ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಕಾರ್ಯಕ್ರಮ

ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಕಾರ್ಯಕ್ರಮ Raghavendra Swami's worship festival program

ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಕಾರ್ಯಕ್ರಮ

ಅಥಣಿ, 11 ; ರಾಯರ ಮಠದಲ್ಲಿ ಸಾವಿರಾರು ಭಕ್ತರಿಗೆ ಅನ್ನ, ಪ್ರಸಾದ. ಅಥಣಿ. ಅಥಣಿಯ ಶ್ರೀ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ನಿಮಿತ್ಯ ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜೊತೆಗೆ ಸಾವಿರಾರು ಭಕ್ತರಿಗೆ ಅನ್ನ, ಪ್ರಸಾದ ವಿತರಿಸಲಾಯಿತು.            ಗುರು ರಾಘವೇಂದ್ರರು ವೃಂದಾವನಸ್ಥರಾಗಿರುವ ಈ ದಿನ ಮುಂಜಾನೆ ಸುಪ್ರಭಾತ, ಗೀತ ಸೇವೆ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಪೂಜೆ ಹಾಗೂ ಪುರಾಣ ಮತ್ತು ಶ್ರೀ ರಾಯರ ಸ್ತೋತ್ರದ ಅರ್ಥಾನುಸಾರ ಜರುಗಿತು. ಸಂಜೆ ಪಲ್ಲಕ್ಕಿ ಸೇವೆಯೊಂದಿಗೆ ಉತ್ಸವ ಮೂರ್ತಿಯನ್ನು ಚಿಕ್ಕ ರಥದಲ್ಲಿ ಸ್ಥಾಪಿಸಿ ರಥೋತ್ಸವ ಮಾಡಲಾಯಿತು.     

     ಶ್ರೀಮಠಕ್ಕೆ ಆಗಮಿಸಿದ ಸಾವಿರಾರು ಭಕ್ತರು ಯಾವುದೇ ಭೇದ, ಭಾವ ಇಲ್ಲದೆ ಒಂದೇ ಸಾಲಿನಲ್ಲಿ ಕೂತು ಮೃಷ್ಠಾನ್ನ ಭೋಜನ ಸವಿದರು. ಪ್ರಸಾದ ಸ್ವೀಕರಿಸಲು ಆಗಮಿಸಿದ ಭಕ್ತಾದಿಗಳಿಗೆ ನೂರಾರು ಸ್ವಯಂ ಸೇವಕರು ಭಕ್ತಿಯಿಂದ ಉಣ ಬಡಿಸಿ ಧನ್ಯತೆ ಮೆರೆದರು. ಆರಾಧನಾ ಮಹೋತ್ಸವಕ್ಕೆ ಅಥಣಿ ಮೂಲದ ನೂರಾರು ಯುವಕರು ಉದ್ಯೋಗಕ್ಕಾಗಿ ಬೇರೆ ಬೇರೆ ರಾಜ್ಯ ಹಾಗೂ ಸ್ಥಳಗಳಿಂದ ಸುಮಾರ ಐವತ್ತು ವರ್ಷಗಳಿಂದಲೂ ಈ ಮೂರು ದಿನ ದಿನ ಅಥಣಿಗೆ ಆಗಮಿಸಿ ಭಕ್ತಿಯಿಂದ ಗುರು ರಾಯರ ಸೇವೆಯಲ್ಲಿ ತೊಡಗುವುದು ಕೂಡ ವಿಶೇಷವಾಗಿದೆ.     

     ಈ ಸಂದರ್ಭದಲ್ಲಿ ಆದಿತ್ಯ  ಮಾಶಾಳ, ಗೀರೀಶ ಕುಲಕರ್ಣಿ, ಸಚೀನ್ ಕುಲ ಕುಲಕರ್ಣಿ, ಅನಂತ ಕುಲಕರ್ಣಿ, ಯೋಗೇಶ್ ಕುಲಕರ್ಣಿ, ಸಂದೇಶ ಕುಲಕರ್ಣಿ, ಪ್ರಸಾದ ಜೇರೆ, ವಿಠ್ಠಲ ಕುಲಕರ್ಣಿ, ಬಾಬು ಕುಲಕರ್ಣಿ, ಬದರೀಶ ಜೋಶಿ, ರೋಹಿತ ಹೆರಕಲ್, ಮಂದಾರ ಶಾಸ್ತ್ರಿ, ಬದರೀಶ ಹುಕ್ಕೇರಿ, ಜಗದೀಶ ಕುಲಕರ್ಣಿ, ಪ್ರಾಶಾಂತ ಜೋಶಿ, ರಾಮಚಂದ್ರ ಚಿಮ್ಮಲಗಿ, ಸಂಜೀವ ಓಂಕಾರ, ರಾಜು ಇನಾಮದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.