ಇಂದಿನಿಂದ ರಘುನಾಥ ಮಹಾರಾಜರ ಜಾತ್ರಾ ಮಹೋತ್ಸವ

 ಇಂದಿನಿಂದ ರಘುನಾಥ ಮಹಾರಾಜರ ಜಾತ್ರಾ ಮಹೋತ್ಸವ Raghunath Maharaja's fair festival begins today

ಲೋಕದರ್ಶನ ವರದಿ 

ಇಂದಿನಿಂದ ರಘುನಾಥ ಮಹಾರಾಜರ ಜಾತ್ರಾ ಮಹೋತ್ಸವ 

ಮಹಾಲಿಂಗಪುರ 23: ಸಮೀಪದ ಚಿಮ್ಮಡ ಗ್ರಾಮದ ರಘುನಾಥ ಪ್ರೀಯ ಸಾಧು ಮಹಾರಾಜರ ಜಾತ್ರಾ ಮಹೋತ್ಸವದ ನಿಮಿತ್ತ ಅ21 ಮಂಗಳವಾರದಿಂದ ಸತತ ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. 

ಮಂಗಳವಾರ ಮುಂಜಾನೆ 6 ಘಂ.ಗೆ ವಿಶೇಷ ಪೂಜೆಯೊಂದಿಗೆ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ. ಆ ನಿಮಿತ್ತ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೇವಾಕಾರ್ಯದ ನಿಮಿತ್ತ ಪ್ರತಿದಿನ ಶ್ರೀಮಠದಲ್ಲಿ ಮಹಾಪ್ರಸಾದ ನಡೆಯಲಿದೆ.  

ಸಂಗೀತ ಸಂಭ್ರಮ; ಮಂಗಳವಾರ ರಾತ್ರಿ 8 ಘಂಟೆಗೆ ಯಂಗ್ ಸ್ಟಾರ್ ಯುವ ಸಂಘಟಣೆಯ ಆಯೋಜನೆಯಲ್ಲಿ ಮ್ಯುಸಿಕ ಮೈಲಾರಿ, ದಿಯಾ ಹೆಗಡೆ ಸೇರಿದಂತೆ ವಿವಿಧ ಕಿರುತೆರೆ ನಟರ ನೇತ್ರತ್ವದಲ್ಲಿ ಸಂಗೀತ ಸಂಭ್ರಮ-2025 ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 

ಕಬ್ಬಡ್ಡಿ ಪಂದ್ಯಾವಳಿ; ಅ. 24 ರಿಂದ 26ರ ವರೆಗೆ ಸ್ಥಳಿಯ ಪಿಕೆಪಿಎಸ್ ಆವರಣದಲ್ಲಿ ಬಾಗಲಕೋಟ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಭೂಮಿಕಾ ಪ್ರೌಢಶಾಲೆ ಇವರ ಸಂಯುಕ್ತ ಆಶೃಯದಲ್ಲಿ ಬೆಳಗಾವಿ ವಿಭಾಗ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿವೆ. 

ಅಲ್ಲದೇ ಅ. 25, 26 ರಂದು ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಚಿಮ್ಮಡ ಕಬ್ಬಡ್ಡಿ ವೈಭವ 2025 ಮುಕ್ತ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯಲಿವೆ. ವಿಜೇತರಿಗೆ ಪ್ರಥಮ ಬಹುಮಾನ 50 ಸಾವಿರ, ದ್ವಿತೀಯ 35 ಸಾವಿರ, ತೃತೀಯ 25 ಸಾವಿರ, ಚತೂರ್ಥ 15 ಸಾವಿರ ಸೇರಿದಂತೆ ವಿವಿಧ ವಿಶೇಷ ಬಹುಮಾನಗಳನ್ನು ನೀಡುವುದಾಗಿ ಆಯೋಜಕರು ತಿಳಿಸಿದ್ದಾರೆ. 

