ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಪನ್ನ

ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಪನ್ನ  Raghavendra Swami's worship festival is complete


ತಾಳಿಕೋಟಿ 02: ಸ್ಥಳೀಯ ನಗರೇಶ್ವರ ದೇವಸ್ಥಾನದ ಗುರುರಾಜ ಭಜನಾ ಮಂಡಳಿ ವತಿಯಿಂದ ನಗರೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ರಾಘವೇಂದ್ರ ಸ್ವಾಮಿಗಳ 52ನೆಯ ವರ್ಷದ ಆರಾಧನಾ ಮಹೋತ್ಸವವು ಉತ್ತರಾಧನೆಯೊಂದಿಗೆ ಭಕ್ತಿ ಶ್ರದ್ಧೆಗಳಿಂದ ಸೋಮವಾರ ಸಂಪನ್ನವಾಯಿತು. 

ಮೂರು ದಿನಗಳ ಕಾಲ ಸುಪ್ರಭಾತ, ನಗರೇಶ್ವರ ರುದ್ರಾಭಿಷೇಕ, ಅಲಂಕಾರ ಅರ್ಚನೆ. ಗುರುರಾಯರ ಪಂಚಾಮೃತ ಅಭಿಷೇಕ ಗುರುರಾಯರ ಅಷ್ಟೋತ್ತರ, ನವಗ್ರಹ ಹೋಮ, ಕನಕಾಭಿಷೇಕ, ತುಳಸಿ ಅರ್ಚನೆ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ,ಪ್ರಸಾದ ತಾರತಮ್ಯ ಭಜನೆಯೊಂದಿಗೆ ಪಲ್ಲಕ್ಕಿ ಸೇವೆ ಮಂತ್ರಪುಷ್ಪ ಜರುಗಿದವು.

ಉತ್ತರಾಧನೆಯಂದು ಸಂಜೆ ರಾಜೇಂದ್ರಸಿಂಗ್ ಭಾತಕಂಡೆ ಧಾರವಾಡ ಅವರಿಂದ ತಯಾರಿಸಲ್ಪಟ್ಟ ರಥದಲ್ಲಿ ಶ್ರೀಗುರು ಸಾರ್ವಭೌಮರ ಭಾವಚಿತ್ರ ಮೆರವಣಿಗೆಯು ನಗರೇಶ್ವರ ದೇವಾಲಯದಿಂದ ಸಕಲ ಸನ್ಮಂಗಳ ವಾದ್ಯ ವೈಭವದೊಂದಿಗೆ ವಿಠ್ಠಲಮಂದಿರದವರೆಗೆ ಹೋಗಿ ಮರಳಿತು. ವಾಸವಿ ಮಹಿಳಾ ಮಂಡಳದವರಿಂದ ಕೋಲಾಟ, ರಾತ್ರಿ ತಾರತಮ್ಯ ಭಜನೆ ಹಾಗೂ ಸಂಗೀತ ಕಾರ್ಯಕ್ರಮ ಜರುಗಿದವು.  

ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿ ವೃಂದದಿಂದ ಮೂರುದಿನಗಳ ಕಾಲ ಗುರುರಾಜರ ಕುರಿತು ಸುಪ್ರಭಾತ ಹಾಗೂ ಕವನಗಳನ್ನು ಹಾಡಿದರು.  ಭಕ್ತಾದಿಗಳಿಗೆ ಮೂರು ದಿನಗಳ ಕಾಲ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶ್ರೀಧರಭಟ್ಟ ಜೋಶಿ, ವಸಂತಭಟ್ಟ ಜೋಶಿ, ವೆಂಕಟೇಶ ಆಚಾರ ಗ್ರಾಮಪುರೋಹಿತ, ಶ್ರೀಧರಆಚಾರ ಗ್ರಾಮಪುರೋಹಿತ, ಲಿಂಗೋಜಿರಾವ್ ಕುಲಕರ್ಣಿ, ಅಕ್ಷಯ ಜೋಶಿ, ಅಭಿಷೇಕ ಜೋಶಿ, ಸಂಜೀವಾಚಾರ, ಪ್ರತೀಕ ಕುಲಕರ್ಣಿ, ಭೀಮರಾವ ಕುಲಕರ್ಣಿ ಮೊದಲಾದವರು ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.  

ಸಮಾಜದ ಪ್ರಮುಖರಾದ ಡಾ.ಎನ್‌.ಎಲ್‌.ಶೆಟ್ಟಿ, ದತ್ತಣ್ಣ ಹೆಬಸೂರ, ರವಿ ತಾಳಪಲ್ಲೆ, ವಾಸುದೆವ ಹೆಬಸೂರ, ಭೀಮಯ್ಯ ತಾಳಪಲ್ಲೆ, ಪ್ರಶಾಂತ ಜನಾದ್ರಿ, ಮಂಜುನಾಥ ಶೆಟ್ಟಿ, ಭೀಮಣ್ಣ ಅಗಡಿ, ಸತ್ಯನಾರಾಯಣ ತಾಳಪಲ್ಲೆ, ವಿನಯ ಶೆಟ್ಟಿ, ಅಶೋಕ ಶೆಟ್ಟಿ, ಗೋವಿಂದ ಶೆಟ್ಟಿ, ಅರುಣ ಕನಕಗಿರಿ, ಪ್ರಹ್ಲಾದ ಮಾನ್ವಿ, ಮಲ್ಲಯ್ಯ ಗೊಟಗುಣಕಿ, ವಿದ್ಯಾಧರ ಗೊಟಗುಣಕಿ, ಕೃಷ್ಣಾ ತಾಳಪಲ್ಲೆ , ಗುರುರಾಜ ಅಗಡಿ, ನಾಗು ಮಾನ್ವಿ, ವಾಸು ಮಾನ್ವಿ, ಕುಶಾಲ ಹೆಬಸೂರ, ಪವನಶೆಟ್ಟಿ, ಸೇರಿದಂತೆ ಗುರುರಾಜ ಭಜನಾ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು ಮಹಿಳಾ ಮಂಡಳಿಯವರು ಪಾಲ್ಗೊಂಡಿದ್ದರು.