ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ: ಸಾಂಸ್ಕೃತಿಕ ವಾಹಿನಿ ಲೋಕಾರ್ಪಣೆ
Raghavendra Swami's worship festival: Cultural channel launched
ಬೆಳಗಾವಿ 12: ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಯು ಟ್ಯೂಬ್ ಚಾನೆಲ್ ಲೋಕಾರೆ್ಣ ಸಮಾರಂಭ ಸೋಮವಾರ ಸಂಜೆ ಗುರುಪ್ರಸಾದ ಕಾಲೋನಿಯಲ್ಲಿ ನಡೆಯಿತು.
ಹಿರಿಯ ಸಾಹಿತಿ, ನಿರ್ದೇಶಕ ಶೀರೀಶ್ ಜೋಶಿ ಅವರ ಮನೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರ ಶ್ರೀಧರ ಕುಲಕರ್ಣಿ ಅವರು ಪರಿಮಳ ಸಾಂಸ್ಕೃತಿಕ ವಾಹಿನಿಯನ್ನು ಲೋಕಾರೆ್ಣಗೊಳಿಸಿದರು. ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ವಹಿಸಿದ್ದರು. ಒಳ್ಳೆಯ ಮಾಧ್ಯಮಗಳಿಗೆ ನೋಡುಗರ ಹಾಗೂ ಓದುಗರ ಕೊರತೆಯಾಗುವುದಿಲ್ಲ. ಹೆಚ್ಚು ಜನರನ್ನು ತಲುಪಬೇಕೆನ್ನುವ ಅಪೇಕ್ಷೆಗಿಂತ ಒಳ್ಳೆಯ ವಿಷಯ ನೀಡಬೇಕೆನ್ನುವ ಉದ್ದೇಶವಿಟ್ಟುಕೊಂಡು ನಡೆಸಿದರೆ ಎಲ್ಲ ಮಾಧ್ಯಮಗಳೂ ಯಶಸ್ವಿಯಾಗುತ್ತವೆ ಎಂದು ಎಂ.ಕೆ.ಹೆಗಡೆ ಹೇಳಿದರು.
ನಿವೃತ್ತ ಸಿವಿಲ್ ಇಂಜಿನಿಯರ್ ವಿಲಾಸ್ ಬೆಂಗೇರಿ ಅವರನ್ನು ಸತ್ಕರಿಸಲಾಯಿತು. ಶೀರೀಶ್ ಜೋಶಿ ಅವರು ಪರಿಮಳ ಸಾಂಸ್ಕೃತಿಕ ವಾಹಿನಿಯ ಉದ್ದೇಶವನ್ನು ಪ್ರಾಸ್ತಾವಿಕವಾಗಿ ತಿಳಿಸಿದರು. ಶರಣಯ್ಯ ಮಠಪತಿ ನಿರೂಪಿಸಿದರು. ಮಂಜುಳಾ ಜೋಶಿ, ರಮೇಶ ಮಿರ್ಜಿ, ಎ.ಎಂ. ಜಯಶ್ರೀ, ಶ್ರದ್ಧಾ ಪಾಟೀಲ, ರಾಜಕುಮಾರ ಕುಂಬಾರ, ಶ್ರೀನಾಥ ಜೋಶಿ, ಶುಭಾ ಜೋಶಿ, ಪಿ.ಜಿ. ಕೆಂಪಣ್ಣವರ್ ಮೊದಲಾದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 