ತಂಬಾಕು ಸೇವನೆ ತ್ಯಜಿಸಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ -ಡಾ ಗಡಾದ

ತಂಬಾಕು ಸೇವನೆ ತ್ಯಜಿಸಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ  -ಡಾ ಗಡಾದ  Quit tobacco use and join hands in building a healthy society - Dr. Gadda

ಗದಗ 11:  ತಂಬಾಕಿನಿಂದ ಕ್ಯಾನ್ಸರ್ ಹೃದಯ ಹಾಗೂ ಶ್ವಾಸ ಸಂಬಂಧಿ ಇತ್ಯಾದಿ ಅನೇಕ ಮಾರಣಾಂತಿಕ ರೋಗಗಳು ಬರುತ್ತವೆ ಆದ್ದರಿಂದ ಜನತೆ ಇಂದೇ ತಂಬಾಕು ಸೇವನೆ ತ್ಯಜಿಸಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್ ಗಡಾದ ಹೇಳಿದರು.  ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸಮೀಕ್ಷಾಧಿಕಾರಿಗಳ ಕಚೇರಿ , ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಗದಗ ತಾಲೂಕಾ-ಆರೋಗ್ಯ ಅಧಿಕಾರಿಗಳ  ಕಾರ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಗದಗ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಏರಿ​‍್ಡಸಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡಿದ ಡಾ ಗಡಾದ ಅವರು ತಂಬಾಕು ಸೇವನೆಯಿಂದ ಗಂಟಲು ಕ್ಯಾನ್ಸರ್, ದಂತಕ್ಷಯ, ಬಾಯಿ ಹುಣ್ಣು ಬಾಯಿ ಕ್ಯಾನ್ಸರ್ ಸೇರಿದಂತೆ ಅನೇಕ ಕ್ಯಾನ್ಸರ್ ಕಾಯಿಲೆಗಳು ಬರುತ್ತವೆ ಜೊತೆಗೆ ತಂಬಾಕಿನಲ್ಲಿರುವ ಸುಮಾರು ಆರು ಸಾವಿರ ರಾಸಾಯನಿಕಗಳು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಇಂದೆ ತಂಬಾಕು ಸೇವನೆ ನಿಲ್ಲಿಸಿ, ಜೀವನ ಆಯ್ದುಕೊಳ್ಳಿ ತಂಬಾಕನ್ನಲ್ಲ ಎಂದು ಹೇಳಿದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಗೋಪಾಲ ಸುರಪುರ ಅವರು ವಿಶ್ವ ತಂಬಾಕು ರಹಿತ ದಿನಾಚರಣೆಯ ಘೋಷವಾಕ್ಯವಾದ ಆಕರ್ಷಣೆಯನ್ನು ಅನಾವರಣಗೊಳಿಸುವುದು ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಎದುರಿಸುವುದು ಕುರಿತು ಮಾತನಾಡಿ ಪ್ರತಿಜ್ಞಾವಿಧಿ ಬೋಧಿಸಿದರು.