುದು ಸೇರಿದಂತೆ ಈ ಹಿಂದೆ ಸಲ್ಲಿಸಿದ ಎಲ್ಲಾ ಬೇಡಿಕೆಗಳನ್ನು 26 ಜನವರಿ 2026 ರೊಳಗೆ ಈಡೇರಿಸಬೇಕು ಇಲ್ಲದಿದ್ದರೆ ವಿವಿಧ ರೂಪದ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆಯ ಮನವಿ ಪತ್ರ ಸಲ್ಲಿಸಿದರು.    ಈ ಸಂದರ್ಭದಲ್ಲಿ ರೈಲ್ವೆ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಸ್‌.ಎ.ಗಫಾರ್‌. ಪ್ರಧಾನ ಕಾರ್ಯದರ್ಶಿ ಮಖಬೂಲ್ ರಾಯಚೂರು. ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್‌. ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ತುಕಾರಾಮ್ ಪಾತ್ರೋಟಿ.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ. ಉಪಾಧ್ಯಕ್ಷ ಬಸವರಾಜ ಸಜ್ಜನ್‌.ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಾದಿಮನಿ.ವಕೀಲರಾದ ಬಸವರಾಜ್ ಗಡಾದ್‌.ಗುರುಬಸವರಾಜ್ ಬಿ. ಹಳ್ಳಿಕೇರಿ.ಬಸವರಾಜ್ ಎಮ್‌.ಜಂಗ್ಲಿ. ಲಂಕೇಶ್ ಡೊಳ್ಳಿನ್‌. ರಾಜಾ ಸಾಹೇಬ್ ಹೆಚ್‌.ಬೆಳಗುರ್ಕಿ.ಆದಿತ್ಯ ಟಿ.ಪಾತ್ರೋಟಿ ಮುಂತಾದವರು ಉಪಸ್ಥಿತರಿದ್ದರು.