ರಾಘವೇಂದ್ರ ಸ್ವಾಮಿಗಳ 315ನೇ ಆರಾಧನಾ ಮಹೋತ್ಸವ: ಅದ್ಧೂರಿ ಮಹಾರಥೋತ್ಸವ
Raghavendra Swamy's 315th Aradhana Mahotsava: Grand Chariot Procession
ಲೋಕದರ್ಶನ ವರದಿ
ಹಾವೇರಿ 01: ಸೋಮವಾರ ನಗರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 315ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವವು ವಿವಿಧ ವಾದ್ಯ ವೈಭವಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಕಳೆದ ಮೂರು ದಿನಗಳಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನಡೆದವು. ಸೋಮವಾರ ಬೆಳಗ್ಗೆಯಿಂದ ಕಾಲ ಪಂಚಾಮೃತ ಅಭಿಷೇಕ, ಶ್ರೀ ವೇದವ್ಯಾಸ ಮಂತ್ರ ಹೋಮ, ಅಷ್ಟೋತ್ತರ ಗುರುಸ್ತುತಿ ಪಾರಾಯಣ, ಸ್ವಾಮಿಗಳಿಗೆ ಅಲಂಕಾರ ಹಾಗೂ ಹೋಮ-ಹವನಗಳು ನೆರವೇರಿದವು. ಬಳಿಕ ಹಸ್ತೋದಕ ಹಾಗೂ ನೈವೇದ್ಯ ಸಮರ್ಿಸಲಾಯಿತು.
ನಂತರ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಶ್ರೀಮಠದಿಂದ ವಾದ್ಯ ವೈಭವ ಹಾಗೂ ಭಜನಾ ತಂಡಗಳೊಂದಿಗೆ ಆರಂಭವಾದ ರಥೋತ್ಸವವು ಅಗ್ರಹಾರ ರಸ್ತೆ, ಎಂಜಿ ರಸ್ತೆ, ನಗರಸಭೆ ಮುಂಭಾಗ, ಎಂಎಂ ವೃತ್ತ, ಪಿಬಿ ರಸ್ತೆ ಹಾಗೂ ತೇರುಬೀದಿ ಮೂಲಕ ಆಂಜನೇಯಸ್ವಾಮಿ ದೇವಸ್ಥಾನ ತಲುಪಿತು. ಅಲ್ಲಿ ಪೂಜಾ ವಿಧಿವಿಧಾನಗಳು ಹಾಗೂ ಮಂಗಳಾರತಿ ನೆರವೇರಿದ ಬಳಿಕ ರಾಮದೇವ ಗುಡಿ ಮೂಲಕ ಶ್ರೀಮಠಕ್ಕೆ ರಥ ಮರಳಿತು.
ರಥೋತ್ಸವದಲ್ಲಿ ಭಕ್ತರು ಭಜನೆ, ಮಂತ್ರಘೋಷ ಹಾಗೂ ಜಯಘೋಷಗಳೊಂದಿಗೆ ಪಾಲ್ಗೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪುನೀತರಾದರು.
ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಠದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಅನ್ನಪೂರ್ಣೇಶ್ವರಿ ಪೂಜೆ ನೆರವೇರಿಸಿ ಮಹಾಪ್ರಸಾದ ವಿತರಿಸಲಾಯಿತು. ಸಂಜೆ ಸವತೋಭದ್ರ ಮಂಡಲ ಪೂಜೆ, ಆಶ್ಲೇಷಾ ಬಲಿ ಪೂಜೆ, ಪಲ್ಲಕ್ಕಿ ಸೇವೆ, ಅಷ್ಟಾವಧಾನ ಹಾಗೂ ಮಹಾ ಮಂಗಳಾರತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆದವು.
ಮಹಾರಥೋತ್ಸವದಲ್ಲಿ ವೈದ್ಯ ಫ್ಯಾಮಿಲಿ ಟ್ರಸ್ಟ್ ಹಾವೇರಿಯ ಧರ್ಮದರ್ಶಿ ಹರಿಕೃಷ್ಣ ಭಟ್, ವೈದ್ಯ ಬಂಧುಗಳು, ಬ್ರಾಹ್ಮಣ ಸಮಾಜದ ಮುಖಂಡರು ಸೇರಿದಂತೆ ಗುರು ರಾಘವೇಂದ್ರ ಸ್ವಾಮಿಗಳ ನೂರಾರು ಭಕ್ತರು ಭಾಗವಹಿಸಿ ರಥೋತ್ಸವಕ್ಕೆ ಸಾಕ್ಷಿಯಾದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 