ಅ. 26 ರವಿವಾರ ಸಂಜೆ 5 ಘಂ.ಗೆ ನಡೆಯುವ ರಘುನಾಥ ಪ್ರೀಯ ಸಾಧು ಮಹಾರಾಜರ ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಗ್ರಾಮದ ತುಂಬ ಸಂಚರಿಸಲಿದೆ. ಮಹಾರಾಷ್ಟ್ರದ ಭಕ್ತವೃಂದದಿಂದ ಪಾರಾಯಣ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಶ್ರೀ ಮಠದ ತೀರ್ಥ ಬಾವಿಯ ನೀರಿನಲ್ಲಿಯೂ ರಥ ಎಳೆಯುವ ಕಾರ್ಯಕ್ರಮ ಜರುಗಲಿದೆ ಎಂದು ಜನಾರ್ಧನ ಮಹಾರಾಜರು ತಿಳಿಸಿದ್ದಾರೆ. 

ಸಾಂಸ್ಕ್ರತಿಕ ಉತ್ಸವ; ಅರುಣೋದಯ ಗ್ರಾಮಿನಾಭಿವೃದ್ದಿ ಸಂಸ್ಥೆಯಿಂದ ಜಾತ್ರೆಯ ನಿಮಿತ್ಯ ಜನಪ್ರೀಯ ಕಿರುತೆರೆ ಹಾಗೂ ಯೂಟ್ಯುಬ್ ಸ್ಟಾರ ಕಲಾವಿದರಾದ ಪರಸು ಕೋಲೂರ, ಝೀ ಕನ್ನಡ ವಾಹಿನಿಯ ಕಾಮಿಡಿ ಕಿಳಾಡಿಗಳು ಖ್ಯಾತಿಯ ನಯನಾ, ಅಪ್ಪಣ್ಣ ರಾಮದುರ್ಗ, ಜನಪದ ಗಾಯಕ ಸಿದ್ದಪ್ಪ ಬಿದರಿ, ಸುರೇಶ ಇಂಚಗೇರಿ, ಕಲರ್ಸ ಕನ್ನಡದ ಸುಶ್ಮಿತಾ ಬೆಂಗಳೂರು, ಬೆಳಗಾವಿ ಡಾನ್ಸ ಗ್ರುಪ್‌ನಿಂದ ಅರುಣೋದಯ ಸಂಸ್ಕೃತಿಕ ಉತ್ಸವ ಕಾರ್ಯಕ್ರಮ ನಡೆಯಲಿದೆ.  

ಗುರುವಾರ ಮುಂಜಾನೆ 9 ಗಂಟೆಗೆ ಜೈ ಹನುಮಾನ ಶಾಲೆಯ ಆವರಣದಲ್ಲಿ ಸಂಗ್ರಾಮ ಕಲ್ಲು ನೆಟ್ಟಗೆ ಎತ್ತುವ ಸ್ಪರ್ದೆ ನಡೆಯಲಿದ್ದು ವಿಜೇತ ನಾಲ್ವರು ಸ್ಪರ್ದಿಗಳಿಗೆ ಆಕರ್ಷಕ ಬಹುಮಾನ ಆಯೋಜಿಸಲಾಗಿದೆ. 

ಅಂತರಾಷ್ಟ್ರೀಯ ಜಂಗೀ ನಿಕಾಲಿ ಕುಸ್ತಿಗಳು; ಸೋಮವಾರ ಮದ್ಯಾಹ್ನ 3 ಘಂ.ಗೆ ಜೈ ಹಣುಮಾನ ಕ್ರೀಢಾವ್ಯಾಯಾಮ ಶಾಲೆಯ ನೇತ್ರತ್ವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ವಿವಿಧ ಪೈಲವಾನರಿಂದ ಜಂಗೀ ನಿಕಾಲಿ ಕುಸ್ತಿಗಳು ನಡೆಯಲಿವೆ ಈ ಎಲ್ಲ ಕಾರ್ಯಕ್ರಮಗಳ ಸಾನಿಧ್ಯವನ್ನು ಸ್ಥಳೀಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಜನಾರ್ಧನ ಮಹಾರಾಜರು ವಹಿಸಲಿದ್ದಾರೆ,